ದೇಶಾದ್ಯಂತದ ಅನ್ನದಾತರಿಗೆ ಕೃಷಿ ಸಚಿವರ ಉಡುಗೊರೆ, ಈ ದಿನ ಖಾತೆಗೆ ಬರಲಿದೆ ಪಿಎಂ ಕಿಸಾನ್ 15ನೇ ಕಂತು!

Good News For Farmers: ಒಂದು ವೇಳೆ ನೀವೂ ಕೂಡ ಪಿಎಂ ಕಿಸಾನ್ ಲಾಭಾರ್ಥಿಗಳಾಗಿದ್ದು, ಪಿಎಂ ಕಿಸಾನ್ ನ 15 ನೇ ಕಂತಿಗಾಗಿ ಕಾಯುತ್ತಿದ್ದಾರೆ, ಈ ಸುದ್ದಿ ನಿಮಗಾಗಿ. ಏಕೆಂದರೆ ನಿಮ್ಮ ನಿರೀಕ್ಷೆಗೆ ಶೀಘ್ರದಲ್ಲಿಯೇ ತೆರೆಬೀಳಲಿದೆ. ನವೆಂಬರ್ 15 ರಂದು ದೇಶದ ಕೋಟ್ಯಾಂತರ ರೈತರ ಖಾತೆಗೆ 15ನೇ ಕಂತು ಡಿಬಿಟಿ ಮೂಲಕ ವರ್ಗಾವಣೆಯಾಗಲಿದೆ.(Business News In Kannada)

Written by - Nitin Tabib | Last Updated : Nov 13, 2023, 04:12 PM IST
  • ದೇಶದಾದ್ಯಂತ ರೈತರಿಗೆ ಸರ್ಕಾರದಿಂದ ವಾರ್ಷಿಕ 6000 ರೂ. ಈ ಯೋಜನೆಯ ಅಡಿ ಸಿಗುತ್ತದೆ.
  • ಇದುವರೆಗೆ 14 ಕಂತುಗಳ ಹಣವನ್ನು ಸರ್ಕಾರ ರೈತರ ಖಾತೆಗೆ ವರ್ಗಾಯಿಸಿದೆ. ನ.15ರಂದು ರೈತರಿಗೆ 15ನೇ ಕಂತಿನ ಹಣವೂ ಸಿಗಲಿದೆ.
  • ಈ ಹಣವನ್ನು ದೀಪಾವಳಿ ನಂತರ ರೈತರಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಕೇಂದ್ರ ಕೃಷಿ ಸಚಿವರು ಮಾಹಿತಿ ನೀಡಿದ್ದಾರೆ.
ದೇಶಾದ್ಯಂತದ ಅನ್ನದಾತರಿಗೆ ಕೃಷಿ ಸಚಿವರ ಉಡುಗೊರೆ, ಈ ದಿನ ಖಾತೆಗೆ ಬರಲಿದೆ ಪಿಎಂ ಕಿಸಾನ್ 15ನೇ ಕಂತು! title=

ನವದೆಹಲಿ: ದೇಶಾದ್ಯಂತ ದೀಪಾವಳಿ ಹಬ್ಬವನ್ನು ಹರ್ಷೋಲ್ಲಾಸದಿಂದ ಆಚರಿಸಲಾಗುತ್ತಿದೆ. ಏತನ್ಮದ್ಯೆ ದೇಶಾದ್ಯಂತದ ರೈತರ ಪಾಲಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಸಹ ಪಿಎಂ ಕಿಸಾನ್  15 ನೇ ಕಾಂತಿನ ಹಣಕ್ಕಾಗಿ ಕಾಯುತ್ತಿದ್ದರೆ... ನಿಮ್ಮ ಕಾಯುವಿಕೆ ಶೀಘ್ರದಲ್ಲೇ ಅಂತ್ಯವಾಗಲಿದೆ. ನವೆಂಬರ್ 15 ರಂದು ಕೋಟ್ಯಾಂತರ ರೈತರು 15ನೇ ಕಂತಿನ ಹಣವನ್ನು ಪಡೆಯಬಹುದು. ಮುಂದಿನ ಕಂತಿನ ಹಣವನ್ನು ನೀವು ಪಡೆಯುತ್ತೀರಾ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿದಳು ನೀವು ಮೊದಲು ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬೇಕು. (Business News In Kannada)

ಸರ್ಕಾರವು ಅನೇಕ ಅನರ್ಹ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಖಾತೆಗೆ 15ನೇ ಕಂತಿನ ಹಣ ಬರುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲೇ ಪರಿಶೀಲಿಸಬೇಕು.

