ಬೆಂಗಳೂರು : ನೀವು ಉದ್ಯೋಗದಲ್ಲಿದ್ದು, ನಿಮ್ಮ ಕಂಪನಿಯು ಪ್ರಾವಿಡೆಂಟ್ ಫಂಡ್ (ಇಪಿಎಫ್ಒ) ಹಣವನ್ನು ವೇತನದಿಂದ ಕಡಿತಗೊಳಿಸುತ್ತಿದ್ದರೆ, ಇದು ನಿಮಗೆ ಪ್ರಮುಖ ಸುದ್ದಿಯಾಗಿರಲಿದೆ. ಬಹಳ ದಿನಗಳ ನಂತರ ಪಿಎಫ್ ಖಾತೆದಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಪ್ರತಿ ತಿಂಗಳು ಉದ್ಯೋಗಿಯ ವೇತನದಿಂದ ಒಂದು ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಿ ಅದನ್ನು PF ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಅಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತರ ಪರವಾಗಿಯೂ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಬಗ್ಗೆ ಸರ್ಕಾರ ಹೇಳಿದ್ದೇನು ? :
2021-22ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿಯನ್ನು ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ಸಂಬಂಧಿಸಿದ ಉದ್ಯೋಗಿಗಳ ಖಾತೆಗಳಿಗೆ ಜಮಾ ಮಾಡಲಾಗಿಲ್ಲ ಎಂದು ವರದಿಯಾಗಿದೆ. ಈ ಹಣಕಾಸು ವರ್ಷಕ್ಕೆ, ಬಡ್ಡಿ ದರವನ್ನು ಸರ್ಕಾರವು 8.1 ಶೇಕಡಾ ದರದಲ್ಲಿ ನಿಗದಿಪಡಿಸಿದೆ. ಈ ಬಗ್ಗೆ ಕೆಲ ಜನಪ್ರತಿನಿಧಿಗಳು ಹಾಗೂ ನೌಕರರ ಸಂಘಟನೆಗಳು ಬಹಳ ದಿನಗಳಿಂದ ಪ್ರಶ್ನಿಸಿದ್ದವು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ ಲೋಕಸಭೆಯಲ್ಲಿ ಈ ಕುರಿತು ಉತ್ತರ ನೀಡಿದ್ದಾರೆ .
ಇದನ್ನೂ ಓದಿ : Today Vegetable Price: ಇಂದು ರಾಜ್ಯದಲ್ಲಿ ಯಾವ ತರಕಾರಿಗೆ ಎಷ್ಟು ಬೆಲೆ?
ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ ಕೇಂದ್ರ ರಾಜ್ಯ ಸಚಿವ ರಾಮೇಶ್ವರ್ ತೇಲಿ, ಇಪಿಎಫ್ ಖಾತೆಗೆ ಬಡ್ಡಿಯನ್ನು ಜಮಾ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ಹೊಸ ತಂತ್ರಾಂಶ ಅಳವಡಿಕೆ ಬಳಿಕ ನಿಗದಿತ ವಿಧಾನದ ಆಧಾರದಲ್ಲಿ ಬಡ್ಡಿ ಜಮಾ ಮಾಡಲಾಗುತ್ತಿದೆ. ಟಿಡಿಎಸ್ಗೆ ಸಂಬಂಧಿಸಿದ ಹೊಸ ನಿಯಮಗಳಿಂದಾಗಿ, ಪಿಎಫ್ ಖಾತೆಗೆ ಬಡ್ಡಿ ಠೇವಣಿ ಮಾಡುವ ಪ್ರಕ್ರಿಯೆಯು ನಿಧಾನವಾಗಿದೆ ಎಂದು ಹೇಳಿದ್ದಾರೆ.
98 ರಷ್ಟು ಖಾತೆದಾರರ ಖಾತೆಗೆ ಹಣ :
ಈಗ 2021-22 ರ ಹಣಕಾಸು ವರ್ಷದಲ್ಲಿ ಸುಮಾರು 98 ಪ್ರತಿಶತದಷ್ಟು ಪಿಎಫ್ ಖಾತೆದಾರರ ಖಾತೆಗಳಲ್ಲಿ ಸರ್ಕಾರವು ಠೇವಣಿ ಮಾಡಿದೆ. 2021-22 ರ ಹಣಕಾಸು ವರ್ಷದಲ್ಲಿ, ಇಪಿಎಫ್ ಮೇಲಿನ ಬಡ್ಡಿ ದರವನ್ನು ಶೇಕಡಾ 8.1 ಕ್ಕೆ ನಿಗದಿಪಡಿಸಲಾಗಿದೆ. ಹೀಗಿರುವಾಗ ನಿಮ್ಮ ಪಿಎಫ್ ಖಾತೆಯಲ್ಲಿ ಬಡ್ಡಿ ಹಣವನ್ನು ಠೇವಣಿ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಶೀಘ್ರವೇ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : ಆಧಾರ್ಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ನಿರ್ಧಾರ, ಲಕ್ಷಾಂತರ ಜನರಿಗೆ ಲಾಭ
PF ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ಹೇಗೆ ? :
1.- ಮೊದಲನೆಯದಾಗಿ EPFO ಪೋರ್ಟಲ್ www.epfindia.gov.in ಗೆ ಭೇಟಿ ನೀಡಿ .
2. ಇಲ್ಲಿ E-PassBook ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಹೊಸ ಪುಟದಲ್ಲಿ UAN ಮೇಲೆ ಕ್ಲಿಕ್ ಮಾಡಿ ಮತ್ತು ಪಾಸ್ವರ್ಡ್ ನಮೂದಿಸಿ.
3. ಕೆಳಗೆ ನೀಡಲಾದ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
4. ಲಾಗಿನ್ ಆದ ನಂತರ, ಸದಸ್ಯ ID ಆಯ್ಕೆಯನ್ನು ಆರಿಸಿ.
5. ಇಲ್ಲಿ PDF ರೂಪದಲ್ಲಿ ಪಾಸ್ಬುಕ್ ಕಾಣಿಸುತ್ತದೆ. ಇದರಲ್ಲಿ ಇತ್ತೀಚೆಗೆ ಬಂದ ಬಡ್ಡಿ ಮೊತ್ತ ಇತ್ಯಾದಿಗಳನ್ನು ಪರಿಶೀಲಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.