Union Budget 2024: ಬಜೆಟ್ ಮಂಡನೆಗೂ ಮುನ್ನ ಒಂದು ಗುಡ್ ನ್ಯೂಸ್, ಐಫೋನ್ ನಂತಹ ಸ್ಮಾರ್ಟ್ ಫೋನ್ ಗಳು ಇನ್ಮುಂದೆ ಅಗ್ಗದ ದರದಲ್ಲಿ ಸಿಗಲಿವೆ!

Budget 2024: ದೇಶದಲ್ಲಿ ಅನೇಕ ದೊಡ್ಡ ಮೊಬೈಲ್ ಕಂಪನಿಗಳು ಕಾಂಟ್ರ್ಯಾಕ್ಟ ಮ್ಯಾನುಫ್ಯಾಕ್ಚರಿಂಗ್ ಮೇಲೆ ಕಾರ್ಯನಿರ್ವಹಿಸುತ್ತಿದ್ದು. ಇವುಗಳಲ್ಲಿ ಡಿಕ್ಸನ್, ವಿಸ್ಟ್ರಾನ್ ಮುಂತಾದ ಹೆಸರುಗಳು ಶಾಮೀಳಾಗಿವೆ. ಆಪಲ್ ಕುರಿತು ಹೇಳುವುದಾದರೆ, ಭಾರತದಲ್ಲಿ ಅದರ ಒಟ್ಟು ಉತ್ಪಾದನಾ ಗುರಿ 18% ಆಗಿದ್ದು, ಕಂಪನಿ 2025 ರ ವೇಳೆಗೆ, ಒಟ್ಟು ಉತ್ಪಾದನೆಯ ಶೇ.18 ರಷ್ಟನ್ನು ಭಾರತಕ್ಕೆ ಶಿಫ್ಟ್ ಮಾಡಲಿದೆ.(Budget 2024 News In Kannada / Business News In Kannada)  

Written by - Nitin Tabib | Last Updated : Feb 1, 2024, 10:06 AM IST
  • ಮೊಬೈಲ್ ತಯಾರಿಕಾ ಕಂಪನಿ ಹೂವೇ ಚೀನಾದಲ್ಲಿ ತನ್ನ ಮಾರುಕಟ್ಟೆಯನ್ನು ವೇಗವಾಗಿ ಹೆಚ್ಚಿಸಿಕೊಂಡಿದೆ.
  • ಹೂವೇನ ಹೊಸ ಸ್ಮಾರ್ಟ್‌ಫೋನ್ Mate 60 ಅನ್ನು ಬಿಡುಗಡೆ ಮಾಡುವ ಮೂಲಕ, ಚೀನಾದಲ್ಲಿ ಐಫೋನ್‌ಗೆ ಕಠಿಣ ಸ್ಪರ್ಧೆಯನ್ನು ನೀಡಿದೆ.
  • ಅಮೆರಿಕದ ನಿಷೇಧದ ನಂತರ ಕೆಟ್ಟ ಹಂತವನ್ನು ಎದುರಿಸಿದ ಚೀನಾದ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್ ಮೇಟ್ 60 ನೊಂದಿಗೆ ಮಾರುಕಟ್ಟೆಯಲ್ಲಿ ಬಲವಾದ ಪುನರಾಗಮನ ಮಾಡಿದೆ.
Union Budget 2024: ಬಜೆಟ್ ಮಂಡನೆಗೂ ಮುನ್ನ ಒಂದು ಗುಡ್ ನ್ಯೂಸ್, ಐಫೋನ್ ನಂತಹ ಸ್ಮಾರ್ಟ್ ಫೋನ್ ಗಳು ಇನ್ಮುಂದೆ ಅಗ್ಗದ ದರದಲ್ಲಿ ಸಿಗಲಿವೆ! title=

