Investment Options for Housewife : ಉಳಿತಾಯದ ವಿಷಯದಲ್ಲಿ ಮಹಿಳೆಯರು ಸ್ವಲ್ಪ ಮುಂದೆಯೇ ಯೋಚಿಸುತ್ತಾರೆ. ಹತ್ತು ರೂಪಾಯಿಯಲ್ಲಿ ಒಂದು ರೂಪಾಯಿಯಾದರೂ ಉಳಿಸಬೇಕು ಎನ್ನುವ ಯೋಚನೆಯಲ್ಲಿಯೇ ಸದಾ ಇರುತ್ತಾರೆ. ಮನೆ ಖರ್ಚಿಗೆಂದು ಸಿಗುವ ಹಣದಲ್ಲಿಯೇ ಅಷ್ಟೋ ಇಷ್ಟೋ ಉಳಿತಾಯಕ್ಕೆ ಇಳಿದು ಬಿಡುತ್ತಾರೆ. ಮಹಿಳೆಯರಿಗೆಂದೇ ಸರ್ಕಾರ ಕೂಡಾ ಸ್ಕೀಮ್ ವೊಂದನ್ನು ಜಾರಿಗೆ ತಂದಿದೆ. ಈ ಸ್ಕೀಮ್ ಮೂಲಕ ಗೃಹಿಣಿಯ ಲಕ್ಷದ ಒಡತಿಯಾಗುವ ಕನಸು ನನಸಾಗಬಹುದು. .ಇದಕ್ಕಾಗಿ ಕೇವಲ 500 ಅಥವಾ 1000 ರೂ.ಗಳಿಂದ ಹೂಡಿಕೆಯನ್ನು ಪ್ರಾರಂಭಿಸಿದರೆ ಸಾಕು. ಹೌದು, ಕೇವಲ 1000 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಗೃಹಿಣಿ ಕೂಡಾ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸುವುದು ಸಾಧ್ಯವಾಗುತ್ತದೆ.
ಅನೇಕ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು :
ಇಂದು ಕಡಿಮೆ ಹಣದಿಂದಲೂ ಹೂಡಿಕೆಯನ್ನು ಪ್ರಾರಂಭಿಸಬಹುದಾದ ಕೆಲವು ಸ್ಕೀಮ್ ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. PPF ಅಂದರೆ ಸಾರ್ವಜನಿಕ ಭವಿಷ್ಯ ನಿಧಿ, SIP ಮತ್ತು RD ಸೇರಿದಂತೆ ಹಲವು ಆಯ್ಕೆಗಳಿವೆ. ಅಲ್ಲಿ ನೀವು ಹಣವನ್ನು ಹೂಡಿಕೆ ಮಾಡಬಹುದು.
ಸಾರ್ವಜನಿಕ ಭವಿಷ್ಯ ನಿಧಿ (. PPF) :
ಗೃಹಿಣಿಯರು PPF ಅಂದರೆ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಈ ಸಮಯದಲ್ಲಿ, ಸರ್ಕಾರವು ಶೇಕಡಾ 7.1 ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ 15 ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡಬೇಕು. ನಂತರ ಸಂಪೂರ್ಣ ಹಣವನ್ನು ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ.
ಇದನ್ನೂ ಓದಿ :UPI ಬಳಕೆದಾರರಿಗೆ RBI ಸಿಹಿ ಸುದ್ದಿ ! ಇನ್ನು ಒಂದೇ ಬಾರಿಗೆ ಇಷ್ಟು ಮೊತ್ತದ ಹಣ ವರ್ಗಾವಣೆ ಸಾಧ್ಯ
1000 ರೂಪಾಯಿಯಿಂದ ಹೂಡಿಕೆ :
15 ವರ್ಷಗಳವರೆಗೆ ಪ್ರತಿ ತಿಂಗಳು 1000 ರೂಗಳನ್ನು ಠೇವಣಿ ಮಾಡಿದರೆ, ಒಂದು ವರ್ಷದಲ್ಲಿ 12,000 ಮತ್ತು 15 ವರ್ಷಗಳಲ್ಲಿ 1,80,000 ಠೇವಣಿ ಮಾಡಿದಂತೆ ಆಗುತ್ತದೆ. ಇದರ ಬಡ್ಡಿಯಾಗಿ 1,45,457 ರೂಪಾಯಿಗಳನ್ನು ಪಡೆಯಬಹುದು. ಅಂದರೆ ಮೆಚ್ಯೂರಿಟಿ ಅವಧಿಯಲ್ಲಿ ಒಟ್ಟು 3,25,457 ರೂಪಾಯಿಗಳು ನಿಮ್ಮ ಕೈ ಸೇರುತ್ತದೆ.
