FD ಹೂಡಿಕೆ ಮಾಡುವವರಿಗೊಂದು ಗುಡ್ ನ್ಯೂಸ್, ಈ ಬ್ಯಾಂಕ್ ಗಳಲ್ಲಿ PPF-SSY ಗಿಂತ ಹೆಚ್ಚು ಬಡ್ಡಿ ಸಿಗುತ್ತಿದೆ!

Highest FD Interest Rates: ಯೂನಿಟಿ ಮತ್ತು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಹಕರಿಗೆ ಸ್ಥಿರ ಠೇವಣಿಗಳ ಮೇಲೆ ಶೇ.9ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡುತ್ತಿವೆ . ಈ ಎರಡೂ ಸಣ್ಣ ಹಣಕಾಸು ಬ್ಯಾಂಕ್‌ಗಳ ವಿವಿಧ ಅವಧಿಯ FDಗಳ ಮೇಲಿನ ದರಗಳು ಉದ್ಯೋಗಿಗಳ ಭವಿಷ್ಯ ನಿಧಿಯ (EPF) ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ಯಂತಹ ಹೊಜನೆಗಳಿಗಿಂತ ಹೆಚ್ಚಾಗಿದೆ.  

Written by - Nitin Tabib | Last Updated : Apr 28, 2024, 07:21 PM IST
  • ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ. 4.5 ರಿಂದ ಶೇ 9 ವರೆಗೆ ಬಡ್ಡಿಯನ್ನು ನೀಡುತ್ತಿದೆ.
  • ಬ್ಯಾಂಕ್ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ.9.5 ಬಡ್ಡಿ ನೀಡುತ್ತಿದೆ.
  • ಈ ಬಡ್ಡಿಯನ್ನು 1001 ದಿನಗಳ ಅವಧಿಯ FD ಯೋಜನೆಯಲ್ಲಿ ನೀಡಲಾಗುತ್ತಿದೆ.
FD ಹೂಡಿಕೆ ಮಾಡುವವರಿಗೊಂದು ಗುಡ್ ನ್ಯೂಸ್, ಈ ಬ್ಯಾಂಕ್ ಗಳಲ್ಲಿ PPF-SSY ಗಿಂತ ಹೆಚ್ಚು ಬಡ್ಡಿ ಸಿಗುತ್ತಿದೆ! title=

FD Interest Rates: ನೀವೂ ಕೂಡ ಸ್ಥಿರ ಠೇವಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ. ಹೌದು, ಕೆಲವು ಖಾಸಗಿ ಬ್ಯಾಂಕ್‌ಗಳು ಎಫ್‌ಡಿಗೆ ಬಂಪರ್ ಬಡ್ಡಿ ನೀಡುತ್ತಿವೆ. ಆರ್ಬಿಐ ರೆಪೊ ದರವು ಶೇ. 6.5 ತಲುಪಿದ ಬಳಿಕ, ಅನೇಕ ಬ್ಯಾಂಕುಗಳು FD ಯಲ್ಲಿ ಉತ್ತಮ ಆದಾಯವನ್ನು ನೀಡುತ್ತಿವೆ. ಯೂನಿಟಿ ಮತ್ತು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಶೇಕಡಾ 9 ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡುತ್ತಿವೆ. ಈ ಎರಡೂ ಸಣ್ಣ ಹಣಕಾಸು ಬ್ಯಾಂಕ್‌ಗಳ ವಿವಿಧ ಅವಧಿಯ FD ಗಳ ಮೇಲಿನ ಹೂಡಿಕೆಯು ಉದ್ಯೋಗಿಗಳ ಭವಿಷ್ಯ ನಿಧಿಯ (EPF) ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ಗಳಂತಹ ಹೂಡಿಕೆ ಯೋಜನೆಗಳಿಗಿಂತ ಹೆಚ್ಚಾಗಿದೆ.

ಇದನ್ನೂ ಓದಿ-Best Budget Bikes: 80Kmpl ಗೂ ಅಧಿಕ ಮೈಲೆಜ್ ನೀಡುವ ಬೆಸ್ಟ್ ಬಜೆಟ್ ಬೈಕ್ಸ್ ಇಲ್ಲಿವೆ!

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ. 4.5 ರಿಂದ ಶೇ 9 ವರೆಗೆ ಬಡ್ಡಿಯನ್ನು ನೀಡುತ್ತಿದೆ. ಬ್ಯಾಂಕ್ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ.9.5 ಬಡ್ಡಿ ನೀಡುತ್ತಿದೆ. ಈ ಬಡ್ಡಿಯನ್ನು 1001 ದಿನಗಳ ಅವಧಿಯ FD ಯೋಜನೆಯಲ್ಲಿ ನೀಡಲಾಗುತ್ತಿದೆ. ಆದರೆ ಸಾಮಾನ್ಯ ಹೂಡಿಕೆದಾರರಿಗೆ ಈ ಬಡ್ಡಿ ಶೇ.9 ರಷ್ಟಿದೆ. ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ಬ್ಯಾಂಕ್‌ನಿಂದ ಶೇ. 4.5 ರಿಂದ ಶೇ. 9.5 ವರೆಗಿನ ಬಡ್ಡಿದರ ಸಿಗುತ್ತಿದೆ.

ಇದನ್ನೂ ಓದಿ-Anant Ambani ವಿವಾಹದಲ್ಲಿ Mukesh Ambani ಎಷ್ಟು ಹಣ ಖರ್ಚು ಮಾಡಲು ಬಯಸಿದ್ದಾರೆ ಗೊತ್ತಾ?

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಪರಿಪಕ್ವವಾಗುವ FD ಗಳ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇ.4 ರಿಂದ ಶೇ. 9.1 ರಷ್ಟು  ಬಡ್ಡಿಯನ್ನು ನೀಡುತ್ತಿದೆ. ಬ್ಯಾಂಕ್‌ನಿಂದ, ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ. 4.5 ರಿಂದ ಶೇ. 9.6 ವರೆಗೆ ಬಡ್ಡಿಯನ್ನು ಪಡೆಯಲಿದ್ದಾರೆ. ಐದು ವರ್ಷಗಳ ಅವಧಿಗೆ ಶೇ. 9.1 ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ. ಸಾಮಾನ್ಯ ಗ್ರಾಹಕರು 5 ವರ್ಷಗಳ ಠೇವಣಿಗಳ ಮೇಲೆ ಶೇ. 9.10 ಬಡ್ಡಿದರವನ್ನು ಪಡೆಯಬಹುದು ಎಂದು ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೇಳಿದೆ. ಹಿರಿಯ ನಾಗರಿಕರಿಗೆ, ಈ ಬಡ್ಡಿ ದರವು ಶೇಕಡಾ 0.5 ರಷ್ಟು ಹೆಚ್ಚು ಅಂದರೆ ಶೇ. 9.60% ಆಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News