ನವದೆಹಲಿ : ನೀವು ಪಿಂಚಣಿದಾರರಾಗಿದ್ದರೆ (Pensioner) , ನೀವು ಓದಲೇ ಬೇಕಾದ ಸುದ್ದಿ ಇದು. ನವೆಂಬರ್ ತಿಂಗಳು ಮುಗಿಯುವ ಹಂತದಲ್ಲಿದೆ. ನವೆಂಬರ್ ಅಂತ್ಯದ ಮೊದಲು ಅಂದರೆ ಇನ್ನೆರಡು ದಿನಗಳಲ್ಲಿ ಮಾಡಿ ಮುಗಿಸಬೇಕಾದ ಕೆಲವು ಕಾರ್ಯಗಳಿವೆ. ಈ ಕೆಲಸಗಳನ್ನು ನೀವು ಸಮಯಕ್ಕೆ ಸರಿಯಾಗಿ ಮಾಡದಿದ್ದರೆ, ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ.
ನವೆಂಬರ್ 30 ರ ಮೊದಲು ಮಾಡಿ ಮುಗಿಸಬೇಕಾದ ಕೆಲಸಗಳಿವು :
ಜೀವನ ಪ್ರಮಾಣಪತ್ರವನ್ನು ಸಲ್ಲಿಸಿ :
ಪಿಂಚಣಿದಾರರು ನವೆಂಬರ್ 30 ರ ಮೊದಲು ಜೀವನ ಪ್ರಮಾಣಪತ್ರವನ್ನು (Life certificate) ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ. ನೀವು ಸಹ ಪಿಂಚಣಿದಾರರಾಗಿದ್ದರೆ, ನಿಮ್ಮ ಜೀವನ ಪ್ರಮಾಣಪತ್ರವನ್ನು ಕೊನೆಯ ದಿನಾಂಕದ ಮೊದಲು ಸಲ್ಲಿಸಬೇಕು. ಪಿಂಚಣಿದಾರರು (Pension) ಜೀವಂತವಾಗಿದ್ದಾರೆ ಎಂಬುದಕ್ಕೆ ಈ ಜೀವನ ಪ್ರಮಾಣಪತ್ರ ಸಾಕ್ಷಿಯಾಗಿರುತ್ತದೆ. ಜೀವನ ಪ್ರಮಾಣಪತ್ರ ಸಲ್ಲಿಸದೆ ಹೋದರೆ, ಪಿಂಚಣಿ ನಿಲ್ಲಬಹುದು.
ಇದನ್ನೂ ಓದಿ : Indian Railways: ಇನ್ಮುಂದೆ ರೈಲು ಟಿಕೆಟ್ ಬುಕ್ ಮಾಡುವ ವೇಳೆ ಕನ್ಫರ್ಮ್ ಲೋವರ್ ಬರ್ತ್ ಸಿಗಲಿದೆ! ಹೇಗೆ ಇಲ್ಲಿದೆ ವಿವರ
LIC ಹೌಸಿಂಗ್ ಫೈನಾನ್ಸ್ನಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿ :
ನೀವು ಗೃಹ ಸಾಲವನ್ನು (Home loan) ಪಡೆಯಲು ಬಯಸುವುದಾದರೆ, LIC ಹೌಸಿಂಗ್ ಫೈನಾನ್ಸ್ನ ವಿಶೇಷ ಗೃಹ ಸಾಲವು ಈ ತಿಂಗಳು ಮುಕ್ತಾಯಗೊಳ್ಳಲಿದೆ. ಈ ವಿಶೇಷ ಕೊಡುಗೆಯ ಅಡಿಯಲ್ಲಿ, ಎಲ್ಐಸಿ ಹೌಸಿಂಗ್ ಫೈನಾನ್ಸ್ (LIC Housing finance) 2 ಕೋಟಿ ರೂ.ವರೆಗಿನ ಗೃಹ ಸಾಲಗಳಿಗೆ ಸಾಲದ ದರವನ್ನು ಶೇಕಡಾ 6.66 ಕ್ಕೆ ಇಳಿಸಿದೆ. ಅಂದರೆ, ಈ ಗೃಹ ಸಾಲಕ್ಕೆ ಕಡಿಮೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಆಫರ್ ನ ಕೊನೆಯ ದಿನಾಂಕ ನವೆಂಬರ್ 30 ಆಗಿದೆ.
ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ನೋಂದಾಯಿಸಿ :
ಜವಾಹರ ನವೋದಯ ವಿದ್ಯಾಲಯದ (Navodaya school) 9ನೇ ತರಗತಿಯ ಪ್ರವೇಶಕ್ಕಾಗಿ ನವೆಂಬರ್ 30 ರ ಮೊದಲು ಅರ್ಜಿ ಸಲ್ಲಿಸಬೇಕು. 30 ಏಪ್ರಿಲ್ 2022 ರಂದು ನಡೆಯಲಿರುವ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ. ಈ ದಿನಾಂಕದವರೆಗೆ, ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್ಸೈಟ್ navodaya.gov.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ (Online) ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : 7th Pay Commission: Big Update - ಈ ದಿನ ಸರ್ಕಾರಿ ನೌಕರರ ಖಾತೆ ಸಿರಲಿದೆ 18 ತಿಂಗಳ DA ಬಾಕಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