ನವದೆಹಲಿ : ಹೋಂಡಾ ಮೋಟಾರ್‌ಸೈಕಲ್ (honda motor cycle)ಮತ್ತು ಸ್ಕೂಟರ್ ಇಂಡಿಯಾ (hmsi) ಮುಂದಿನ ಮೂರು ವರ್ಷಗಳಲ್ಲಿ ಸುಮಾರು 1,000 ಗ್ರಾಹಕ ಸೇವಾ ಕೇಂದ್ರಗಳನ್ನು (customer service Center) ಸ್ಥಾಪಿಸುವ ಯೊಜನೆ ಹಾಕಿಕೊಂಡಿವೆ. ಸಣ್ಣ ನಗರ ಮತ್ತು ಗ್ರಾಮೀಣ ಪ್ರದೇಶಗಳ ಬೇಡಿಕೆ ಹಿನ್ನೆಲೆಯಲ್ಲಿ ಕಂಪನಿ ಈ ಕ್ರಮ ಕೈಗೊಂಡಿದೆ.
7000 ಗ್ರಾಹಕ ಸೇವಾ ಕೇಂದ್ರ ಸ್ಥಾಪನೆಯ ಗುರಿ :
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (Honda Motorcycle & Scooter India) ಇತ್ತೀಚೆಗೆ ಸಿಬಿ -200 ಎಕ್ಸ್ ಮೋಟಾರ್ ಸೈಕಲ್‌ನ ಹೊಚ್ಚಹೊಸ ಮಾದರಿಯನ್ನು ಪರಿಚಯಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಂಪನಿ (company) ಅಧಿಕಾರಿಗಳು ಕಂಪನಿಯ ಮುಂದಿನ ಗುರಿಯ ವಿವರ ಬಹಿರಂಗ ಪಡಿಸಿದರು.
ಇದನ್ನೂ ಓದಿ : EPFO ಖಾತೆದಾರರಿಗೊಂದು ಮಹತ್ವದ ಸುದ್ದಿ! ಇಂದೇ ಈ ಕೆಲಸ ಮುಗಿಸಿ... ಇಲ್ದಿದ್ರೆ..?
ಎಚ್‌ಎಂಎಸ್‌ಐ ಸಿಇಒ ಹೇಳಿದ್ದೇನು..? :
ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಎಂಎಸ್‌ಐ ಸಿಇಒ ಅತ್ಸುಶಿ ಒಗಟ, ಕಂಪನಿಯು ಭಾರತದಲ್ಲಿ ಡೀಲರ್ ಗಳ ನೆಟ ವರ್ಕ್ ಹೆಚ್ಚಿಸುತ್ತಿದೆ. ಸೇವಾ ಕೇಂದ್ರಗಳ ನೆಟ್ ವರ್ಕ್ (network) ಕೂಡಾ ಹೆಚ್ಚುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗಗಳು, ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಕಂಪನಿಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಸುಮಾರು 1000 ಗ್ರಾಹಕ ಸೇವಾ ಕೇಂದ್ರಗಳು (customer service Center)ಸ್ಥಾಪನೆಯಾಗಲಿವೆ. ಈ ಸಂಖ್ಯೆಯನ್ನು 7000ಕ್ಕೆ ಏರಿಸುವ ಗುರಿ ಕಂಪನಿ ಇಟ್ಟುಕೊಂಡಿದೆ ಎಂದು ಹೇಳಿದರು.. ಸೆಮಿಕಂಡಕ್ಟರ್ ಕೊರತೆಯಿಂದಾಗಿ ಕಂಪನಿಯು ಉತ್ಪಾದನಾ ಸಮಸ್ಯೆಗಳನ್ನು ಎದುರಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಮಸ್ಯೆ ಕೆಲವು ಮಾಡೆಲ್ ಗಳ ಮೇಲೆ ಪರಿಣಾಮ ಬೀರಬಹುದು ಎಂದರು.
ಮೋಟಾರ್ ಸೈಕಲ್ ಬೆಲೆ ಕಡಿತಕ್ಕೆ ಯತ್ನ :
ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮವಾಗಿ ಕಂಪನಿಯು ಬೆಲೆಗಳನ್ನು ಹೆಚ್ಚಿಸಿದೆ, ಆದರೆ ಹಬ್ಬದ ಸೀಸನ್ ಸಮೀಪಿಸುತ್ತಿರುವಾಗ ಮತ್ತು ಸರಕುಗಳ ಬೆಲೆ ಸ್ಥಿರವಾಗುವುದರಿಂದ ಬೆಲೆ ಕಡಿತಕ್ಕೂ ಕಂಪನಿ ಪ್ರಯತ್ನ ನಡೆಸಿದೆ ಎಂದು ಕಂಪನಿ ಸಿಇಒ ಹೇಳಿದರು.
ಇದನ್ನೂ ಓದಿ : ಹ್ಯಾಕ್ ಮಾಡಲು ಸಾಧ್ಯವೇ ಇಲ್ಲದಂತಹ ಸ್ಟ್ರಾಂಗ್ ಪಾಸ್ ವರ್ಡ್ ಸೃಷ್ಟಿಸುವುದು ಹೇಗೆ..?
ಹೊಸ ಬೈಕ್‌ಗಾಗಿ ಬುಕಿಂಗ್ ಆರಂಭವಾಗಿದೆ :
ಭಾರತೀಯ ಯುವಕರ ಲೈಫ್ ಸ್ಟೈಲ್ (lifestyle) ಗಮನದಲ್ಲಿಟ್ಟುಕೊಂಡು ಕಂಪನಿಯು CB 200X ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಯುವಕರಿಗೆ ಉತ್ತಮ ಸವಾರಿಯ ಅನುಭವ ನೀಡಲಿದೆ. ಈ ಬೈಕ್ ಬುಕ್ಕಿಂಗ್ ಆರಂಭವಾಗಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