Online fraud : ನೀವು ಕೂಡಾ ಆನ್ಲೈನ್ ಫ್ರಾಡ್ ಗೆ ಒಳಗಾಗಿದ್ದರೆ ಹೀಗೆ ನಿಮ್ಮ ಹಣವನ್ನು ವಾಪಸ್ ಪಡೆಯಬಹುದು

ಆನ್‌ಲೈನ್ ವಂಚನೆಯಲ್ಲಿ ಹಣದ ಕಳ್ಳತನವು ತುಂಬಾ ಗಂಭೀರವಾಗಿದೆ. ಏಕೆಂದರೆ ಖಾತೆಯಿಂದ ಹಣ ಕಳ್ಳತನವಾದರೆ, ಮತ್ತೆ ಅದನ್ನು ಮರಳಿ ಪಡೆಯಲು ಯಾವುದೇ ಆಯ್ಕೆ ಇರುವುದಿಲ್ಲ.

Written by - Ranjitha R K | Last Updated : Oct 18, 2021, 01:36 PM IST
  • ಲಾಕ್‌ಡೌನ್‌ನಲ್ಲಿ ಸೈಬರ್ ಅಪರಾಧ ಹೆಚ್ಚಾಗಿದೆ
  • ಏನು ಹೇಳುತ್ತದೆ ಆರ್‌ಬಿಐ ನಿಯಮ
  • ಕಳೆದುಕೊಂಡ ಹಣವನ್ನು ವಾಪಸ್ ಪಡೆಯುವುದು ಹೇಗೆ
Online fraud :  ನೀವು ಕೂಡಾ ಆನ್ಲೈನ್ ಫ್ರಾಡ್ ಗೆ ಒಳಗಾಗಿದ್ದರೆ ಹೀಗೆ ನಿಮ್ಮ ಹಣವನ್ನು ವಾಪಸ್ ಪಡೆಯಬಹುದು  title=
online fraud (file photo)

ನವದೆಹಲಿ : ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ವಂಚನೆ (Online fraud) ಪ್ರಕರಣಗಳ ಬಗ್ಗೆ ಪ್ರತಿದಿನ ಕೇಳಲಾಗುತ್ತದೆ. ಲಾಕ್‌ಡೌನ್ (Lockdown) ಸಮಯದಲ್ಲಿ, ಆನ್‌ಲೈನ್ ವಂಚನೆಯಂತಹ ಸೈಬರ್ ಅಪರಾಧ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಒಂದು ವರದಿಯ ಪ್ರಕಾರ, ಕಳೆದ 1 ವರ್ಷದಲ್ಲಿಯೇ  2.7 ಕೋಟಿಗೂ ಹೆಚ್ಚು ಜನರು ಸೈಬರ್ ವಂಚಕರ (Cyber crime) ಗುರಿಯಾಗಿದ್ದಾರೆ. 

ವೈಯಕ್ತಿಕ ಮಾಹಿತಿಯನ್ನು ಕದಿಯುವ ಮೂಲಕ ವಂಚನೆ : 
ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಹೊರತೆಗೆಯುವ ಮೂಲಕ ಸೈಬರ್ ಕಳ್ಳರು ಜನರ ಖಾತೆಯಿಂದ ಹಣವನ್ನು ನಿರ್ಭಯವಾಗಿ ಕದಿಯುತ್ತಿದ್ದಾರೆ. ಆನ್‌ಲೈನ್ ವಂಚನೆಯಲ್ಲಿ (online fraud) ಹಣದ ಕಳ್ಳತನವು ತುಂಬಾ ಗಂಭೀರವಾಗಿದೆ. ಏಕೆಂದರೆ ಖಾತೆಯಿಂದ ಹಣ ಕಳ್ಳತನವಾದರೆ, ಮತ್ತೆ ಅದನ್ನು ಮರಳಿ ಪಡೆಯಲು ಯಾವುದೇ ಆಯ್ಕೆ ಇರುವುದಿಲ್ಲ. ಆನ್ಲೈನ್ ​​ವಂಚನೆಗಳನ್ನು ತಪ್ಪಿಸಲು ನೀವು ಅನುಸರಿಸಬಹುದಾದ ಕೆಲವು ಸುಲಭ ಹಂತಗಳಿವೆ. ಇದಲ್ಲದೇ, ಒಂದು ವೇಳೆ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದರೂ, ಕಳೆದುಕೊಂಡ ಹಣವನ್ನು ಮತ್ತೆ ಪಡೆಯಬಹುದು. 

