ಬ್ಯಾಂಕ್ ಎಟಿಎಂ ಗೆ ಹೋಗುವ ಅಗತ್ಯವೇ ಇಲ್ಲ ! ಮನೆ ಬಾಗಿಲಿಗೆ ಬರುತ್ತದೆ ಕ್ಯಾಶ್! ಶುರುವಾಗಿದೆ Aadhaar ATM

How to use Aadhaar ATM:ಆಧಾರ್ ಎಟಿಎಂ ಸಹಾಯದಿಂದ ಇದು ಸಾಧ್ಯ.ಪೋಸ್ಟ್‌ಮ್ಯಾನ್ ನಿಮ್ಮ ಮನೆಗೆ ಹಣವನ್ನು ತಲುಪಿಸುತ್ತಾರೆ.ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ನೀವು ಬ್ಯಾಂಕ್ ಅಥವಾ ಎಟಿಎಂಗೆ ಹೋಗದೆ ಹಣವನ್ನು ಪಡೆಯಬಹುದು. 

Written by - Ranjitha R K | Last Updated : Apr 11, 2024, 10:11 AM IST
  • ನಿಮಗೆ ಅಗತ್ಯವಿರುವ ಕ್ಯಾಶ್ ನಿಮ್ಮ ಮನೆ ಬಾಗಿಲಿಗೇ ಬರುತ್ತದೆ.
  • ಕೇಳುವುದಕ್ಕೆ ವಿಚಿತ್ರ ಎನಿಸಿದರೂ ಸತ್ಯ.
  • ಆಧಾರ್ ಎಟಿಎಂ ಸಹಾಯದಿಂದ ಇದು ಸಾಧ್ಯ.
ಬ್ಯಾಂಕ್ ಎಟಿಎಂ ಗೆ ಹೋಗುವ ಅಗತ್ಯವೇ ಇಲ್ಲ ! ಮನೆ ಬಾಗಿಲಿಗೆ ಬರುತ್ತದೆ ಕ್ಯಾಶ್! ಶುರುವಾಗಿದೆ Aadhaar ATM  title=

How to use Aadhaar ATM : ಕ್ಯಾಶ್ ಬೇಕು ಎಂದಾದರೆ ಒಂದೋ ಬ್ಯಾಂಕ್ ಗೆ ಹೋಗಬೇಕು ಅಥವಾ ಎಟಿಎಂಗೆ ಹೋಗಬೇಕು. ಆದ್ರೆ ಇನ್ನು ಮುಂದೆ ಹಾಗಲ್ಲ. ಮನೆಯಲ್ಲಿ ಕುಳಿತುಕೊಂಡೇ ನಿಮಗೆ ಬೇಕಾದ ಕ್ಯಾಶ್ ಅನ್ನು ಪಡೆಯಬಹುದು.ನಿಮಗೆ ಅಗತ್ಯವಿರುವ ಕ್ಯಾಶ್ ನಿಮ್ಮ ಮನೆ ಬಾಗಿಲಿಗೇ ಬರುತ್ತದೆ.ಇದು ಕೇಳುವುದಕ್ಕೆ ವಿಚಿತ್ರ ಎನಿಸಿದರೂ ಸತ್ಯ. ಆಧಾರ್ ಎಟಿಎಂ ಸಹಾಯದಿಂದ ಇದು ಸಾಧ್ಯ.ಪೋಸ್ಟ್‌ಮ್ಯಾನ್ ನಿಮ್ಮ ಮನೆಗೆ ಹಣವನ್ನು ತಲುಪಿಸುತ್ತಾರೆ.ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ನೀವು ಬ್ಯಾಂಕ್ ಅಥವಾ ಎಟಿಎಂಗೆ ಹೋಗದೆ ಹಣವನ್ನು ಪಡೆಯಬಹುದು. ಹಾಗಿದ್ದರೆ ಏನಿದು ಆಧಾರ್ ಎಟಿಎಂ? ಇದರ ಸಹಾಯದಿಂದ ಮನೆಯಲ್ಲಿಯೇ ಕುಳಿತು ಹಣ ಪಡೆಯುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. 

ಏನಿದು ಆಧಾರ್ ಎಟಿಎಂ? :
ಆಧಾರ್ ಎಟಿಎಂ ಮನೆಯಲ್ಲೇ ಕುಳಿತು ಕ್ಯಾಶ್ ಹಿಂಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.ಆಧಾರ್ ATM ಸೇವೆ ಎಂದರೆ ಆಧಾರ್ ಸಕ್ರಿಯಗೊಳಿಸಿದ ಪಾವತಿ ಸೇವೆ (AePS). AePS ಅನ್ನು ಬಳಸಲು,ನೀವು ಮೊದಲು ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕು.ಈ ಆಧಾರ್ ಎಟಿಎಂ ಸೇವೆಯ ಸಹಾಯದಿಂದ ಖಾತೆದಾರರ ಬಯೋಮೆಟ್ರಿಕ್ ಬಳಸಿ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲಾಗುತ್ತದೆ. 

