ಇನ್ಮುಂದೆ ಎಟಿಎಂಗಳಲ್ಲೂ ಸಿಗುತ್ತೆ ರೇಷನ್- ಇಲ್ಲಿದೆ ಹೊಸ ಯೋಜನೆ

ಎಟಿಎಂನಿಂದ ರೇಷನ್: ಹಿಂದೆಲ್ಲಾ ಬ್ಯಾಂಕಿನಿಂದ ಹಣ ಹಿಂಪಡೆಯಲು ಬ್ಯಾಂಕಿನಲ್ಲಿ ಗಂಟೆಗಟ್ಟಲೆ ಕಾಯಬೇಕಿತ್ತು. ಆದರೀಗ ಎಟಿಎಂ ಸೌಲಭ್ಯದಿಂದಾಗಿ ನಮಗೆ ಬೇಕಾದಾಗ ಸುಲಭವಾಗಿ ಹಣ ಡ್ರಾ ಮಾಡಬಹುದಾಗಿದೆ. ಇದೇ ರೀತಿಯ ಸೌಲಭ್ಯ ನಮ್ಮ ರೇಷನ್‌ಗೂ ದೊರೆತರೆ ಹೇಗಿರುತ್ತೇ... ಇದಕ್ಕಾಗಿ ಇನ್ನು ಹೆಚ್ಚು ಕಾಯಬೇಕಿಲ್ಲ.

Written by - Yashaswini V | Last Updated : Jul 21, 2022, 07:27 AM IST
  • ಧಾನ್ಯ ಎಟಿಎಂ ಯಂತ್ರವು ಸಂಪೂರ್ಣವಾಗಿ ಟಚ್ ಸ್ಕ್ರೀನ್ ಆಗಿರುತ್ತದೆ.
  • ಇದರಲ್ಲಿ ಬಯೋಮೆಟ್ರಿಕ್ ಸೌಲಭ್ಯವೂ ಇರಲಿದೆ.
  • ಏನಿದು ಗ್ರೇನ್ ಎಟಿಎಂ ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಎಂದು ತಿಳಿಯಿರಿ
ಇನ್ಮುಂದೆ ಎಟಿಎಂಗಳಲ್ಲೂ ಸಿಗುತ್ತೆ ರೇಷನ್- ಇಲ್ಲಿದೆ ಹೊಸ ಯೋಜನೆ  title=
Ration From ATM

ಎಟಿಎಂನಿಂದ ರೇಷನ್:  ಮೊದಲೆಲ್ಲಾ ಬ್ಯಾಂಕಿನಲ್ಲಿ ಹಣ ಹಾಕಲು ಅಥವಾ ಹಣವನ್ನು ಹಿಂಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯಬೇಕಾಗಿತ್ತು. ಕಾಲಾಂತರದಲ್ಲಿ ಎಟಿಎಂ ಸೌಲಭ್ಯ ಪರಿಚಯಿಸಲಾಯಿತು. ಎಟಿಎಂನಿಂದಾಗಿ ಜನರ ಬ್ಯಾಂಕಿಂಗ್ ಕೆಲಸ ಬಹುಮಟ್ಟಿಗೆ ಕಡಿಮೆ ಆಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದೀಗ ರೇಷನ್ ಅಂದರೆ ತಿಂಗಳ ಪಡಿತರವನ್ನು ಪಡೆಯಲು ಸಹ ಇಂತಹದ್ದೇ ಒಂದು ಸೌಲಭ್ಯ ಲಭ್ಯವಾದರೆ ಹೇಗಿರುತ್ತೇ? ಏನಿದು ಅಂತ ಅಚ್ಚರಿ ಪಡಬೇಡಿ. ಎಟಿಎಂನಿಂದ ರೇಷನ್ ಪಡೆಯುವ ಸಮಯ ದೂರವಿಲ್ಲ. ಇದೀಗ ಪ್ರಾಯೋಗಿಕ ಹಂತದಲ್ಲಿ ಒಡಿಶಾದಲ್ಲಿ ಎಟಿಎಂನಿಂದ ಧಾನ್ಯ ಸೌಲಭ್ಯ ಪ್ರಾರಂಭವಾಗಲಿದೆ. 

ಹೌದು, ಒಡಿಶಾ ರಾಜ್ಯದಲ್ಲಿ ಪ್ರಾಯೋಗಿಕ ಹಂತದಲ್ಲಿ ಎಟಿಎಂನಿಂದ ಅಕ್ಕಿ, ಗೋಧಿ ಸೇರಿದಂತೆ ಪಡಿತರ ಸೌಲಭ್ಯವನ್ನು ಒದಗಿಸಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕೆ ಪಡಿತರ ಎಟಿಎಂ ಅಂದರೆ ಗ್ರೇನ್ ಎಟಿಎಂ ಎಂದೂ ಕರೆಯಲಾಗುತ್ತಿದೆ.  ಎಟಿಎಂನಿಂದ ಧಾನ್ಯ ಸೌಲಭ್ಯದ ಅಡಿಯಲ್ಲಿ ಪಡಿತರ ಡಿಪೋಗಳಲ್ಲಿ ಎಟಿಎಂಗಳಿಂದ ಆಹಾರ ಧಾನ್ಯಗಳನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಈ ರಾಜ್ಯ ಸಿದ್ಧತೆ ನಡೆಸಿದೆ. 

