Gold-Silver Price: ಕಾರ್ಮಿಕರ ದಿನದ ಬಂಪರ್‌ ಆಫರ್‌: ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?

ಕಳೆದ ಕೆಲ ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೆ ಇಳಿಕೆ ಕಂಡಿದೆ. ಕಳೆದ ದಿನ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಕಡಿಮೆಯಾಗಿದೆ.   

Written by - Bhavishya Shetty | Last Updated : May 1, 2022, 08:58 AM IST
  • ಅಕ್ಷಯ ತೃತೀಯ ಬಂಪರ್‌ ಆಫರ್‌
  • ಇಂದಿನ ಬಂಗಾರದ ಬೆಲೆಯಲ್ಲಿ ಇಳಿಕೆ
  • ಇಲ್ಲಿದೆ ಇಂದಿನ ಚಿನ್ನದ ಸುದ್ದಿ
Gold-Silver Price: ಕಾರ್ಮಿಕರ ದಿನದ ಬಂಪರ್‌ ಆಫರ್‌:  ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? title=
Gold price

ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ಹಿಂದೂ ಧಾರ್ಮಿಕ ಹಬ್ಬ ಅಕ್ಷಯ ತೃತೀಯ ಹಬ್ಬ ಬರಲಿದೆ. ಈ ಸಂದರ್ಭದಲ್ಲಿ ಚಿನ್ನ ಖರೀದಿಸಲು ಜನರು ಮುಂದಾಗುತ್ತಾರೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಬಂಗಾರದ ಬೆಲೆಯಲ್ಲಿ ಏರಿಳಿಕೆ ಕಾಣುವುದು ಸಾಮಾನ್ಯ. ಇನ್ನು ಇಂದು ಕಾರ್ಮಿಕರ ದಿನಾಚರಣೆಯಾಗಿದ್ದು, ಬಂಪರ್‌ ಆಫರ್‌ ಎಂಬಂತೆ ಚಿನ್ನ ಪ್ರಿಯರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಅದೇನೆಂದರೆ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಇದನ್ನು ಓದಿ: Viral Video: ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ಗ್ಯಾರಂಟಿ ನೀರು ಬರುತ್ತೆ!

ಕಳೆದ ಕೆಲ ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೆ ಇಳಿಕೆ ಕಂಡಿದೆ. ಕಳೆದ ದಿನ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಕಡಿಮೆಯಾಗಿದೆ. ಇಂದು (ಮೇ 1) 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ 52,800 ರೂ. ಆಗಿದ್ದು, ಬೆಲೆಯಲ್ಲಿ 160 ರೂ. ಕುಸಿತ ಕಂಡುಬಂದಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿಯೂ 500 ರೂ. ಇಳಿಕೆಯಾಗಿದ್ದು ಕೆಜಿ ಬೆಳ್ಳಿಯ ಬೆಲೆ 63,500 ರೂ. ಆಗಿದೆ. ಕಳೆದ ದಿನ 64000 ರೂ.ಗೆ ಬೆಳ್ಳಿ ಮಾರಾಟವಾಗುತ್ತಿತ್ತು. 

ಮೇಕಿಂಗ್ ಚಾರ್ಜ್‌ಗಳು, ರಾಜ್ಯ ತೆರಿಗೆಗಳು ಮತ್ತು ಅಬಕಾರಿ ಸುಂಕದಂತಹ ಅಂಶಗಳಿಂದಾಗಿ ಹಳದಿ ಲೋಹದ ದರವು ಪ್ರತಿದಿನ ಭಿನ್ನವಾಗಿರುತ್ತದೆ. ಇಂದು ದೇಶಾದ್ಯಂತ ಕೆಲವು ನಗರಗಳ ಚಿನ್ನದ ದರಗಳು ಇಲ್ಲಿವೆ:

ಗುಡ್ ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ, ಬೆಂಗಳೂರು, ಹೈದರಾಬಾದ್‌ ಕೇರಳ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವನ್ನು 48,400 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ 49,030 ರೂ.ಗೆ ಹಳದಿ ಲೋಹ ಮಾರಾಟವಾಗುತ್ತಿದೆ. ಇನ್ನು 24 ಗ್ರಾಂ ಚಿನ್ನದ ಬೆಲೆ ಬೆಂಗಳೂರು, ಹೈದರಾಬಾದ್‌ ಕೇರಳ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 52,800 ರೂ. ಇದ್ದು, ಚೆನ್ನೈನಲ್ಲಿ 53,490 ರೂ. ಇದೆ. 

ಇದನ್ನು ಓದಿ: ಗ್ರಾಹಕರೇ ಗಮನಿಸಿ: ಇಲ್ಲಿದೆ ಇಂದಿನ ಇಂಧನ ಬೆಲೆ

ಮಧುರೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 49,030 ರೂ. ಇದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 53,490 ರೂ. ಇದೆ. ಇನ್ನು ಪಾಟ್ನಾದಲ್ಲಿ 24-ಕ್ಯಾರೆಟ್ ಶುದ್ಧತೆಯ ಚಿನ್ನಕ್ಕೆ 52,880 ರೂ. ಇದ್ದರೆ, 22 ಕ್ಯಾರೆಟ್‌ ಚಿನ್ನದ ಬೆಲೆ 48,480 ರೂ. ಇದೆ. ಮೈಸೂರು, ಮಂಗಳೂರು, ವಿಜಯವಾಡದಲ್ಲಿ ಇದೇ ಪ್ರಮಾಣದ 22 ಕ್ಯಾರೆಟ್ ಶುದ್ಧತೆ 48,400 ರೂ.ಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 52,880 ರೂ. ಇದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News