ATMನಲ್ಲಿ ಹಣ ಸಿಕ್ಕಿ ಹಾಕಿಕೊಂಡಿದ್ದರೆ ತಕ್ಷಣ ಈ ಕೆಲಸ ಮಾಡಿ ..! ದುಡ್ಡು ನಿಮ್ಮ ಖಾತೆ ಸೇರುತ್ತದೆ

ಆರ್‌ಬಿಐ ನಿಯಮಗಳ ಪ್ರಕಾರ (RBI Guidelines), ಖಾತೆದಾರನು ಎಟಿಎಂನಿಂದ ಹಣವನ್ನು ತೆಗೆಯುವಾಗ, ಖಾತೆಯಿಂದ ಹಣ ಕಡಿತಗೊಂಡು,  ನಗದು ಹೊರಬರದಿದ್ದರೆ ಏನು ಮಾಡಬೇಕು ಎಂದು ತಿಳಿಸಲಾಗಿದೆ.

Written by - Ranjitha R K | Last Updated : Apr 7, 2022, 12:40 PM IST
  • ಎಟಿಎಂ ಗ್ರಾಹಕರಿಗೆ ಅಗತ್ಯದ ಸುದ್ದಿ
  • ಎಟಿಎಂನಲ್ಲಿ ಹಣ ಸಿಕ್ಕಿಹಾಕಿಕೊಂಡರೆ ಈ ವಿಧಾನವನ್ನು ಅನುಸರಿಸಿ
  • ಏಳು ದಿನಗಳಲ್ಲಿ ನಿಮ್ಮ ಹಣವನ್ನು ಹಿಂತಿರುಗಿಸಲಾಗುತ್ತದೆ
ATMನಲ್ಲಿ ಹಣ ಸಿಕ್ಕಿ ಹಾಕಿಕೊಂಡಿದ್ದರೆ ತಕ್ಷಣ ಈ ಕೆಲಸ ಮಾಡಿ ..! ದುಡ್ಡು ನಿಮ್ಮ ಖಾತೆ ಸೇರುತ್ತದೆ  title=
ATM guidelines (File photo)

ಬೆಂಗಳೂರು : ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಹಣ ತೆಗೆಯಲು ಎಟಿಎಂ ಬಳಸುತ್ತಾರೆ. ಆದರೆ ಕೆಲವೊಮ್ಮೆ ಹಣ ತೆಗೆಯುವಾಗ ಎಟಿಎಂನಲ್ಲಿಯೇ (ATM)ಹಣ ಸಿಕ್ಕಿಹಾಕಿಕೊಳ್ಳುತ್ತದೆ.  ಹೀಗಾದಾಗ ಅನೇಕ ಜನರು ಆತಂಕಕ್ಕೊಳಗಾಗುತ್ತಾರೆ. ಮತ್ತೆ ಮತ್ತೆ ಎಟಿಎಂನಿಂದ ಹಣ ತೆಗೆಯಲು ಪ್ರಯತ್ನಿಸುತ್ತಾರೆ. ಆದರೆ ಹೀಗಾದಾಗ ಆತಂಕಪಡುವ ಅಗತ್ಯವಿಲ್ಲ. 

ಬ್ಯಾಂಕ್ ಅನ್ನು ಹೇಗೆ ಸಂಪರ್ಕಿಸುವುದು ? : 
ಆರ್‌ಬಿಐ ನಿಯಮಗಳ ಪ್ರಕಾರ (RBI Guidelines), ಖಾತೆದಾರನು ಎಟಿಎಂನಿಂದ ಹಣವನ್ನು ತೆಗೆಯುವಾಗ, ಖಾತೆಯಿಂದ ಹಣ ಕಡಿತಗೊಂಡು,  ನಗದು ಹೊರಬರದಿದ್ದರೆ ಏನು ಮಾಡಬೇಕು ಎಂದು ತಿಳಿಸಲಾಗಿದೆ.  ಹೀಗಾದಾಗ, ಯಾವುದೇ ಹತ್ತಿರದ ಶಾಖೆಯನ್ನು ಸಂಪರ್ಕಿಸಿ. ಒಂದು ವೇಳೆ  ಬ್ಯಾಂಕ್ (Bnak) ಮುಚ್ಚಿದ್ದರೆ ಬ್ಯಾಂಕ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮಾಹಿತಿ ನೀಡಿ. ಅಲ್ಲಿ ನಿಮ್ಮ ದೂರನ್ನು ದಾಖಲಿಸಲಾಗುತ್ತದೆ. ನಂತರ ಗ್ರಾಹಕರ ಹಣವನ್ನು ಮತ್ತೆ ಅವರ ಖಾತೆಗೆ ಹಾಕಲು ಬ್ಯಾಂಕ್‌ಗೆ ಒಂದು ವಾರಗಳ ಕಾಲಾವಕಾಶ ಸಿಗಲಿದೆ. 