ಇದನ್ನೂ ಓದಿ : Railways Super Plan: 24 ಗಂಟೆಯೊಳಗೆ ಟಿಕೆಟ್ ಹಣ ಮರುಪಾವತಿ, ಏನಿದು ಭಾರತೀಯ ರೈಲ್ವೇಯ ಸೂಪರ್ ಪ್ಲಾನ್

ಆಧಾರ್ ಎಟಿಎಂ ಸೇವೆ ಹೇಗೆ ಕೆಲಸ ಮಾಡುತ್ತದೆ? :
ಆಧಾರ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಗ್ರಾಹಕರ ಬಯೋಮೆಟ್ರಿಕ್ ವಿವರಗಳ ಮೂಲಕ,ಅವರು ಮನೆಯಿಂದಲೇ ನಗದು ಹಿಂಪಡೆಯುವಿಕೆ, ಬ್ಯಾಲೆನ್ಸ್ ವಿಚಾರಣೆ,ಮಿನಿ ಸ್ಟೇಟ್‌ಮೆಂಟ್ ಮೊದಲಾದ ಬ್ಯಾಂಕಿಂಗ್ ಸೇವೆಗಳ ಸೌಲಭ್ಯವನ್ನು ಪಡೆಯುತ್ತಾರೆ.ಅಷ್ಟೇ ಅಲ್ಲ,ಈ ಸೇವೆಯ ಸಹಾಯದಿಂದ ಆಧಾರ್‌ನಿಂದ ಆಧಾರ್‌ಗೆ ಹಣವನ್ನು ವರ್ಗಾಯಿಸುವುದು ಕೂಡಾ ಸಾಧ್ಯ. ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನೀವು ಬಹು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿದ್ದರೆ,ವಹಿವಾಟಿನ ಸಮಯದಲ್ಲಿ ನೀವು ಹಣವನ್ನು ಹಿಂಪಡೆಯಲು ಬಯಸುವ ನಿಮ್ಮ ಬ್ಯಾಂಕ್ ಖಾತೆಯನ್ನು ಆರಿಸಬೇಕಾಗುತ್ತದೆ. ಈ ಸೇವೆಯ ಮೂಲಕ ನೀವು 10,000 ರೂ.ವರೆಗೆ ನಗದು ವಹಿವಾಟು ಮಾಡಬಹುದು.

ಎಷ್ಟು ಚಾರ್ಜ್ ಮಾಡಬೇಕು,ಹೇಗೆ ಬಳಸುವುದು? :
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ನಿಮ್ಮ ಮನೆಗೆ ನಗದು ಡೆಲಿವರಿ ಪಡೆಯಲು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಆದರೆ, ಡೋರ್ ಸ್ಟೆಪ್ ಸೇವೆಗಾಗಿ ಬ್ಯಾಂಕ್ ನಿಮಗೆ ಶುಲ್ಕ ವಿಧಿಸುತ್ತದೆ.

ಇದನ್ನೂ ಓದಿ : ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಹೀಗೆ ಮಾಡಿ !ಹೊಸ ಆಧಾರ್ ನಿಮ್ಮ ಕೈ ಸೇರುವುದು !

ಈ ಸೇವೆಯನ್ನು ಬಳಸಲು, ಮೊದಲನೆಯದಾಗಿ ನೀವು...
-IPPB ಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. 
-ಅಲ್ಲಿ ಡೋರ್ ಸ್ಟೆಪ್ ಆಯ್ಕೆಯನ್ನು ಆರಿಸಬೇಕು. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ,ವಿಳಾಸ, ಪಿನ್ ಕೋಡ್ ಮುಂತಾದ ವಿವರಗಳನ್ನು ಭರ್ತಿ ಮಾಡಿ.
-ನಿಮ್ಮ ಖಾತೆಯನ್ನು ಹೊಂದಿರುವ ಬ್ಯಾಂಕ್ ಹೆಸರನ್ನು ಭರ್ತಿ ಮಾಡಿ. 
- I Agree ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಮಾಡಿ. 
-ಸ್ವಲ್ಪ ಸಮಯದ ನಂತರ ಪೋಸ್ಟ್‌ಮ್ಯಾನ್ ನಿಮ್ಮ ಮನೆಗೆ ಹಣವನ್ನು  ತಲುಪಿಸುತ್ತಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News