Gold Price Today : ದೇಶೀಯ ಮಾರುಕಟ್ಟೆಯಾಗಿರಲಿ ಅಥವಾ ಜಾಗತಿಕ ಮಾರುಕಟ್ಟೆಯಾಗಿರಲಿ, ಚಿನ್ನದ ಬೆಲೆಗಳು ಹೊಸ ದಾಖಲೆಗಳನ್ನು ಸೃಷ್ಟಿಸಿವೆ. MCX ನಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ 63,800 ರೂ. ದಾಟಿದೆ. COMEX ನಲ್ಲಿಯೂ ಚಿನ್ನ ದಾಖಲೆ ಮತ್ತ ತಲುಪಿದೆ. COMEX ನಲ್ಲಿ ಚಿನ್ನದ ಬೆಲೆ 2100 ಡಾಲರ್ ಮಟ್ಟವನ್ನು ದಾಟಿದೆ. ಹೀಗಿರುವಾಗ ಈ ಡಿಸೆಂಬರ್ ಅಂತ್ಯದ ವೇಳೆಗೆ ಚಿನ್ನದ ಬೆಲೆ ಎಷ್ಟರಮಟ್ಟಿಗೆ ಏರಲಿದೆ ಎನ್ನುವುದೇ ಪ್ರಶ್ನೆಯಾಗಿದೆ.
ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ :
MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 63,880 ರೂ.ಗೆ ತಲುಪಿದೆ. ಇಂಟ್ರಾಡೇನಲ್ಲಿ ಚಿನ್ನದ ದರ 600 ರೂ. ಏರಿಕೆಯಾಗಿದೆ. ಅದೇ ರೀತಿ, COMEXನಲ್ಲಿಯೂ ಚಿನ್ನದ ಬೆಲೆ ದಾಖಲೆಯ ಮಟ್ಟವನ್ನು ತಲುಪಿದೆ. COMEXನಲ್ಲಿ ಚಿನ್ನದ ದರವು ಪ್ರತಿ ಔನ್ಸ್ ಗೆ 2104 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ. COMEX ನಲ್ಲಿ ಚಿನ್ನದ ಬೆಲೆಗಳ ಏರಿಕೆ ಮುಂದುವರಿಯಲಿದೆ ಎನ್ನುತ್ತಾರೆ ವಿಶ್ಲೇಷಕರು. ಹೀಗಾದಾಗ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ.
ಇದನ್ನೂ ಓದಿ : ಗ್ರಾಹಕರಿಗೆ ಶಾಕ್: ಟಾಟಾ, ಮಾರುತಿ ಬಳಿಕ ಜನವರಿ 1ರಿಂದ ದುಬಾರಿಯಾಗಲಿದೆ ಈ ಕಾರುಗಳ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆ :
ಬೆಂಗಳೂರು - 58,850 ರೂ.
ದೆಹಲಿ-59,000 ರೂ.
ಚೆನ್ನೈ -59,750 ರೂ.
ಕೇರಳ -58,850 ರೂ.
ಹೈದರಾಬಾದ್ - 58,850 ರೂ.
ಮುಂಬಯಿ -58,850 ರೂ.
ಚಿನ್ನದ ಏರಿಕೆಗೆ 7 ಪ್ರಮುಖ ಕಾರಣಗಳು :
1. ಡಾಲರ್ ಸೂಚ್ಯಂಕ ಕುಸಿಯುತ್ತಿರುವುದು
2. ಹಮಾಸ್-ಇಸ್ರೇಲ್ ಯುದ್ಧ ಮತ್ತೆ ಉಲ್ಬಣ
3. US 10-ವರ್ಷದ ಬಾಂಡ್ ಯೀಲ್ಡ್ ಎರಡೂವರೆ ತಿಂಗಳಲ್ಲಿ ಕಡಿಮೆ ಮಟ್ಟವನ್ನು ತಲುಪುತ್ತದೆ
4. 4.3% ತಲುಪಲಿದೆ ಬಾಂಡ್ ಯೀಲ್ಡ್
5. ಮಾರುಕಟ್ಟೆ ದರಗಳು US ನಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿಲ್ಲ
6. ಮಾರುಕಟ್ಟೆಯಲ್ಲಿ ದರ ಕಡಿತದ ಚರ್ಚೆ
7. ದೊಡ್ಡ ಹೂಡಿಕೆದಾರರಿಂದ ಖರೀದಿಯಲ್ಲಿ ಹೆಚ್ಚಳ
ಇದನ್ನೂ ಓದಿ : ಎಫ್‌ಡಿ ಯೋಜನೆಯಲ್ಲಿ ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕ್‌ಗಳು ಇವು ! ದುಪ್ಪಟ್ಟು ಆದಾಯ ಖಂಡಿತಾ
ಬೆಳ್ಳಿ ಬೆಲೆಯಲ್ಲಿಯೂ ಏರಿಕೆ :
ಎಂಸಿಎಕ್ಸ್‌ನಲ್ಲಿ ಬೆಳ್ಳಿಯ ಬೆಲೆಯಲ್ಲಿಯೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 76,858 ರೂ. ಆಗಿದೆ. ಆದರೆ ಸಾರ್ವಕಾಲಿಕ ಗರಿಷ್ಠ ದರ ಪ್ರತಿ ಕೆಜಿಗೆ 78590 ರೂ.ಗೆ ತಲುಪಿದೆ. COMEX ನಲ್ಲಿ ಬೆಳ್ಳಿಯ ಬೆಲೆ ಪ್ರತಿ ಔನ್ಸ್ ಗೆ 25.84 ನಲ್ಲಿ ವಹಿವಾಟು ನಡೆಸುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