PPF Account New Rule: ಪಿಪಿಎಫ್ ಖಾತೆ ನಿಯಮಗಳನ್ನು ಬದಲಾಯಿಸಿದ ಸರ್ಕಾರ

PPF Account New Rule: PPF ಖಾತೆಯಲ್ಲಿ ಹೂಡಿಕೆ ಮಾಡುವ ಮೊದಲು, ಸರ್ಕಾರವು ಬದಲಾಯಿಸಿದ ಹೊಸ ನಿಯಮವನ್ನು ಓದಬೇಕು. ಹಣಕಾಸು ಸಚಿವಾಲಯವು ಈ ಸರ್ಕಾರಿ ಉಳಿತಾಯ ಯೋಜನೆಯ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.

Written by - Yashaswini V | Last Updated : Mar 5, 2022, 01:56 PM IST
  • ಪಿಪಿಎಫ್ ಖಾತೆ ನಿಯಮಗಳಲ್ಲಿ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ
  • ಇದು ಪಿಪಿಎಫ್‌ನಲ್ಲಿ ಹೂಡಿಕೆದಾರರ ಮೇಲೆ ನೇರ ಪರಿಣಾಮ ಬೀರುತ್ತದೆ
  • PPF ಖಾತೆಯಲ್ಲಿ ಹೂಡಿಕೆ ಮಾಡುವ ಮುನ್ನ ಹೊಸ ನಿಯಮಗಳ ಬಗ್ಗೆ ತಿಳಿಯಿರಿ
PPF Account New Rule: ಪಿಪಿಎಫ್ ಖಾತೆ ನಿಯಮಗಳನ್ನು ಬದಲಾಯಿಸಿದ ಸರ್ಕಾರ  title=
PPF Account New Rule

PPF Account New Rule: ನೀವು PPF ಖಾತೆಯಲ್ಲಿ (PPF Account) ಹೂಡಿಕೆ ಮಾಡುವುದಾದರೆ, ಈ ಸುದ್ದಿಯನ್ನು ಓದಲೇಬೇಕು. ಪಿಪಿಎಫ್ ಖಾತೆ ನಿಯಮಗಳಲ್ಲಿ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಇದು ಪಿಪಿಎಫ್‌ನಲ್ಲಿ ಹೂಡಿಕೆದಾರರ ಮೇಲೆ ನೇರ ಪರಿಣಾಮ ಬೀರುತ್ತದೆ.  ಡಿಸೆಂಬರ್ 12, 2019 ರಂದು ಅಥವಾ ನಂತರ ಒಂದೇ ವ್ಯಕ್ತಿ ತೆರೆದಿರುವ ಎರಡು ಅಥವಾ ಹೆಚ್ಚಿನ PPF ಖಾತೆಗಳನ್ನು ವಿಲೀನಗೊಳಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಹಣಕಾಸು ಸಚಿವಾಲಯದಿಂದ ಈ ಸಂಬಂಧ ಕಚೇರಿ ಮೆಮೊರಾಂಡಮ್ (OM)/ ಕಛೇರಿಯ ಜ್ಞಾಪಕ ಪತ್ರವನ್ನು ಸಹ ನೀಡಲಾಗಿದೆ.

2019 ರ ನಿಯಮಗಳನ್ನು ಉಲ್ಲೇಖಿಸಲಾಗಿದೆ:
ಪಿಪಿಎಫ್ ಖಾತೆಗಳನ್ನು (PPF Account) ನಿರ್ವಹಿಸುವ ಸಂಸ್ಥೆಗಳು ಡಿಸೆಂಬರ್ 12 ಅಥವಾ ನಂತರ ತೆರೆಯಲಾದ ಪಿಪಿಎಫ್ ಖಾತೆಗಳನ್ನು ವಿಲೀನಗೊಳಿಸಲು ವಿನಂತಿಗಳನ್ನು ಕಳುಹಿಸಬಾರದು ಎಂದು ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ. ಇದರ ಹಿಂದೆ, ಪಿಪಿಎಫ್‌ನ 2019 ರ ನಿಯಮಗಳನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ- Retirement Planning : ನಿವೃತ್ತಿ ಹೂಡಿಕೆಗೆ PPF ಅಥವಾ NPS ಯಾವುದು ಉತ್ತಮ? ಲೆಕ್ಕಾಚಾರ ಇಲ್ಲಿದೆ

ಒಂದು ಖಾತೆ ಮಾತ್ರ ಸಕ್ರಿಯವಾಗಿರುತ್ತದೆ:
ಕಛೇರಿಯ ಜ್ಞಾಪಕ ಪತ್ರವನ್ನು ನೀಡಿದ ನಂತರ, ಪೋಸ್ಟ್ ಆಫೀಸ್ (Post Office) ಹೊರಡಿಸಿದ ಸುತ್ತೋಲೆಯಲ್ಲಿ, ಡಿಸೆಂಬರ್ 12, 2019 ರಂದು ಅಥವಾ ನಂತರ ತೆರೆಯಲಾದ ಎರಡು ಅಥವಾ ಹೆಚ್ಚಿನ PF ಖಾತೆಗಳಲ್ಲಿ ಒಂದು ಖಾತೆ ಮಾತ್ರ ಸಕ್ರಿಯವಾಗಿರುತ್ತದೆ ಎಂದು ಹೇಳಲಾಗಿದೆ. ಉಳಿದ ಖಾತೆಗಳನ್ನು ಮುಚ್ಚಲಾಗುವುದು. ಮುಚ್ಚಲು ಯಾವುದೇ ಖಾತೆಗೆ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ- ಈ ಟ್ರಿಕ್ ಮೂಲಕ PPF ನಲ್ಲಿ ಹಣ ಠೇವಣಿ ಮಾಡಿ! ₹1.5 ಕೋಟಿವರೆಗೆ ಲಾಭ ಪಡೆಯಿರಿ : ಲೆಕ್ಕಾಚಾರ ನೋಡಿ

ಉದಾಹರಣೆಗೆ, ನೀವು ಜನವರಿ 2014 ರಲ್ಲಿ ಒಂದು PPF ಖಾತೆಯನ್ನು ಮತ್ತು ಫೆಬ್ರವರಿ 2020 ರಲ್ಲಿ ಇನ್ನೊಂದು ಖಾತೆಯನ್ನು ತೆರೆದಿದ್ದರೆ ಈ ಸಂದರ್ಭದಲ್ಲಿ ಫೆಬ್ರವರಿ 2020 ರ ನಿಮ್ಮ PPF ಖಾತೆಯನ್ನು ಮುಚ್ಚಲಾಗುತ್ತದೆ. ಈ ಖಾತೆಯಲ್ಲಿ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. ಅದೇ ರೀತಿ, ನೀವು ಮೊದಲ ಖಾತೆಯನ್ನು ಜನವರಿ 2014 ರಲ್ಲಿ ಮತ್ತು ಎರಡನೆಯದನ್ನು ಫೆಬ್ರವರಿ 2017 ರಲ್ಲಿ ತೆರೆದಿದ್ದರೆ, ನಿಮ್ಮ ಕೋರಿಕೆಯ ಮೇರೆಗೆ ಈ ಎರಡನ್ನೂ ವಿಲೀನಗೊಳಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News