Indian Railways: ರೈಲ್ವೆ ಪ್ರಯಾಣಿಸುವವರಿಗೆ ಗುಡ್ ನ್ಯೂಸ್! ಇಂದಿನಿಂದ ಸಿಗಲಿದೆ ಈ ಬಿಗ್ ರಿಲೀಫ್

ಪ್ರಯಾಣಿಕರು ಈಗ ಸಾಮಾನ್ಯ ಟಿಕೆಟ್‌ನಲ್ಲಿ ಯಾವುದೇ ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

Written by - Puttaraj K Alur | Last Updated : Jun 29, 2022, 12:39 PM IST
  • ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್
  • ಜೂನ್ 29ರಿಂದ ಎಲ್ಲಾ ರೈಲುಗಳಲ್ಲಿ ಸಾಮಾನ್ಯ ವರ್ಗದ ಟಿಕೆಟ್ ಲಭ್ಯ
  • ಪ್ರಯಾಣಿಕರು ಟಿಕೆಟ್ ದರದಲ್ಲಿ 20 ರೂ.ವರೆಗೆ ಹಣ ಉಳಿಸಬಹುದು
Indian Railways: ರೈಲ್ವೆ ಪ್ರಯಾಣಿಸುವವರಿಗೆ ಗುಡ್ ನ್ಯೂಸ್! ಇಂದಿನಿಂದ ಸಿಗಲಿದೆ ಈ ಬಿಗ್ ರಿಲೀಫ್  title=
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್

ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ನೆಮ್ಮದಿಯ ಸುದ್ದಿ ನೀಡಿದೆ. ಇಂದಿನಿಂದ ಅಂದರೆ ಜೂನ್ 29ರಿಂದ ಎಲ್ಲಾ ರೈಲುಗಳಲ್ಲಿ ಸಾಮಾನ್ಯ ವರ್ಗದ ಟಿಕೆಟ್ ಲಭ್ಯವಿರುತ್ತದೆ. ಈ ಸೌಲಭ್ಯದಿಂದ ಪ್ರಯಾಣಿಕರು ಟಿಕೆಟ್ ಕೌಂಟರ್‌ನಿಂದ ಕಾಯ್ದಿರಿಸದೆ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯಿಂದ ಪ್ರಯಾಣಿಕರು ಟಿಕೆಟ್ ದರದಲ್ಲಿ 20 ರೂ.ವರೆಗೆ ಹಣ ಉಳಿಸಬಹುದಾಗಿದೆ. ಇದರೊಂದಿಗೆ ಸಾಮಾನ್ಯ ವರ್ಗದ ಕೋಚ್‌ಗಳಲ್ಲಿ ಮೀಸಲಾತಿ ವ್ಯವಸ್ಥೆ ಸಂಪೂರ್ಣವಾಗಿ ರದ್ದಾಗಲಿದೆ. ಜುಲೈ 1ರ ವೇಳೆಗೆ ಈ ವ್ಯವಸ್ಥೆಯು ಸಂಪೂರ್ಣವಾಗಿ ಟ್ರ್ಯಾಕ್‌ಗೆ ಮರಳಲಿದೆ.

ಸಾಮಾನ್ಯ ಟಿಕೆಟ್‌ನಲ್ಲಿ ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ 

ಪ್ರಯಾಣಿಕರು ಈಗ ಸಾಮಾನ್ಯ ಟಿಕೆಟ್‌ನಲ್ಲಿ ಯಾವುದೇ ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಪ್ರಯಾಣಿಕರು ಸಾಮಾನ್ಯ ಟಿಕೆಟ್‌ನಲ್ಲಿ 15 ರೂ., ಸ್ಲೀಪರ್‌ಗೆ 20 ರೂ., AC-3 Tierನಲ್ಲಿ 40 ರೂ., AC-2 Tierನಲ್ಲಿ 50 ರೂ. ಮತ್ತು AC-1 Tierನಲ್ಲಿ 60 ರೂ.ಗಳನ್ನು ಕಾಯ್ದಿರಿಸುವ ಶುಲ್ಕವನ್ನು ಪಾವತಿಸಬೇಕಾಗಿದೆ.