Budget 2024 Smartphones: ಬಜೆಟ್ ಮಂಡನೆಗೂ ಒಂದು ದಿನ ಮೊದಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮೊಬೈಲ್ ಬಿಡಿಭಾಗಗಳ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರೀಮಿಯಂ ಮೊಬೈಲ್‌ಗಳಲ್ಲಿ ಬಳಸಲಾಗುವ ಬಿಡಿಭಾಗಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ.ಇದು ಭಾರತ ಸರ್ಕಾರದ ಸ್ವಾಗತಾರ್ಹ ಹೆಜ್ಜೆಯಾಗಿದೆ, ಇದು ಸ್ಮಾರ್ಟ್‌ಫೋನ್‌ಗಳ ಬೆಲೆಯ ಮೇಲೆ ಪರಿಣಾಮ ಬೀರಬಹುದು ಎಂದು ಹಿರಿಯ ವಿಶ್ಲೇಷಕ ಪ್ರಾಚೀರ್ ಸಿಂಗ್ ಹೇಳಿದ್ದಾರೆ. ಈ ಹೆಜ್ಜೆಯೊಂದಿಗೆ, ಸ್ಮಾರ್ಟ್ಫೋನ್ ಉದ್ಯಮವನ್ನು ಉತ್ತೇಜಿಸಲು ಸರ್ಕಾರ ಉದ್ದೇಶಿಸಿದೆ. OEM ಗಳು ವೆಚ್ಚವನ್ನು ಕಡಿಮೆ ಮಾಡುವಲ್ಲಿ ಪ್ರಯೋಜನ ಪಡೆಯಲಿವೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ಇದರ ಲಾಭವನ್ನು ಪಡೆಯುತ್ತಾರೆ. ಈ ಕ್ರಮವು ಸ್ಮಾರ್ಟ್‌ಫೋನ್ ಬೆಲೆಗಳನ್ನು ಶೇ. 3-5ರಷ್ಟು ಕಡಿಮೆ ಮಾಡಲು ಸಹಾಯ ಮಾಡಲಿದೆ.(Budget 2024 News In Kannada / Business News In Kannada)

ಮೊಬೈಲ್ ಬಿಡಿಭಾಗಗಳ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರೀಮಿಯಂ ಮೊಬೈಲ್ ಬಿಡಿಭಾಗಗಳ ಮೇಲೆ ಸರ್ಕಾರವು ಪ್ರಸ್ತುತ ಶೇ. 15 ರಷ್ಟು  ಸುಂಕವನ್ನು ವಿಧಿಸುತ್ತದೆ. ಹೊಸ ನಿರ್ಧಾರದಲ್ಲಿ ಸರ್ಕಾರ ಸುಂಕವನ್ನು ಶೇ.10ಕ್ಕೆ ಇಳಿಸಿದೆ. ಡ್ಯೂಟಿ ಕಡಿತಗೊಳಿಸಲಾದ ಮೊಬೈಲ್ ಭಾಗಗಳಲ್ಲಿ ಸ್ಕ್ರೂಗಳು, ಸಿಮ್ ಸಾಕೆಟ್‌ಗಳು ಮತ್ತು ಇತರ ಯಾಂತ್ರಿಕ ಭಾಗಗಳು ಶಾಮೀಲಾಗಿವೆ.

ಸರ್ಕಾರದ ಈ ನಿರ್ಧಾರದಿಂದ ಪ್ರೀಮಿಯಂ ಮೊಬೈಲ್ ತಯಾರಿಸುವ ಕಂಪನಿಗಳಿಗೆ ನೇರವಾಗಿ ಲಾಭವಾಗಲಿದೆ. ಈ ನಿರ್ಧಾರದ ನಂತರ, ಭಾರತದ ಮೊಬೈಲ್ ರಫ್ತು ವೇಗವಾಗಿ ಹೆಚ್ಚಾಗುವ ನಿರೀಕ್ಷೆ ಇದೆ. ಭಾರತದ ಪ್ರಸ್ತುತ ಮೊಬೈಲ್ ರಫ್ತು ಸುಮಾರು 70000 ಕೋಟಿ ರೂ.ಗಳಾಗಿದೆ. ಆಪಲ್, ಸ್ಯಾಮ್‌ಸಂಗ್‌ನಂತಹ ಕಂಪನಿಗಳಿಗೆ ಈ ನಿರ್ಧಾರದಿಂದ ಲಾಭವಾಗಲಿದೆ. ಈ ನಿರ್ಧಾರದಿಂದ ಮೊಬೈಲ್ ಮ್ಯಾನುಫ್ಯಾಕ್ಷರಿಂಗ್ ಗೂ ಲಾಭವಾಗಲಿದೆ.

