Hero Dhamaka festive offer: ಬೈಕ್ ಖರೀದಿಸುವವರಿಗೆ ಸಿಗಲಿದೆ 12,500 ರೂ. ಲಾಭ

ಹೀರೋ ಮೋಟಾರ್‌ಸೈಕಲ್‌ಗಳನ್ನು(Motorcycles) ಖರೀದಿಸುವ ಮೂಲಕ 12,500 ರೂ.ಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು.

Written by - Puttaraj K Alur | Last Updated : Oct 11, 2021, 03:13 PM IST
  • ಹೀರೋ ಮೋಟೋಕಾರ್ಪ್ ಗ್ರಾಹಕರಿಗೆ ಧಮಾಕಾ ಹಬ್ಬದ ಕೊಡುಗೆಯನ್ನು ನೀಡುತ್ತಿದೆ
  • ಮೋಟಾರ್‌ಸೈಕಲ್ ಖರೀದಿಸುವ ಮೂಲಕ 12,500 ರೂ.ಗಳವರೆಗೆ ಪ್ರಯೋಜನ ಪಡೆಯಿರಿ
  • ಕಡಿಮೆ ಡೌನ್ ಪೇಮೆಂಟ್, ಕಡಿಮೆ ಬಡ್ಡಿದರ, ನಗದು ರಿಯಾಯಿತಿ ಸೇರಿ ಹಲವು ಕೊಡುಗೆಗಳು ಸಿಗಲಿವೆ
Hero Dhamaka festive offer: ಬೈಕ್ ಖರೀದಿಸುವವರಿಗೆ ಸಿಗಲಿದೆ 12,500 ರೂ. ಲಾಭ title=
ಹೀರೋ ಧಮಾಕಾ ಹಬ್ಬದ ಕೊಡುಗೆ

ನವದೆಹಲಿ: ಹೀರೋ ಮೋಟೋಕಾರ್ಪ್ ಪ್ರಸಕ್ತ ಋತುವಿನಲ್ಲಿ ಗ್ರಾಹಕರಿಗೆ ಧಮಾಕಾ ಹಬ್ಬದ ಕೊಡುಗೆ(Hero's Dhamaka festive offer)ಗಳನ್ನು ನೀಡುತ್ತಿದ್ದು, ನಗದು ರಿಯಾಯಿತಿ, ಸೂಕ್ತವಾದ ಡೌನ್ ಪೇಮೆಂಟ್‌ಗಳು, ಕಡಿಮೆ ಬಡ್ಡಿ ದರಗಳು, ಲಾಯಲ್ಟಿ ಬೋನಸ್‌ಗಳನ್ನು ನೀಡುತ್ತಿದೆ.

ಖರೀದಿದಾರರು ಹೀರೋ ಮೋಟಾರ್‌ಸೈಕಲ್‌ಗಳನ್ನು(Motorcycles) ಖರೀದಿಸುವ ಮೂಲಕ 12,500 ರೂ.ಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಹೀರೋ ಹಬ್ಬದ ಕೊಡುಗೆಯ ವಿವರಗಳು ಇಲ್ಲಿವೆ ನೋಡಿ.

  • ಮೋಟಾರ್‌ಸೈಕಲ್ ಖರೀದಿಸುವವರಿಗೆ 12,500 ರೂ.ವರೆಗೆ ಪ್ರಯೋಜನಗಳು
  • 6,999 ರೂ. ಕಡಿಮೆ ಆರಂಭಿಕ ಡೌನ್ ಪೇಮೆಂಟ್
  • ಶೇ.5.55ರಷ್ಟು ಕಡಿಮೆ ಬಡ್ಡಿ ದರಗಳು
  • ವಿನಿಮಯ ಲಾಯಲ್ಟಿ ಬೋನಸ್(Exchange loyalty bonus): 5,000 ರೂ.
  • ನಗದು ರಿಯಾಯಿತಿ: 2,100 ರೂ.
  • ಕಾರ್ಡ್ ಕೊಡುಗೆಗಳು: 7500 ರೂ. ತ್ವರಿತ ಲಾಭ

ಇದನ್ನೂ ಓದಿ: Cheapest MPV:ಕಡಿಮೆ ವೆಚ್ಚದಲ್ಲಿ ಅತ್ಯಂತ ಅಗ್ಗದ 7 ಸೀಟರ್ ಖರೀದಿಸಬೇಕೆ? ಇಲ್ಲಿದೆ ಸುವರ್ಣಾವಕಾಶ

ನಿಮ್ಮ ಅಗತ್ಯಗಳಿಗೆ ತಕ್ಕಂತೆ ಹಣಕಾಸು ಲಾಭಗಳು

 - ನೋ ಕಾಸ್ಟ್ EMI

- ಕಿಸಾನ್ ಇಎಂಐ

- ನಗದು ಇಎಂಐ

ಇದಲ್ಲದೆ ನೀವು Hero good lifeಗೆ ನೋಂದಾಯಿಸಿಕೊಂಡರೆ, 6,500 ರೂ.ಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು.

ಕೆಲವು ದಿನಗಳ ಹಿಂದೆ ಹೋಂಡಾ(Honda) ‘ನವರಾತ್ರಿಯ’ ಶುಭ ಅವಧಿಯ ಪ್ರಾರಂಭದಲ್ಲಿ ದೇಶದಾದ್ಯಂತ ತನ್ನ ಗ್ರಾಹಕರಿಗೆ ‘ದಿ ಗ್ರೇಟ್ ಹೋಂಡಾ ಫೆಸ್ಟ್’ ಆಫರ್ ಘೋಷಿಸಿತ್ತು. ಈ ಹಬ್ಬದ ಕೊಡುಗೆಯಲ್ಲಿ ಗ್ರಾಹಕರು ತಮ್ಮ ಮೆಚ್ಚಿನ ಹೋಂಡಾ ಕಾರನ್ನು ದೇಶದ ಅಧಿಕೃತ ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಅಕ್ಟೋಬರ್ 31ರವರೆಗೆ ಖರೀದಿಸಿದರೆ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು. ಹೋಂಡಾ ಸಿಟಿ, ಜಾಜ್(Jazz), ಡಬ್ಲ್ಯುಆರ್-ವಿ(WR-V) ಮತ್ತು ಅಮೇಜ್(Amaze) ಮೇಲೆ ಹೋಂಡಾ 53,000 ರೂ. ರಿಯಾಯಿತಿಯನ್ನು ನೀಡುತ್ತಿದೆ.

ಇದನ್ನೂ ಓದಿ: Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News