Gold Price Today : ಹಿಂದಿನ ಎಲ್ಲಾ ದಾಖಲೆ ಮುರಿದ ಚಿನ್ನದ ಬೆಲೆ ! ಬಂಗಾರ ಖರೀದಿ ಇನ್ನು ಬರೀ ಕನಸು

Gold-Silver Rate Today: ಚಿನ್ನದ ಹೊರತಾಗಿ ಬೆಳ್ಳಿಯ ಬೆಲೆಯೂ ಬುಲಿಯನ್ ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿದೆ. ಚಿನ್ನ 65000 ದಾಟಿದರೆ, ಬೆಳ್ಳಿಯೂ 72,000 ರೂಪಾಯಿ ಮಟ್ಟದಲ್ಲಿದೆ. 

Written by - Ranjitha R K | Last Updated : Mar 11, 2024, 02:23 PM IST
  • ದಿನದಿಂದ ದಿನಕ್ಕೆ ಚಿನ್ನದ ದರದಲ್ಲಿ ಏರಿಕೆ
  • ದಾಖಲೆಯ ಗರಿಷ್ಠ ಮಟ್ಟ ತಲುಪಿದ ಬಂಗಾರ
  • ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಬಂಗಾರ
Gold Price Today : ಹಿಂದಿನ ಎಲ್ಲಾ ದಾಖಲೆ ಮುರಿದ ಚಿನ್ನದ ಬೆಲೆ ! ಬಂಗಾರ ಖರೀದಿ ಇನ್ನು ಬರೀ ಕನಸು   title=

Gold-Silver Rate Today:  ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆಯಾಗಿದ್ದು, ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಮದುವೆ ಸೀಸನ್ ಹೊರತುಪಡಿಸಿ ಬೇರೆ ಬೇರೆ ಕಾರಣಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಸೋಮವಾರ ಚಿನ್ನದ ಬೆಲೆ 690 ರೂ.ಗಳಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ 65,635 ರೂ.ಗಳ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಚಿನ್ನದ ಹೊರತಾಗಿ ಬೆಳ್ಳಿಯ ಬೆಲೆಯೂ ಬುಲಿಯನ್ ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿದೆ. ಚಿನ್ನ 65,000 ದಾಟಿದರೆ, ಬೆಳ್ಳಿಯೂ 72,000 ರೂಪಾಯಿ ಮಟ್ಟದಲ್ಲಿದೆ. 

10 ದಿನಗಳಲ್ಲಿ 3400 ರೂ ಹೆಚ್ಚಳ :
ಮಾರ್ಚ್ ಆರಂಭದಿಂದಲೂ ಚಿನ್ನದ ಬೆಲೆ ತೀವ್ರ ಏರಿಕೆ ಕಾಣುತ್ತಿದೆ. ಫೆಬ್ರವರಿ 21 ರಂದು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 62,226 ರೂ.ಆಗಿತ್ತು. ಫೆಬ್ರವರಿ 29 ರಂದು, 10 ಗ್ರಾಂ ಚಿನ್ನದ ಬೆಲೆ 62,282 ರೂ.ಗೆ ತಲುಪಿತು. ಆದರೆ, ಮಾರ್ಚ್ 1 ರಂದು 62,816 ರೂ. ಆಗಿತ್ತು. ಮಾರ್ಚ್ 7 ರಂದು ಚಿನ್ನದ ದರ 10 ಗ್ರಾಂಗೆ 65,049 ರೂ.ಗೆ ಏರಿಕೆ ಕಂಡಿತ್ತು. ಇದಾದ ಬಳಿಕ ಸೋಮವಾರ ಅಂದರೆ ಮಾರ್ಚ್ 11ರ ಬೆಳಗ್ಗೆ ಚಿನ್ನದ ದರ 65,635 ರೂ.ಗೆ ಏರಿಕೆಯಾಗಿದೆ.ಇದರ ಪ್ರಕಾರ ಚಿನ್ನದ ಬೆಲೆ ಕೇವಲ 10 ದಿನಗಳಲ್ಲಿ ಸುಮಾರು 3,400 ರೂ.ಯಷ್ಟು ಏರಿಕೆ ಕಂಡಂತೆ ಆಗಿದೆ. 

ಇದನ್ನೂ ಓದಿ : Business News: ಬಾಡಿಗೆಗೆ ಹೆಲಿಕಾಪ್ಟರ್, ಚಾರ್ಟರ್ಡ್ ಫ್ಲೈಟ್..! ಗಂಟೆ ಬಾಡಿಗೆ ಎಷ್ಟು ಗೊತ್ತಾ..?

ಮಾರ್ಚ್ 11 ರಂದು ಚಿನ್ನ ಮತ್ತು ಬೆಳ್ಳಿ ದರಗಳು:
24 ಕ್ಯಾರೆಟ್ ಚಿನ್ನ- 10 ಗ್ರಾಂಗೆ 65,635 ರೂ, 
23 ಕ್ಯಾರೆಟ್ ಚಿನ್ನ- 10 ಗ್ರಾಂಗೆ 65,372 ರೂ,  
22 ಕ್ಯಾರೆಟ್ ಚಿನ್ನ - 10 ಗ್ರಾಂಗೆ 60,122 ರೂ,
18 ಕ್ಯಾರೆಟ್ ಚಿನ್ನ - 10 ಗ್ರಾಂಗೆ 49226 ರೂ. 
ಬೆಳ್ಳಿ ಬೆಲೆ ಪ್ರತಿ ಕೆಜಿಗೆ 72539 ರೂ.

ಚಿನ್ನದ ದರದಲ್ಲಿ ಇಷ್ಟು ಏರಿಕೆಯಾಗಲು ಕಾರಣ : 
ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಪ್ರತಿ 10 ಗ್ರಾಂಗೆ 65,635 ರೂ.ಆಗಿದೆ. ಬಂಗಾರದ ಬೆಲೆ ಇಷ್ಟೊಂದು ಮಟ್ಟದಲ್ಲಿ ಏರಿಕೆಯಾಗಲು ಮದುವೆಯ ಸೀಸನ್‌ ಕಾರಣವಲ್ಲ. ಯುಎಸ್ ಫೆಡರಲ್ ರಿಸರ್ವ್‌ನಿಂದ ಹಣಕಾಸು ನೀತಿಯಲ್ಲಿ ಬದಲಾವಣೆಯ ನಿರೀಕ್ಷೆಯಿಂದಾಗಿ ಚಿನ್ನದಲ್ಲಿ ಈ ಏರಿಕೆಯಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸುತ್ತಿವೆ.

ಇದನ್ನೂ ಓದಿ : PMAY 2024: ಬಡವರಿಗೆ ಉಚಿತ ಮನೆ ಯೋಜನೆಯಡಿ ರೂ. 1 ಲಕ್ಷ ಸಹಾಯಧನ..! ಹೀಗೆ ಅರ್ಜಿ ಸಲ್ಲಿಸಿ

ನೆರೆಯ ರಾಷ್ಟ್ರ ಚೀನಾ ಪ್ರಸ್ತುತ ಅತಿ ಹೆಚ್ಚು ಚಿನ್ನವನ್ನು ಖರೀದಿಸುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಒಂದು ವೇಳೆ ಯುಎಸ್ ಫೆಡ್ ಬಡ್ಡಿದರದಲ್ಲಿ ಕಡಿತವಾದರೆ, ಮೇ ವೇಳೆಗೆ ಚಿನ್ನದ ದರ 70 ಸಾವಿರ ರೂ.ತಲುಪಲಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆಯಾಗುವ ನಿರೀಕ್ಷೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News