ಇದನ್ನೂ ಓದಿ-Union Budget 2024: ನೌಕರ ವರ್ಗದ ಜನರಿಗೆ ಒಂದು ಭಾರಿ ಸಂತಸದ ಸುದ್ದಿ!

ಯಾವ ಕಂಪನಿಗಳು ಒಪ್ಪಂದದಲ್ಲಿ ಶಾಮೀಲಾಗಿವೆ?
ದೇಶದಲ್ಲಿ ಅನೇಕ ದೊಡ್ಡ ಮೊಬೈಲ್ ಕಂಪನಿಗಳು ಕಾಂಟ್ರ್ಯಾಕ್ಟ ಮ್ಯಾನುಫ್ಯಾಕ್ಚರಿಂಗ್ ಮೇಲೆ ಕಾರ್ಯನಿರ್ವಹಿಸುತ್ತಿದ್ದು. ಇವುಗಳಲ್ಲಿ ಡಿಕ್ಸನ್, ವಿಸ್ಟ್ರಾನ್ ಮುಂತಾದ ಹೆಸರುಗಳು ಶಾಮೀಳಾಗಿವೆ. ಆಪಲ್ ಕುರಿತು ಹೇಳುವುದಾದರೆ, ಭಾರತದಲ್ಲಿ ಅದರ ಒಟ್ಟು ಉತ್ಪಾದನಾ ಗುರಿ 18% ಆಗಿದ್ದು, ಕಂಪನಿ 2025 ರ ವೇಳೆಗೆ, ಒಟ್ಟು ಉತ್ಪಾದನೆಯ ಶೇ.18 ರಷ್ಟನ್ನು ಭಾರತಕ್ಕೆ ಶಿಫ್ಟ್ ಮಾಡಲಿದೆ.

ಇದನ್ನೂ ಓದಿ-IMPS Rule Change: ಫೆಬ್ರುವರಿ 1 ರಿಂದ ಬದಲಾಗಲಿದೆ ಹಣ ವರ್ಗಾವಣೆ ವಿಧಾನದ ಈ ನಿಯಮ, ನೀವು ತಿಳಿದುಕೊಳ್ಳಿ!

ಚೀನಾದಲ್ಲಿ ಐಫೋನ್ ಮಾರಾಟ ಕುಸಿತ ಕಂಡಿದೆ
ಮೊಬೈಲ್ ತಯಾರಿಕಾ ಕಂಪನಿ ಹೂವೇ ಚೀನಾದಲ್ಲಿ ತನ್ನ ಮಾರುಕಟ್ಟೆಯನ್ನು ವೇಗವಾಗಿ ಹೆಚ್ಚಿಸಿಕೊಂಡಿದೆ. ಹೂವೇನ ಹೊಸ ಸ್ಮಾರ್ಟ್‌ಫೋನ್ Mate 60 ಅನ್ನು ಬಿಡುಗಡೆ ಮಾಡುವ ಮೂಲಕ, ಚೀನಾದಲ್ಲಿ ಐಫೋನ್‌ಗೆ ಕಠಿಣ ಸ್ಪರ್ಧೆಯನ್ನು ನೀಡಿದೆ. ಅಮೆರಿಕದ ನಿಷೇಧದ ನಂತರ ಕೆಟ್ಟ ಹಂತವನ್ನು ಎದುರಿಸಿದ ಚೀನಾದ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್ ಮೇಟ್ 60 ನೊಂದಿಗೆ ಮಾರುಕಟ್ಟೆಯಲ್ಲಿ ಬಲವಾದ ಪುನರಾಗಮನ ಮಾಡಿದೆ. ಇದು ಕೆಲವೇ ದಿನಗಳಲ್ಲಿ ಚೀನಾದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ, ಇದರಿಂದ ಚೀನಾದಲ್ಲಿ ಐಫೋನ್ ಮಾರಾಟವು ದೊಡ್ಡ ಹಿನ್ನಡೆ ಅನುಭವಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News