SIPನಲ್ಲಿಯೂ ಹೂಡಿಕೆ ಮಾಡಬಹುದು :
ಹೂಡಿಕೆ ಮಾಡಲು ಗೃಹಿಣಿಯ ಬಳಿ ಇರುವ ಮತ್ತೊಂದು ಆಯ್ಕೆಯೆಂದರೆ ಮ್ಯೂಚುವಲ್ ಫಂಡ್‌ಗಳಲ್ಲಿ SIP ಮಾಡುವುದು. ಇತ್ತೀಚಿನ ದಿನಗಳಲ್ಲಿ ಜನರು SIP ಅನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇದರಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು. SIP ನಲ್ಲಿ ರಿಟರ್ನ್ ಅಥವಾ ಬಡ್ಡಿ ಬಗ್ಗೆ ಮಾತನಾಡುವುದಾದರೆ, ಸರಾಸರಿ ಇದು ಸುಮಾರು 12 ಶೇಕಡಾ. ಈ ಬಡ್ಡಿ ಹೆಚ್ಚು ಅಥವಾ ಕಡಿಮೆ ಆಗಬಹುದು.
ಪ್ರತಿ ತಿಂಗಳು 1000 ರೂಪಾಯಿಗಳ SIP ಮಾಡುತ್ತೀರಿ ಎಂದಿಟ್ಟುಕೊಳ್ಳಿ, 15 ವರ್ಷಗಳಲ್ಲಿ 1,80,000 ರೂಪಾಯಿಗಳನ್ನು ಇಲ್ಲಿ ಹೂಡಿಕೆ ಮಾಡುತ್ತೀರಿ. ನೀವು ಶೇಕಡಾ 12 ರ ದರದಲ್ಲಿ ಬಡ್ಡಿಯನ್ನು ಪಡೆದರೆ, 3,24,576 ರೂ ಬಡ್ಡಿ ನಿಮ್ಮ ಖಾತೆ ಸೇರುತ್ತದೆ. ಈ ಮೂಲಕ 15 ವರ್ಷಗಳಲ್ಲಿ 5,04,576 ರೂ. ಆದಾಯ ಗಳಿಸಬಹುದು.
ಇದನ್ನೂ ಓದಿ : ಸರ್ಕಾರಿ ನೌಕರರ ವೇತನದಲ್ಲಿ 20484 ರೂ. ಹೆಚ್ಚಳ ! ಯಾವ ಲೆಕ್ಕಾಚಾರ ಇಲ್ಲಿದೆ ಸಂಪೂರ್ಣ ವಿವರ !
RD :
ಇದಲ್ಲದೆ, ನೀವು ಸಂಪೂರ್ಣವಾಗಿ ಸುರಕ್ಷಿತ ಆಯ್ಕೆಯನ್ನು ಬಯಸಿದರೆ ಬ್ಯಾಂಕ್‌ನಲ್ಲಿ ಆರ್‌ಡಿಯನ್ನು ತೆರೆಯಬಹುದು. ಹೂಡಿಕೆದಾರರು ಆರ್‌ಡಿಯಲ್ಲಿ ಸ್ಥಿರ ಲಾಭವನ್ನು ಪಡೆಯುತ್ತಾರೆ. ಅಲ್ಪಾವಧಿಗೆ ಹೂಡಿಕೆ ಮಾಡುವುದಾದರೆ RD ಅತ್ಯುತ್ತಮ ಆಯ್ಕೆಯಾಗಿದೆ. 5 ವರ್ಷಗಳ ಕಾಲ ಅಂಚೆ ಕಚೇರಿಯಲ್ಲಿ ಆರ್‌ಡಿ ಮಾಡಿಸಿಕೊಳ್ಳಬಹುದು. ಇದರ ಮೇಲೆ ನೀವು ಸುಮಾರು 6.5 ಶೇಕಡಾ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಬಹುದು.
ಉದಾಹರಣೆಗೆ, ನೀವು 1000 ರೂ.ಯಂತೆ 5 ವರ್ಷಗಳಲ್ಲಿ 60,000 ಹೂಡಿಕೆ ಮಾಡಿದರೆ ಮುಕ್ತಾಯದ ಮೇಲೆ 70,989 ಪಡೆಯುತ್ತೀರಿ. ನೀವು ಈ ಹಣವನ್ನು ಹಿಂಪಡೆಯಬಹುದು ಅಥವಾ ಅದನ್ನು ಎಫ್‌ಡಿಯಲ್ಲಿ ಠೇವಣಿ ಮಾಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.