Mahindra Car sales : ದೇಶದ ಪ್ರಮುಖ ಆಟೋಮೊಬೈಲ್ ತಯಾರಿಕಾ ಸಂಸ್ಥೆಯಾದ ಮಹೀಂದ್ರಾ ಅಂಡ್ ಮಹೀಂದ್ರಾ ಏಪ್ರಿಲ್ ತಿಂಗಳ ವಾಹನ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಎರಡು ಕಾರುಗಳು ಗ್ರಾಹಕರಿಗೆ ಇಷ್ಟವಾಗುತ್ತಿದ್ದು, ಮಹೀಂದ್ರಾ ಮಾರಾಟದಲ್ಲಿ ಶೇಕಡಾ 54 ರಷ್ಟು ಏರಿಕೆ ಕಂಡಿದೆ. ಅಂಕಿಅಂಶಗಳ ಪ್ರಕಾರ, ಮಹೀಂದ್ರದ ಪ್ರಯಾಣಿಕ ವಾಹನ ಏಪ್ರಿಲ್ನಲ್ಲಿ 34,698 ಗಳಷ್ಟು ಮಾರಾಟವಾಗಿ
ದೆ. ಅಂದರೆ ಮಾರಾಟದಲ್ಲಿ ಶೇಕಡಾ 54 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಕಾರಿನ 22,526 ಯುನಿಟ್ಗಳು ಮಾರಾಟವಾಗಿತ್ತು. ಈ ಎರಡು ಅಂಕಿ ಅಂಶಗಳನ್ನು ಹೋಲಿಸಿ ನೋಡಿದರೆ ಕಾರಿನ ಮಾರಾಟದಲ್ಲಿ ಈ ಬಾರಿ ಶೇಕಡಾ 54 ರಷ್ಟು ಏರಿಕೆ ಕಂಡು ಬಂದಿದೆ.
ಯುಟಿಲಿಟಿ ವೆಹಿಕಲ್ ವಿಭಾಗದಲ್ಲಿ ಕಂಪನಿಯು ಏಪ್ರಿಲ್ನಲ್ಲಿ 34,694 ವಾಹನಗಳನ್ನು ಮಾರಾಟ
ಮಾಡಲಾಗಿದೆ. ಸೆಮಿಕಂಡಕ್ಟರ್ಗಳ ಅಲಭ್ಯತೆಯಿಂದಾಗಿ ಕ್ರ್ಯಾಶ್ ಸೆನ್ಸರ್ಗಳು ಮತ್ತು ಏರ್ ಬ್ಯಾಗ್ ಇಸಿಯುಗಳಿಗೆ ಸಪ್ಲೈ ಚೈನ್ ನಿರ್ಬಂಧಗಳ ಹೊರತಾಗಿಯೂ, ಶೇಕಡಾ 57 ರಷ್ಟು ಹೆಚ್ಚಳ ದಾಖಲಿಸಿದೆ. ಪ್ರಯಾಣಿಕ ವಾಹನ ವಿಭಾಗದಲ್ಲಿ (ಯುವಿಗಳು, ಕಾರುಗಳು ಮತ್ತು ವ್ಯಾನ್ಗಳನ್ನು ಒಳಗೊಂಡಿರುತ್ತದೆ) ಕಳೆದ ತಿಂಗಳು 34,698 ವಾಹನಗಳ ಮಾರಾಟವನ್ನು ನೋಂದಾಯಿಸಲಾಗಿದೆ. ಇದು 54 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. ವಾಣಿಜ್ಯ ವಾಹನ ವಿಭಾಗದಲ್ಲಿ ಏಪ್ರಿಲ್ನಲ್ಲಿ 20,231 ವಾಹನಗಳನ್ನು ಮಾರಾಟ ಮಾಡಿದೆ ಎಂದು ಮಹೀಂದ್ರಾ ತಿಳಿಸಿದೆ.
ಇದನ್ನೂ ಓದಿ : Marriage Benefit: ಮದುವೆಯಾಗುವವರಿಗೆ ಸರ್ಕಾರ ನೀಡುತ್ತದೆ 51 ಸಾವಿರ! ಷರತ್ತುಗಳನ್ನು ಪಾಲಿಸಿದರೆ ಮಾತ್ರ !
ಮಹೀಂದ್ರಾ ಬೊಲೆರೊ ಮತ್ತು ಮಹೀಂದ್ರಾ ಸ್ಕಾರ್ಪಿಯೊ ಅತಿ ಹೆಚ್ಚು ಮಾರಾಟವಾಗುವ ಮಹೀಂದ್ರಾ ಕಂಪನಿಯ ಎರಡು ಕಾರುಗಳು. ಬೊಲೆರೊ ಹಲವಾರು ಬಾರಿ ದೇಶದಲ್ಲಿ ಹೆಚ್ಚು ಮಾರಾಟವಾಗುವ 7 ಆಸನಗಳ ಕಾರು ಆಗಿದ್ದರೂ, ಸ್ಕಾರ್ಪಿಯೊ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಜನಪ್ರಿಯ ಹೆಸರು. ಕಂಪನಿಯು ಈಗ ಸ್ಕಾರ್ಪಿಯೊವನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡುತ್ತಿದೆ. ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್. ಅವುಗಳ ಬೆಲೆ ಸುಮಾರು 13 ಲಕ್ಷದಿಂದ ಪ್ರಾರಂಭವಾಗುತ್ತದೆ.
ಕಡಿಮೆಯಾದ ರಫ್ತು :
ಮಹೀಂದ್ರ ವಾಹನಗಳ ರಫ್ತುಗಳು ತಿಂಗಳಿಗೆ 1,813 ವಾಹನ ಅಂದರೆ ಶೇಕಡಾ 33 ರಷ್ಟು ಕುಸಿದಿದೆ ಎಂದು ವಾಹನ ತಯಾರಕರು ತಿಳಿಸಿದ್ದಾರೆ. ಕಂಪನಿಯ ತ್ರಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷ ಇದೇ ತಿಂಗಳಿನಲ್ಲಿ3,009 ನಷ್ಟಿತ್ತು. ಆದರೆ, ಇದರ ಮಾರಾಟದಲ್ಲಿ 85 ಶೇ ದಷ್ಟು ಹೆಚ್ಚಳ ಕಂಡು ಬಂದಿದೆ. ಅಂದರೆ ಈ ಬಾರಿ ಮಾರಾಟವಾದ ವಾಹನಗಳ ಸಂಖ್ಯೆ 5,552. ಆಗಿದೆ.
ಇದನ್ನೂ ಓದಿ : Renault Kiger 2023: ಭಾರಿ ಅಬ್ಬರ ಸೃಷ್ಟಿಸಲು ಬಂದೆ ಬಿಟ್ತು 8 ಲಕ್ಷಕ್ಕೂ ಕಡಿಮೆ ಬೆಲೆಯ ಎಸ್ಯುವಿ, ಪಂಚ್, ಬ್ರೆಜ್ಜಾಗೆ ನೇರ ಪೈಪೋಟಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.