ಇದನ್ನೂ ಓದಿ : ಈ ತಾರೀಕಿನಂದು ಖಾತೆಗೆ ಬರಲಿದೆ PF ಬಡ್ಡಿ ಹಣ, ಬ್ಯಾಲೆನ್ಸ್ ಹಣವನ್ನು ಹೀಗೆ ಚೆಕ್ ಮಾಡಿಕೊಳ್ಳಿ

ವಹಿವಾಟಿನ ಚೀಟಿಯನ್ನು ಇರಿಸಿಕೊಳ್ಳಿ : 
ಎಟಿಎಂನಿಂದ (ATM Withdrawal) ಹಣವನ್ನು ತೆಗೆಯುವಾಗ, ವಹಿವಾಟು ವಿಫಲವಾಗಬಹುದು, ಆದರೆ ನೀವು ಅದರ ಸ್ಲಿಪ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಹಾಗಾಗಿ ಟ್ರಾನ್ಸಾಕ್ಶನ್ ಕ್ಯಾನ್ಸಲ್ ಎಂದು ಬಂದರೂ ಆ ಸ್ಲಿಪ್ ತೆಗೆದುಕೊಳ್ಳುವುದನ್ನು ಮರೆಯಬೇಡಿ.  ಕಾರಣಗಳಿಂದ ಸ್ಲಿಪ್ ಕೂಡಾ ಸಿಗದೇ ಹೋದರೆ, ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ನೀಡಬಹುದು. ಇಲ್ಲಿ ಟ್ರಾನ್ಸಾಕ್ಶನ್ ಸ್ಲಿಪ್ ಯಾಕೆ ಮುಖ್ಯ ಎಂದರೆ, ಅದರಲ್ಲಿ ಎಟಿಎಂ ಐಡಿ, ಸ್ಥಳ, ಸಮಯ ಮತ್ತು ಬ್ಯಾಂಕ್‌ ರೆಸ್ಪಾನ್ಸ್ ಕೋಡ್ ಅನ್ನು ಮುದ್ರಿಸಲಾಗಿರುತ್ತದೆ. 

ಬ್ಯಾಂಕ್ 7 ದಿನಗಳಲ್ಲಿ ಹಣವನ್ನು ಹಿಂದಿರುಗಿಸುತ್ತದೆ :
ಇಂತಹ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ (RBI) ವಿಶೇಷ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಪ್ರಕಾರ, ಅಂತಹ ಸಂದರ್ಭಗಳಲ್ಲಿ, ಬ್ಯಾಂಕ್ ಗ್ರಾಹಕರಿಗೆ 7 ದಿನಗಳಲ್ಲಿ ಹಣವನ್ನು ಹಿಂದಿರುಗಿಸಬೇಕಾಗುತ್ತದೆ. ಒಂದು ವಾರದೊಳಗೆ ಬ್ಯಾಂಕ್ ನಿಮ್ಮ ಹಣವನ್ನು ಹಿಂತಿರುಗಿಸದಿದ್ದರೆ, ಬ್ಯಾಂಕ್ ಗ್ರಾಹಕರಿಗೆ  ದಿನಕ್ಕೆ 100 ರೂ. ಯಂತೆ ನೀಡಬೇಕಾಗುತ್ತದೆ. 

ಇದನ್ನೂ ಓದಿ : Fuel Price: ಪೆಟ್ರೋಲ್-ಡೀಸೆಲ್ ಬೆಲೆ ಪ್ರತಿದಿನ 80 ಪೈಸೆಯೇ ಹೆಚ್ಚಾಗುತ್ತಿರುವುದೇಕೆ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News