Gold Price Today: ಮತ್ತೆ ಭರ್ಜರಿ ಏರಿಕೆ ಕಂಡ ಚಿನ್ನದ ಬೆಲೆ , ಬೆಳ್ಳಿ ಕೂಡಾ ದುಬಾರಿ

Gold Price Today: ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭಾರೀ ಏರಿಕೆ ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ ಇಂದು ಮತ್ತೆ 660  ರೂ. ಏರಿಕೆ ಕಂಡಿದೆ. 

Written by - Ranjitha R K | Last Updated : May 25, 2022, 08:08 AM IST
  • ಚಿನ್ನದ ಬೆಲೆಯಲ್ಲಿ ಭಾರೀ ಮತ್ತೆ ಏರಿಕೆ
  • ಪ್ರತಿ 10 ಗ್ರಾಂಗೆ ಚಿನ್ನಕ್ಕೆ 52,090
  • ಬೆಳ್ಳಿ ಕೂಡಾ ದುಬಾರಿ
Gold Price Today: ಮತ್ತೆ ಭರ್ಜರಿ ಏರಿಕೆ ಕಂಡ ಚಿನ್ನದ ಬೆಲೆ , ಬೆಳ್ಳಿ ಕೂಡಾ ದುಬಾರಿ title=
Gold Price Today (file photio)

ಬೆಂಗಳೂರು : Gold Price Today : ಇಂದು ಮತ್ತೆ ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ ಇಂದು ಮತ್ತೆ 660 ರೂ. ಏರಿಕೆ ಕಂಡಿದೆ. 24 ಕ್ಯಾರೆಟ್ ಬಂಗರಾದ ಬೆಲೆ  ಚಿನ್ನದ ಬೆಲೆ 10 ಗ್ರಾಂ ಗೆ 52,090 ರೂ . ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47, 750 ರೂ. ಆಗಿದೆ.  

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ          22 ಕ್ಯಾರೆಟ್ ಚಿನ್ನದ ಬೆಲೆ   24 ಕ್ಯಾರೆಟ್ ಚಿನ್ನದ ಬೆಲೆ
 ಚೆನ್ನೈ 48,360 52,760
ಮುಂಬಯಿ 47,760 52,100
ದೆಹಲಿ     47,760 52,100
ಕೋಲ್ಕತ್ತಾ  47,760 52,100
ಬೆಂಗಳೂರು  47,760 52,100
ಹೈದರಾಬಾದ್  47,760 52,100
ಕೇರಳ  47,760 52,100

ಇದನ್ನೂ ಓದಿ : ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ಪಡೆಯುವ ಅವಕಾಶ

ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡು ಬಂದಿದ್ದು, ಬೆಳ್ಳಿ ದರ ಕೂಡಾ ದುಬಾರಿಯಾಗಿದೆ. ಬೆಳ್ಳಿ ಬೆಲೆಯಲ್ಲಿ 400 ರೂ.ಗಳಷ್ಟು ಏರಿಕೆ ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ಇಂದಿನ ಬೆಳ್ಳಿ ದರ ಎಷ್ಟಿದೆ ನೋಡೋಣ .. 

ನಗರ  ಇಂದಿನ ಬೆಳ್ಳಿ ದರ 
 ಚೆನ್ನೈ 66,100
ಮುಂಬಯಿ 62,000
ದೆಹಲಿ     62,000
ಕೋಲ್ಕತ್ತಾ  62,000
ಬೆಂಗಳೂರು 66,100
ಹೈದರಾಬಾದ್  66,100
ಕೇರಳ  66,100

ಇದನ್ನೂ ಓದಿ : E Cycles Subsidy: ನಿಮ್ಮ ಬಳಿಯೂ ಆಧಾರ್ ಕಾರ್ಡ್ ಇದೆಯೇ? ಸರ್ಕಾರದಿಂದ ಸಿಗುತ್ತೆ 5500 ರೂ.ಗಳ ಪ್ರಯೋಜನ

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3hEw2hy ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News