BHIM UPI ಗ್ರಾಹಕರು ವಹಿವಾಟಿಗೆ ಸಂಬಂಧಿಸಿದ ದೂರು ಎಲ್ಲಿ ಸಲ್ಲಿಸಬೇಕು? NPCI ನಿಂದ ನೂತನ ಸೇವೆ ಆರಂಭ

BHIM UPI - ಡಿಜಿಟಲ್ ವಹಿವಾಟುಗಳಿಗಾಗಿ ಭೀಮ್ ಯುಪಿಐ (BHIM UPI) ಬಳಸುವ ಗ್ರಾಹಕರಿಗೆ ಇದೀಗ ಪಾವತಿ ವೇದಿಕೆಯಲ್ಲಿ ಹೊಸ ಸೌಲಭ್ಯವನ್ನು ಸೇರಿಸಲಾಗಿದೆ.

Written by - Nitin Tabib | Last Updated : Mar 17, 2021, 01:58 PM IST
  • ಗ್ರಾಹಕರಿಗಾಗಿ ನೂತನ ಸೇವೆ ಆರಂಭಿಸಿದ NPCI.
  • ಇನ್ಮುಂದೆ ನೀವು BHIM App ನಲ್ಲಿ ವಹಿವಾಟಿಗೆ ಸಂಬಂಧಿಸಿದ ದೂರು ನೀಡಬಹುದು.
  • ಮರ್ಚೆಂಟ್ ಆಪ್ ಸಂಬಂಧಿಸಿದ ದೂರು ಕೂಡ ನೀಡಬಹುದು.
BHIM UPI ಗ್ರಾಹಕರು ವಹಿವಾಟಿಗೆ ಸಂಬಂಧಿಸಿದ ದೂರು ಎಲ್ಲಿ ಸಲ್ಲಿಸಬೇಕು? NPCI ನಿಂದ ನೂತನ ಸೇವೆ ಆರಂಭ title=
Bhim UPI(File Photo)

ನವದೆಹಲಿ:  BHIM UPI - ಡಿಜಿಟಲ್ ವಹಿವಾಟುಗಳಿಗಾಗಿ ಭೀಮ್ ಯುಪಿಐ (BHIM UPI) ಬಳಸುವ ಗ್ರಾಹಕರಿಗೆ ಇದೀಗ ಪಾವತಿ ವೇದಿಕೆಯಲ್ಲಿ ಹೊಸ ಸೌಲಭ್ಯವನ್ನು ಸೇರಿಸಲಾಗಿದೆ. ಇದರ ಸಹಾಯದಿಂದ, ಗ್ರಾಹಕರು ತಮ್ಮ ಬಾಕಿ ಇರುವ ವಹಿವಾಟಿನ ಸ್ಥಿತಿಯನ್ನು ಕಂಡುಹಿಡಿಯಲು ಸಾಧ್ಯವಾಗಲಿದೆ ಮತ್ತು ಅವರು ದೂರು ಕೂಡ ದಾಖಲಿಸಬಹುದು. ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಭೀಮ್ ಯುಪಿಐನಲ್ಲಿ 'UPI Help' ಸೇವೆ ಪ್ರಾರಂಭಿಸಿದೆ. ಗ್ರಾಹಕರ ಸ್ನೇಹಿ ಮತ್ತು ಪಾರದರ್ಶಕ ಪರಿಹಾರ ವ್ಯವಸ್ಥೆಗಳನ್ನು ರಚಿಸಲು RBI ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (NPCI) ಹೇಳಿದೆ.

