How To Check PF Balance: ಕೇವಲ ಮಿಸ್ಡ್ ಕಾಲ್ ಮೂಲಕ ತಿಳಿದುಕೊಳ್ಳಬಹುದು PF Balance

ಪಿಎಫ್ ಬ್ಯಾಲೆನ್ಸ್  ತಿಳಿದುಕೊಳ್ಳಲು ಇಪಿಎಫ್‌ಒನ ಆನ್‌ಲೈನ್ ಪೋರ್ಟಲ್ ಅಥವಾ ಅಪ್ಲಿಕೇಶನ್ ಅಗತ್ಯವಿಲ್ಲ. ಕೇವಲ  ಮಿಸ್ಡ್  ಕಾಲ್ ನೀಡುವ ಮೂಲಕ ಪಿಎಫ್ ಖಾತೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು.   

Written by - Ranjitha R K | Last Updated : Apr 5, 2021, 03:38 PM IST
  • ಬರೀ ಮಿಸ್ಡ್ ಕಾಲ್ ಮೂಲಕ PF Balance ತಿಳಿದುಕೊಳ್ಳಬಹುದು
  • SMS ಮೂಲಕವೂ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು
  • ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಉಮಾಂಗ್ ಅಪ್ಲಿಕೇಶನ್‌ ಬಳಸಬಹುದು
How To Check PF Balance: ಕೇವಲ ಮಿಸ್ಡ್ ಕಾಲ್ ಮೂಲಕ ತಿಳಿದುಕೊಳ್ಳಬಹುದು PF Balance title=
ಬರೀ ಮಿಸ್ಡ್ ಕಾಲ್ ಮೂಲಕ PF Balance ತಿಳಿದುಕೊಳ್ಳಬಹುದು (file photo)

ನವದೆಹಲಿ :  How To Check PF Balance : ಖಾಸಗಿ ವಲಯದಲ್ಲಿ ಕೆಲಸ ಮಾಡುವವರ ವೇತನದ ಒಂದು ಭಾಗವನ್ನು , ಇಪಿಎಫ್‌ನಲ್ಲಿ (EPF) ಹೂಡಿಕೆ ಮಾಡಲಾಗುತ್ತದೆ. ಇಪಿಎಫ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹೊಂದಿರಬೇಕಾಗುತ್ತದೆ. ಈಗ ನಿಮ್ಮ ಇಪಿಎಫ್‌ ಖಾತೆಯಲ್ಲಿ ಎಷ್ಟು ಹಣ ಜಮಾವಣೆಯಾಗಿದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು. ಸ್ಮಾರ್ಟ್ಫೋನ್ (Smartphone) ಬಳಕೆದಾರರು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಆದರೆ ಈಗ ನಿಮ್ಮ ಬಳಿ ಸ್ಮಾರ್ಟ್ಫೋನ್  ಇಲ್ಲದಿದ್ದರೂ ಕೂಡಾ  ಪಿಎಫ್ ಬ್ಯಾಲೆನ್ಸ್  (PF Balance) ತಿಳಿದುಕೊಳ್ಳಬಹುದು. 

ಇಪಿಎಫ್ ಬ್ಯಾಲೆನ್ಸ್  (EPF Balance) ತಿಳಿದುಕೊಳ್ಳಲು ಇಪಿಎಫ್‌ಒನ ಆನ್‌ಲೈನ್ ಪೋರ್ಟಲ್ ಅಥವಾ ಅಪ್ಲಿಕೇಶನ್ ಅಗತ್ಯವಿಲ್ಲ. ಕೇವಲ  ಮಿಸ್ಡ್  ಕಾಲ್ (Missed call) ನೀಡುವ ಮೂಲಕ ಪಿಎಫ್ ಖಾತೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇಪಿಎಫ್‌ಒ (EPFO) ಟ್ವೀಟ್ ಮಾಡುವ ಮೂಲಕ ಒಂದು ಸಂಖ್ಯೆಯನ್ನು ಶೇರ್ ಮಾಡಿದೆ.  011-22901406 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಬಗ್ಗೆ ಮಾಹಿತಿಯನ್ನು  ಪಡೆದುಕೊಳ್ಳಬಹುದು. ಈ ಸಂಖ್ಯೆಗೆ ಕರೆ ಮಾಡಿದರೆ ರಿಂಗ್ ಆದ ತಕ್ಷಣ  ಫೋನ್ ಡಿಸ್ಕನೆಕ್ಟ್ ಆಗುತ್ತದೆ. ನಂತರ  ಇಪಿಎಫ್ ಬ್ಯಾಲೆನ್ಸ್  ಬಗ್ಗೆ ಇಪಿಎಫ್‌ಒನಿಂದ ಮೆಸೇಜ್ ಬರುತ್ತದೆ.  

ಇದನ್ನೂಓದಿ : Job Cut : ಮುಂದಿನ ನಾಲ್ಕು ವರ್ಷದಲ್ಲಿ 10ರಲ್ಲಿ 6 ಜನರ ಉದ್ಯೋಗಕ್ಕೆ ಕತ್ತರಿ ; WEF ಆಘಾತಕಾರಿ ವರದಿ

SMS ಮೂಲಕವೂ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು : 
ನಿಮ್ಮ ಫೋನ್‌ ನಿಂದ ಸಂದೇಶ ಕಳುಹಿಸುವ ಮೂಲಕವೂ ಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. ಇದಕ್ಕಾಗಿ, ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಯಿಂದ ' ‘EPFOHO UAN LAN’ ಎಂದು ಟೈಪ್ ಮಾಡಿ  7738299899 ನಂಬರ್ ಗೆ ಕಳುಹಿಸಬೇಕು. ನೀವು ಮೆಸೇಜ್ (SMS) ಕಳುಹಿಸಿದ ಸ್ವಲ್ಪ ಸಮಯದ ನಂತರ ಇಪಿಎಫ್ ಬ್ಯಾಲೆನ್ಸ್  ಮಾಹಿತಿ ತಿಳಿಯುತ್ತದೆ. 

ಉಮಾಂಗ್ ಅಪ್ಲಿಕೇಶನ್‌ ಮೂಲಕವೂ ತಿಳಿದುಕೊಳ್ಳಬಹುದು :  
ಗ್ರಾಹಕರು ತಮ್ಮ ಪಿಎಫ್ ಖಾತೆ ಮಾಹಿತಿಯನ್ನು ಉಮಾಂಗ್ ಆ್ಯಪ್ ಮೂಲಕ ಪಡೆಯಬಹುದು. ಇದಕ್ಕಾಗಿ, Umang App ನಲ್ಲಿ  EPFO ವಿಭಾಗಕ್ಕೆ ಹೋಗಬೇಕಾಗುತ್ತದೆ. ಇಲ್ಲಿ Employee Centric Services ಕ್ಲಿಕ್ ಮಾಡಬೇಕು. ಇದರ ನಂತರ, View Passbook  ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಪಾಸ್ಬುಕ್ ವೀಕ್ಷಿಸಲು UAN ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು. ಇದರ ನಂತರ, ನಿಮ್ಮ ಫೋನ್ ಸಂಖ್ಯೆಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಿದ ನಂತರ, ನಿಮ್ಮ ಪಾಸ್‌ಬುಕ್ ಕಾಣುತ್ತದೆ. 

ಇದನ್ನೂಓದಿ : Crorepati Formula: ನಿತ್ಯ ಒಂದು ಕಪ್ ಕಾಫಿ ಸೇವಿಸುವುದನ್ನು ಬಿಟ್ಟರೆ ನೀವೂ ಕೋಟ್ಯಾಧಿಪತಿಯಾಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News