ಇದನ್ನೂ ಓದಿ- Ration Card: ಗುಡ್ ನ್ಯೂಸ್! ಬದಲಾಗಲಿದೆ ಪಡಿತರ ವಿತರಣೆ ನಿಯಮ!

ಏನಿದು ಗ್ರೇನ್ ಎಟಿಎಂ ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಪ್ರಸ್ತುತ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಒಡಿಶಾದ ಭುವನೇಶ್ವರದಲ್ಲಿ ಜಾರಿಗೆ ತರಲಾಗುತ್ತಿದ್ದು, ಇಲ್ಲಿ ಮೊದಲ ಧಾನ್ಯ ಎಟಿಎಂ ಅಂದರೆ ಗ್ರೇನ್ ಎಟಿಎಂ ಅನ್ನು ಸ್ಥಾಪಿಸಲಾಗುವುದು. ಈ ಯೋಜನೆಯಡಿ ಪಡಿತರ ಚೀಟಿದಾರರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಪಡಿತರ ಚೀಟಿಯಲ್ಲಿ ನಮೂದಿಸಿರುವ ಸಂಖ್ಯೆಯನ್ನು ನಮೂದಿಸುವ ಮೂಲಕ ನಿಗದಿತ ದಿನಸಿಯನ್ನು ಪಡೆಯಬಹುದಾಗಿದೆ.

ಈ ಕುರಿತಂತೆ ಮಂಗಳವಾರ(ಜುಲೈ 19) ಒಡಿಶಾ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಆಹಾರ ಸರಬರಾಜು ಮತ್ತು ಗ್ರಾಹಕರ ಕಲ್ಯಾಣ ಸಚಿವ ಅತಾನು ಸಬ್ಯಸಾಚಿ, ರಾಜ್ಯದ ಜನತೆಗೆ ಅನುಕೂಲವಾಗುವಂತೆ ಗ್ರೇನ್ ಎಟಿಎಂನಿಂದ ಪಡಿತರ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಕೆಲವು ನಗರ ಪ್ರದೇಶಗಳಲ್ಲಿ ಪ್ರಾಯೋಗಿಕ ಹಂತವಾಗಿ ಇವುಗಳನ್ನು ಸ್ಥಾಪಿಸಲಾಗುವುದು. ನಂತರದ ದಿನಗಳಲ್ಲಿ ಎಲ್ಲೆಡೆ ಈ ವಿಶೇಷ ಎಟಿಎಂ ಅಳವಡಿಸುವ ಚಿಂತನೆ ಇದೆ ಎಂದು ತಿಲಿಸಿದುರ್.

ಇದನ್ನೂ ಓದಿ- Aadhaar-Ration Link : ಪಡಿತರ ಚೀಟಿ ಫಲಾನುಭವಿಗಳಿಗೆ ಸಿಹಿಸುದ್ದಿ! ಕೇಂದ್ರ ಸರ್ಕಾರ ಮಹತ್ವದ ಘೋಷಣೆ!

ಎಟಿಎಂನಿಂದ ಪಡಿತರ ಪಡೆಯಲು ವಿಶೇಷ ಕೋಡ್ ಅಗತ್ಯ:
ಧಾನ್ಯ ಎಟಿಎಂ ಯಂತ್ರವು ಸಂಪೂರ್ಣವಾಗಿ ಟಚ್ ಸ್ಕ್ರೀನ್ ಆಗಿರುತ್ತದೆ. ಇದರಲ್ಲಿ ಬಯೋಮೆಟ್ರಿಕ್ ಸೌಲಭ್ಯವೂ ಇರಲಿದೆ. ಗ್ರೇನ್ ಎಟಿಎಂನಿಂದ ರೇಷನ್ ಪಡೆಯಲು ವಿಶೇಷ ಕೋಡ್ ಅಗತ್ಯವಿದ್ದು ಸಂಬಂಧಪಟ್ಟವರಿಗೆ ವಿಶೇಷ ಕೋಡ್ ಇರುವ ಕಾರ್ಡ್ ನೀಡಲಾಗುವುದು ಎಂದು ಸಚಿವ ಸಬ್ಯಸಾಚಿ ಹೇಳಿದರು

ವಾಸ್ತವವಾಗಿ, ಹರಿಯಾಣದ ಗುರುಗ್ರಾಮ್‌ನಲ್ಲಿ ದೇಶದ ಮೊದಲ ಧಾನ್ಯ ಎಟಿಎಂ ಅನ್ನು ಸ್ಥಾಪಿಸಲಾಗಿದೆ. ವಿಶ್ವ ಆಹಾರ ಕಾರ್ಯಕ್ರಮದ ಅಡಿಯಲ್ಲಿ ಈ ಯಂತ್ರವನ್ನು ಸರ್ಕಾರವು ಪ್ರಚಾರ ಮಾಡುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News