ಇದನ್ನೂ ಓದಿ: HOME LOAN LATEST - ಕನಸಿನ ಮನೆ ಖರೀದಿ, ವಾಹನ ಖರೀದಿಗೆ ಬಡ್ಡಿ ದರಗಳನ್ನು ಇಳಿಕೆ ಮಾಡಿದ ಈ ಸರ್ಕಾರಿ ಬ್ಯಾಂಕ್

ಹೀಗಾಗುತ್ತದೆ ವಂಚನೆ : 
ಅಂತರ್ಜಾಲದಲ್ಲಿ ವಂಚನೆ ನಡೆಸಲು, ಹ್ಯಾಕರ್‌ಗಳು ನಕಲಿ ವೆಬ್‌ಸೈಟ್‌ಗಳನ್ನು ರಚಿಸುತ್ತಾರೆ.  ಅದು ಸಂಪೂರ್ಣವಾಗಿ ಅಸಲಿಯಂತೆಯೇ ಕಾಣಿಸುತ್ತದೆ. ಬ್ಯಾಂಕಿನ ನಿಯಮಗಳ (Bank rules) ಪ್ರಕಾರ, ಇಂತಹ ವಂಚನೆಯ ಜಾಲಕ್ಕೆ ಸಿಲುಕಿ, ಹಣ  ಕಳೆದುಕೊಂಡರೆ ಆ ಹಣವನ್ನು ಮರಳಿ ಪಡೆಯಬಹುದು. ಇದಕ್ಕಾಗಿ, ಬ್ಯಾಂಕ್ ಖಾತೆದಾರರು ತಕ್ಷಣವೇ ಆ ವಹಿವಾಟಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಬ್ಯಾಂಕಿಗೆ ನೀಡಬೇಕು. 

ಏನು ಹೇಳುತ್ತದೆ ಆರ್‌ಬಿಐ ?
ಆರ್‌ಬಿಐ (RBI) ಪ್ರಕಾರ, ನೀವು ಆನ್ಲೈನ್ ಮೋಸಕ್ಕೆ ಒಳಗಾದರೆ ತಕ್ಷಣ ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡಿದರೆ, ನಿಮಗೆ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು. 

ಹಣ ವಾಪಸ್ ಪಡೆಯುವುದು ಹೇಗೆ ? 
ಹೆಚ್ಚಿನ ಬ್ಯಾಂಕುಗಳು (Bank) ತಮ್ಮ ಗ್ರಾಹಕರಿಗೆ ಹಣಕಾಸು ವಂಚನೆ ವಿಮೆಯನ್ನು ಹೊಂದಿವೆ. ಹಣ ವರ್ಗಾವಣೆಯ ಸಮಯದಲ್ಲಿ ವಂಚನೆಯಾಗಿದ್ದರೆ, ಗ್ರಾಹಕರು ತಕ್ಷಣವೇ ತಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಬ್ಯಾಂಕಿಗೆ ಸೂಚನೆ ನೀಡಿದ ನಂತರ, ವಂಚನೆಯ ಬಗ್ಗೆ ತಕ್ಷಣವೇ ವಿಮಾ ಕಂಪನಿಗೆ (insurance company) ವರದಿ ಮಾಡಲಾಗುತ್ತದೆ. ಈ ರೀತಿಯಾಗಿ ನಿಮ್ಮ ಹಣವನ್ನು ಪಡೆಯಬಹುದು.

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಈ ತಿಂಗಳು ಸಿಗಲಿದೆಯಾ Triple Bonanza? ಇಲ್ಲಿದೆ Big Update!

ತಡವಾಗಿ ತಿಳಿಸುವುದು ನಷ್ಟಕ್ಕೆ ಕಾರಣವಾಗಬಹುದು 
ಬ್ಯಾಂಕುಗಳು ಸಾಮಾನ್ಯವಾಗಿ 10 ವ್ಯವಹಾರ ದಿನಗಳಲ್ಲಿ ನಷ್ಟವಾದ ಹಣವನ್ನು ಮರಳಿ ನೀಡುತ್ತವೆ. ಅನಧಿಕೃತ ವಹಿವಾಟುಗಳನ್ನು ಸಾಮಾನ್ಯವಾಗಿ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಮರುಪಾವತಿ ಮಾಡುತ್ತವೆ. ಇದಕ್ಕಾಗಿ, ಗ್ರಾಹಕರು ವಂಚನೆ ಅಥವಾ ವಂಚನೆಯ ವಹಿವಾಟಿನ ಮೂರು ದಿನಗಳಲ್ಲಿ  ಈ ಬಗ್ಗೆ ಬ್ಯಾಂಕಿಗೆ ತಿಳಿಸಬೇಕು. ನಷ್ಟದ ಮೂರು ದಿನಗಳಲ್ಲಿ ಗ್ರಾಹಕರು ಬ್ಯಾಂಕಿಗೆ ಮಾಹಿತಿ ನೀಡದಿದ್ದರೆ, ಆತ 25,000 ರೂ.ವರೆಗೆ ನಷ್ಟ ಅನುಭವಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News