ಇದನ್ನೂ ಓದಿ: Stock Market: ಮತ್ತೆ ಟೊಮೆಟೊ ಬೆಲೆಗೆ ಕುಸಿದ ಜೋಮ್ಯಾಟೊ ಷೇರು!

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರೈಲುಗಳಲ್ಲಿ ಸಾಮಾನ್ಯ ಟಿಕೆಟ್ ಸೌಲಭ್ಯವು ಒಂದು ಕಡೆಯಿಂದ ಮಾತ್ರ ಲಭ್ಯವಿದೆ. ಕೊರೊನಾ ಅವಧಿಯಲ್ಲಿ ರೈಲುಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ರೈಲ್ವೆ ಸಾಮಾನ್ಯ ಬೋಗಿಗಳಲ್ಲಿ ಕಾಯ್ದಿರಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಸಾಮಾನ್ಯ ಕೋಚ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು ಪ್ರಯಾಣ ದರದ ಜೊತೆಗೆ 15 ರೂ.ಗಳನ್ನು ಕಾಯ್ದಿರಿಸುವ ಶುಲ್ಕ ಪಾವತಿಸಬೇಕಾಗಿತ್ತು. ಸಾಮಾನ್ಯ ಬೋಗಿಗಳಲ್ಲಿ ಸೀಟುಗಳು ಖಾಲಿ ಇದ್ದರೂ ರೈಲು ಹೊರಡುವ 4 ಗಂಟೆಗಳ ಮೊದಲು ಟಿಕೆಟ್ ಕಾಯ್ದಿರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.

ರೈಲ್ವೆ ಇಲಾಖೆ ಪ್ರಕಾರ, ಬಹುತೇಕ ರೈಲುಗಳಲ್ಲಿ ಸಾಮಾನ್ಯ ಟಿಕೆಟ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇಂದಿನಿಂದ ಪಶ್ಚಿಮ ಕೇಂದ್ರ ರೈಲ್ವೆಯ ರೈಲುಗಳಲ್ಲಿ ಈ ವ್ಯವಸ್ಥೆ ಆರಂಭವಾಗಲಿದೆ. ಇದರ ನಂತರ ಜುಲೈ 5ರೊಳಗೆ ರೈಲುಗಳ 100 ಪ್ರತಿಶತ ಸಾಮಾನ್ಯ ಬೋಗಿಗಳಿಗೆ ಕಾಯ್ದಿರಿಸುವ ಜವಾಬ್ದಾರಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ್‌ನ ಫೋಟೋಕಾಪಿ ಯಾರಿಗಾದರೂ ನೀಡಿದ್ದೀರಾ? ಜಾಗರೂಕರಾಗಿರಿ!

ಸಾಮಾನ್ಯ ಟಿಕೆಟ್ ಕ್ಲೋಸ್ ಮಾಡಲಾಗಿದೆ

ಕೊರೊನಾ ಸಾಂಕ್ರಾಮಿಕದ ಮೊದಲು ಬಹುತೇಕ ಎಲ್ಲಾ ರೈಲುಗಳಲ್ಲಿ ಸಾಮಾನ್ಯ ವರ್ಗದ ಟಿಕೆಟ್‌ಗಳು ಲಭ್ಯವಿದ್ದವು. ಕೋವಿಡ್ ಅವಧಿಯಲ್ಲಿ ಕೆಲವು ತಿಂಗಳುಗಳ ಕಾಲ ರೈಲುಗಳ ಸೇವೆಯನ್ನು ನಿಲ್ಲಿಸಲಾಗಿತ್ತು. ನಂತರ ಹಳಿಯಲ್ಲಿ ಮತ್ತೆ ರೈಲುಗಳು ಓಡಲಾರಂಭಿಸಿದಾಗ ಜನರಲ್ ಟಿಕೆಟ್‍ಗಳನ್ನು ಕ್ಲೋಸ್ ಮಾಡಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News