ಮಾಹಿತಿ ನೀಡಿದ ಕೇಂದ್ರ ಸಚಿವರು
ಈ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಅವರು ಟ್ವಿಟ್ಟರ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡು, 'ಪ್ರಧಾನಮಂತ್ರಿ ಶ್ರೀ @narendramodi ji ಅವರು 15 ನವೆಂಬರ್ 2023 ರಂದು ದೇಶದ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 15 ನೇ ಕಂತು DBT ಮೂಲಕ ವರ್ಗಾಯಿಸಲಿದ್ದಾರೆ' ಎಂದಿದ್ದಾರೆ.

ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿ
>> ಮೊದಲಿಗೆ ನೀವು https://pmkisan.gov.in/ ಗೆ ಹೋಗಬೇಕು.
>> ಇದರ ನಂತರ, ನೀವು ಪೆಮೆಂಟ್ ಸಕ್ಸೆಸ್ ಫುಲ್ ಟ್ಯಾಬ್ ಅಡಿಯಲ್ಲಿ ಭಾರತದ ನಕ್ಷೆಯನ್ನು ನೋಡುವಿರಿ.
>> ಹಳದಿ ಬಣ್ಣದ ಡ್ಯಾಶ್‌ಬೋರ್ಡ್ ಅದರ ಬಲಭಾಗದಲ್ಲಿ ಕಾಣಿಸಲಿದೆ.
>> ನೀವು ಈ ಡ್ಯಾಶ್‌ಬೋರ್ಡ್ ಮೇಲೆ ಕ್ಲಿಕ್ ಮಾಡಬೇಕು.
>> ಇಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.
>> ಈಗ ನೀವು ನಿಮ್ಮ ರಾಜ್ಯ, ಜಿಲ್ಲೆ, ಪಂಚಾಯತ್ ಇತ್ಯಾದಿಗಳನ್ನು ಆಯ್ಕೆ ಮಾಡಬೇಕು.
>> ಇದರ ನಂತರ ಸ್ಟೇಟಸ್ ತಿಳಿಯಲು 'Get Report' ಮೇಲೆ ಕ್ಲಿಕ್ ಮಾಡಿ
>>ಇದರ ನಂತರ ಸ್ಕ್ರೀನ್ ಮೇಲೆ ನಿಮ್ಮ ವಿವರಗಳು ಬಿತ್ತರಗೊಳ್ಳಲಿವೆ.

ಇದನ್ನೂ ಓದಿ-ಪಿಎಫ್ ಚಂದಾದಾರರಿಗೊಂದು ಗುಡ್ ನ್ಯೂಸ್, ಖಾತೆಗೆ ಬಡ್ಡಿ ಬಂತು, ಮನೆಯಲ್ಲಿಯೇ ಕುಳಿತು ಈ ರೀತಿ ಪರಿಶೀಲಿಸಿ

ವಾರ್ಷಿಕವಾಗಿ ರೂ 6000 ಪಡೆಯಿರಿ
ದೇಶದಾದ್ಯಂತ ರೈತರಿಗೆ ಸರ್ಕಾರದಿಂದ ವಾರ್ಷಿಕ 6000 ರೂ. ಈ ಯೋಜನೆಯ ಅಡಿ ಸಿಗುತ್ತದೆ.  ಇದುವರೆಗೆ 14 ಕಂತುಗಳ ಹಣವನ್ನು ಸರ್ಕಾರ ರೈತರ ಖಾತೆಗೆ ವರ್ಗಾಯಿಸಿದೆ. ನ.15ರಂದು ರೈತರಿಗೆ 15ನೇ ಕಂತಿನ ಹಣವೂ ಸಿಗಲಿದೆ. ಈ ಹಣವನ್ನು ದೀಪಾವಳಿ ನಂತರ ರೈತರಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಕೇಂದ್ರ ಕೃಷಿ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ-Diwali 2023 ಗೂ ಮುನ್ನವೇ ಹೊಸ ಪ್ರಿಪೈಡ್ ಯೋಜನೆ ಬಿಡುಗಡೆಗೊಳಿಸಿದ ಜಿಯೋ, ಸಿಗಲಿದೆ 150 ಜಿಬಿಗೂ ಅಧಿಕ ಡೇಟಾ!

ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ
ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಫಲಾನುಭವಿಗಳು pmkisan-ict@gov.in ಗೆ ಮೇಲ್ ಮಾಡಬಹುದು. ಇದಲ್ಲದೆ, ನೀವು ಸಹಾಯವಾಣಿ ಸಂಖ್ಯೆ 155261, 1800115526 ಅಥವಾ 011-23381092 ಅನ್ನು ಸಹ ಸಂಪರ್ಕಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News