ನವದೆಹಲಿ : ಬಜೆಟ್ ನಂತರ ಚಿನ್ನ (Gold), ಬೆಳ್ಳಿಯ (Silver) ಧಾರಣೆಯಲ್ಲಿ ಸತತ ಕುಸಿತ ದಾಖಲಾಗುತ್ತಿದೆ. ಚಿನ್ನ ಆಮದಿಗೆ ಇದ್ದ ಕಸ್ಟಮ್ ಸುಂಕವನ್ನು (Custom duty) ಕಡಿಮೆ ಮಾಡಿದ್ದೇ ಈ ಬೆಳವಣಿಗೆಗೆ ಕಾರಣ. ಈ ವಾರದ ಚಿನ್ನದ ಧಾರಣೆಯನ್ನು ಗಮನಿಸಿದರೆ, ಚಿನ್ನ ಖರೀದಿಗೆ ಈಗ ಚಿನ್ನದಂಥಹ ಸಮಯ ಬಂದಿದೆ ಎಂದೇ ಹೇಳಬಹುದು.
ಚಿನ್ನ ಖರೀದಿಗಿದು ಒಳ್ಳೆ ಸಮಯ ಯಾಕೆ.? :
ಚಿನ್ನದ ಧಾರಣೆ (Gold rate)ಸತತವಾಗಿ ಕುಸಿಯುತ್ತಿದೆ. ಆದರೆ, ಕಳೆದ ವಾರದಲ್ಲಿ ಚಿನ್ನದ ಕುಸಿಯುವ ವೇಗದಲ್ಲಿ ಒಂದು ಸ್ಥಿರತೆ ಬಂದಿದೆ. ಈ ವಾರದಲ್ಲಿ ಬುಧವಾರ ತನಕ ಕೇವಲ 500 ರಿಂದ 600 ರೂಪಾಯಿ ದರ ವ್ಯತ್ಯಾಸ ದಾಖಲಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಹೆಚ್ಚುಕಡಿಮೆ 1500 ರೂಪಾಯಿ ಬೆಲೆ ಕುಸಿದಿದೆ. ಇದೀಗ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಚಿನ್ನಕ್ಕೆ ಹೆಚ್ಚು ಕಡಿಮೆ 48,000 ಬೆಲೆ ಇದೆ .
ಇದನ್ನೂ ಓದಿ : Gold Rate Today: ಚಿನ್ನದ ಬೆಲೆಯಲ್ಲಿ ರೂ.10,000 ಗಳಷ್ಟು ಇಳಿಕೆ, ಇಂದೇ ಖರೀದಿಸಿ
ಚಿನ್ನದ ಪ್ಯೂಚರ್ ಟ್ರೇಡಿಂಗ್ ಹೇಗಿದೆ..? :
ಚಿನಿವಾರ ಪೇಟೆಯಲ್ಲಿ ಚಿನ್ನದ ಫ್ಯೂಚರ್ ಟ್ರೇಡಿಂಗ್ (Future Trading) ನಡೆಯುತ್ತದೆ. ಅದನ್ನು ಕಮೋಡಿಟಿ ಎಕ್ಸ್ಚೇಂಜ್ ಮಾರುಕಟ್ಟೆ ಅಥವಾ ಎಂಸಿಎಕ್ಸ್ (MCX) ಎಂದು ಕರೆಯಲಾಗುತ್ತದೆ. ಈ ಮಾರುಕಟ್ಟೆಯಲ್ಲಿ ಏಪ್ರಿಲ್ ತಿಂಗಳ ವಾಯಿದೆಗೆ ಹತ್ತು ಗ್ರಾಂ ಚಿನ್ನದ ಬೆಲೆ 48 ಸಾವಿರ ಅಜೂಬಾಜಿನಲ್ಲಿಯೇ ಮಾರಾಟವಾಗುತ್ತಿದೆ. ದರ ವ್ಯತ್ಯಾಸ ಕೂಡಾ ಹತ್ತು ಗ್ರಾಂ ಚಿನ್ನದ ಮೇಲೆ ಹೆಚ್ಚು ಕಡಿಮೆ 500 ರೂಪಾಯಿ ಅಷ್ಟೇ ಇದೆ.
ಚಿನ್ನದ ಹೂಡಿಕೆಗೆ ಇದು ಸಕಾಲವೇ.? :
ಪಂಡಿತರ (Expert) ಪ್ರಕಾರ ಭಾರತದಲ್ಲಿ ಚಿನ್ನದ ಹೂಡಿಕೆಗೆ ಎಲ್ಲಾ ಕಾಲವೂ ಒಳ್ಳೆಯದೇ. ಯಾಕೆಂದರೆ, ಚಿನ್ನ ಎಲ್ಲಾ ಕಾಲದಲ್ಲೂ ಉತ್ತಮ ರಿಟರ್ನ್ (Return)ನೀಡುತ್ತದೆ. ಇಷ್ಟೇ ಅಲ್ಲ, ಭಾರತೀಯರು ಎಲ್ಲಾ ಕಾಲದಲ್ಲೂ ಚಿನ್ನ (Gold) ಖರೀದಿಸುತ್ತಾರೆ. ಹಬ್ಬ, ಮದುವೆ, ವಿಶೇಷ ಸಂದರ್ಭದಲ್ಲಿ ಭಾರತೀಯರಿಗೆ ಚಿನ್ನ ಬೇಕೇ ಬೇಕು. ಬೆಲೆ ಎಷ್ಟೇ ಇರಲಿ, ಹೇಗೆ ಇರಲಿ ಭಾರತೀಯರು ಚಿನ್ನ ಖರೀದಿಯನ್ನು ಬಿಡಲ್ಲ. ಆದರೆ, ಮಾರುಕಟ್ಟೆ ಪಂಡಿತರ ಪ್ರಕಾರ, ಹೂಡಿಕೆಗಾಗಿ ಚಿನ್ನ ಖರೀದಿಸಲು ಇದು ಸರಿಯಾದ ಸಮಯ. ಆದರೆ, ಎಲ್ಲಾ ಹೂಡಿಕೆ ಮೊತ್ತವನ್ನು ಚಿನ್ನದ ಮೇಲೆ ಹಾಕುವುದು ಸರಿಯಲ್ಲ. ಯಾಕೆಂದರೆ, ಚಿನ್ನದ ಖರೀದಿಯಲ್ಲಿ ಈಗ ರಿಸ್ಕ್ (Risk) ಅಂಶ ಹೆಚ್ಚಿಗೆ ಇದೆ.
ಇದನ್ನೂ ಓದಿ : SBI Home Loan: ಕನಸಿನ ಮನೆ ಖರೀದಿಸ ಬೇಕೇ? ಮಾರ್ಚ್ 2021ರವರೆಗೆ SBI ನೀಡುತ್ತಿದೆ ಈ ಅವಕಾಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.