ಈ ಕುರಿತು NPCI ಜಾರಿಗೊಳಿಸಿರುವ ಹೇಳಿಕೆಯ ಪ್ರಕಾರ, NPCI, BHIM UPIನಲ್ಲಿ 'UPI Help' ಆರಂಭಿಸಿದ್ದು, ಮೊದಲ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಭೀಮ್ಅಪ್ಲಿಕೇಶನ್‌ನಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ ಎಂದಿದೆ. ಇದರಿಂದ ಗ್ರಾಹಕರು ತಮ್ಮ ಪೆಂಡಿಂಗ್ ಇರುವ ವಹಿವಾಟಿನ ಸ್ಥಿತಿ ಕಂಡುಹಿಡಿಯಲು ಸಾಧ್ಯವಾಗಲಿದೆ ಮತ್ತು ವಹಿವಾಟಿಗೆ ಸಂಬಂಧಿಸಿದ ದೂರುಗಳನ್ನು ಕೂಡ ನೀಡಲು ಇದು ಸಹಕಾರಿಯಾಗಲಿದೆ. ಮರ್ಚೆಂಟ್ ವಹಿವಾಟಿಗೆ ಸಂಬಂಧಿಸಿದ ದೂರುಗಳನ್ನು ಕೂಡ ನೀಡಲು ಆಪ್ ನಲ್ಲಿ ಆಯ್ಕೆ ಒದಗಿಸಲಾಗಿದೆ.

ಇದನ್ನೂ ಓದಿ- ಇನ್ಮುಂದೆ Android ಫೋನೇ ನಿಮ್ಮ POS ! SBI Payments-NPCIನಿಂದ ಹೊಸ ಸೇವೆ ಆರಂಭ

ಪೆಟಿಎಂ ಪೇಮೆಂಟ್ ಬ್ಯಾಂಕ್ ನಲ್ಲಿ ಶೀಘ್ರದಲ್ಲಿಯೇ ಸಿಗಲಿದೆ ಈ ಸೌಲಭ್ಯ
ಇದರ ಜೊತೆಗೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಮತ್ತು TJSB ಕೋಆಪರೇಟಿವ್ ಬ್ಯಾಂಕ್‌ನ ಗ್ರಾಹಕರು ಕೂಡ ಶೀಘ್ರದಲ್ಲೇ ಯುಪಿಐ-ಹೆಲ್ಪ್‌ನ ಲಾಭ ಪಡೆಯಲು ಸಾಧ್ಯವಾಗಲಿದೆ ಎಂದು NPCI ಹೇಳಿದೆ. ಯುಪಿಐ ಬಳಸುವ ಇತರ ಬ್ಯಾಂಕುಗಳ ಗ್ರಾಹಕರು ಸಹ ಮುಂದಿನ ತಿಂಗಳುಗಳಲ್ಲಿ ಈ ಸೌಲಭ್ಯದ ಲಾಭ ಪಡೆಯಲು ಸಾಧ್ಯವಾಗಲಿದೆ ಎಂದು NPCI ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ- UPI Transaction: 'UPI ವ್ಯವಹಾರಕ್ಕೆ ಶುಲ್ಕ...' ಸುದ್ದಿ ಸುಳ್ಳು ಎಂದ NPCI

NPCI ಭಾರತದಲ್ಲಿ ರಿಟೇಲ್ ಪೇಮೆಂಟ್ಸ್ ಹಾಗೂ ಸೆಟಲ್ಮೆಂಟ್ ಸಿಸ್ಟಂಗಾಗಿ ಪ್ರಮುಖ ಸಂಸ್ಥೆಯಾಗಿದೆ. NPCIನ ಪೇಮೆಂಟ್ಸ್ ಪ್ರಾಡಕ್ಟ್ ಪೋರ್ಟ್ ಫೋಲಿಯೋನಲ್ಲಿ ರೂಪೇ ಕಾರ್ಡ್, ಇಮ್ಮಿಡೇಟ್ಸ್ ಪೇಮೆಂಟ್ ಸರ್ವಿಸಸ್ (IMPS) ಹಾಗೂ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೆಸ್ (UPI), ಭಾರತ ಇಂಟರ್ಫೆಸ್ ಫಾರ್ ಮನಿ (BHIM), BHIM ಆಧಾರ್, ನ್ಯಾಷನಲ್ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (NETC Fastag) ಭಾರತ್ ಬಿಲ್ ಪೆಗಳು ಶಾಮೀಲಾಗಿವೆ.

ಇದನ್ನೂ ಓದಿ-ಈ ದಿನದಿಂದ UPI ವ್ಯವಹಾರ ದುಬಾರಿಯಾಗಲಿದೆ, Extra Charge ನೀಡಬೇಕಾಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News