Highest FRP For Sugarcane Approved: ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ (ಸಿಸಿಇಎ) ಸಭೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ಕ್ವಿಂಟಲ್‌ಗೆ 15 ರಿಂದ 305 ರೂ.ಗಳ ವರೆಗೆ ಹೆಚ್ಚಿಸಿದೆ. ಅಂದರೆ, ಈಗ ರೈತರ ಖಾತೆಗೆ ಅವರು ಕಬ್ಬಿಗೆ ಮಾಡಿರುವ ಒಟ್ಟು ವೆಚ್ಚದ ದುಪ್ಪಟ್ಟು ಹಣ ಬರಲಿದೆ.
ಸರ್ಕಾರದಿಂದ ಮಹತ್ವದ ಘೋಷಣೆ
ಸಚಿವ ಸಂಪುಟದಲ್ಲಿ ಸರ್ಕಾರ ರೈತರ ಆದಾಯ ಹೆಚ್ಚಿಸಲು ಎಫ್ ಆರ್ ಪಿ ಹೆಚ್ಚಿಸಿದೆ. ಎಫ್‌ಆರ್‌ಪಿ ಎಂದರೆ ರೈತರಿಗೆ ಅದಕ್ಕಿಂತ ಕಡಿಮೆ ಬೆಲೆಯನ್ನು ನೀಡಲಾಗುವುದಿಲ್ಲ ಎಂದರ್ಹ್ತ ಅಂದರೆ ಇದರ ಪ್ರಕಾರ ಈಗ ರೈತರಿಗೆ ಪ್ರತಿ ಕ್ವಿಂಟಲ್ ಕಬ್ಬಿಗೆ 305 ರೂ.ಗಳ ಖಾತರಿ ಬೆಲೆ ಸಿಗಲಿದೆ. ಈ ಬೆಲೆ 2022-23ರ ಸಕ್ಕರೆ ಹಂಗಾಮಿಗೆ (ಅಕ್ಟೋಬರ್-ಸೆಪ್ಟೆಂಬರ್) ಅನ್ವಯಿಸಲಿದೆ. ಶೇ. 10.25 ಕ್ಕಿಂತ ಹೆಚ್ಚು ಎಫ್‌ಆರ್‌ಪಿ ವಸೂಲಿಯಲ್ಲಿ ಪ್ರತಿ ಶೇಕಡಾ 0.1 ರಷ್ಟು ಹೆಚ್ಚಳಕ್ಕೆ ಪ್ರತಿ ಕ್ವಿಂಟಲ್‌ಗೆ 3.05 ರೂ ಪ್ರೀಮಿಯಂ ಅನ್ನು ಸಹ ನೀಡಲಾಗುವುದು ಗ್ರಾಹಕ ಸಚಿವಾಲಯ ತಿಳಿಸಿದೆ. ಇದಲ್ಲದೆ ಸಕ್ಕರೆ ಕಾರ್ಖಾನೆಗಳಲ್ಲಿ ವಸೂಲಾತಿ ಪ್ರಮಾಣ ಶೇ.9.5ಕ್ಕಿಂತ ಕಡಿಮೆಯಿದ್ದರೆ ಯಾವುದೇ ರೀತಿಯ ಕಡಿತಗೊಳಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಖಾತೆಗೆ ದುಪ್ಪಟ್ಟು ಹಣ ಬರಲಿದೆ
2022-23ರ ಸಕ್ಕರೆ ಹಂಗಾಮಿನಲ್ಲಿ ಪ್ರತಿ ಕ್ವಿಂಟಾಲ್‌ಗೆ ಕಬ್ಬು ಉತ್ಪಾದನೆಯ ವೆಚ್ಚ 162 ರೂ ಎಂದು ಅಂದಾಜಿಸಲಾಗಿದೆ, ಆದರೆ ರೈತರಿಗೆ ಪ್ರತಿ ಕ್ವಿಂಟಲ್‌ಗೆ ರೂ 305 ನೀಡಲಾಗುವುದು, ಇದು ಅವರ ಉತ್ಪಾದನಾ ವೆಚ್ಚಕ್ಕಿಂತ ಶೇ.88 ರಷ್ಟು ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ. ಅಂದರೆ, ಇದರಿಂದ ರೈತರ ಖಾತೆಗೆ ದುಪ್ಪಟ್ಟು ಹಣ ಬರಲಿದೆ. ಪ್ರಸಕ್ತ ಸಕ್ಕರೆ ಹಂಗಾಮಿನಲ್ಲಿ ಪ್ರತಿ ಕ್ವಿಂಟಲ್ ಕಬ್ಬಿಗೆ 290 ರೂ. ಮತ್ತು ಈಗ ಎಫ್‌ಆರ್‌ಪಿ ಹೆಚ್ಚಳದಿಂದ ಕಬ್ಬು ರೈತರ ಆದಾಯ ಬಹುತೇಕ ದ್ವಿಗುಣಗೊಳ್ಳಲಿದೆ.
ಇದನ್ನೂ ಓದಿ-ಮಧ್ಯಪ್ರದೇಶದಲ್ಲೊಬ್ಬ ಕೋಟ್ಯಾಧಿಪತಿ ಕ್ಲರ್ಕ್ : ದಾಳಿ ವೇಳೆ ಪತ್ತೆಯಾಯಿತು ಕಂತೆ ಕಂತೆ ನೋಟು
ಎಂಟು ವರ್ಷಗಳಲ್ಲಿ ಎಫ್ ಆರ್ ಪಿ ಶೇ.34ರಷ್ಟು ಹೆಚ್ಚಿದೆ
ಕಳೆದ ಎಂಟು ವರ್ಷಗಳಲ್ಲಿ ಮೋದಿ ಸರ್ಕಾರ ಕಬ್ಬಿನ ಖಾತರಿ ಖಾತರಿ ಬೆಲೆಯನ್ನು ಶೇಕಡಾ 34 ರಷ್ಟು ಹೆಚ್ಚಿಸಿರುವುದನ್ನು ನೋಡಿದರೆ ರೈತರ ಆದಾಯವನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಎಷ್ಟು ಕಟಿಬದ್ದವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಅಲ್ಲದೆ ಮುಂಬರುವ ಸಕ್ಕರೆ ಹಂಗಾಮಿನಲ್ಲಿ ಸುಮಾರು 3,600 ಲಕ್ಷ ಟನ್ ಕಬ್ಬನ್ನು ಕಾರ್ಖಾನೆಗಳು ಖರೀದಿಸುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಹಂಗಾಮಿನಲ್ಲಿ ರೈತರಿಗೆ ಸುಮಾರು 1.20 ಲಕ್ಷ ಕೋಟಿ ರೂ. ಅಂದರೆ ರೈತರ ಆದಾಯ ಮತ್ತೊಮ್ಮೆ ಹೆಚ್ಚಾಗಲಿದೆ.
ಇದನ್ನೂ ಓದಿ-70 ಸಾವಿರಕ್ಕೆ ವ್ಯಾಗನ್ಆರ್ , 95 ಸಾವಿರಕ್ಕೆ Sx4,ಒಂದು ಲಕ್ಷದೊಳಗೆ ಕಾರು ಖರೀದಿಸುವ ಅವಕಾಶ
ರೈತರಿಗೆ ಬಂಪರ್ ಲಾಭ
ಕಬ್ಬಿಣ ದರ ಹೆಚ್ಚಳದ ಜೊತೆಗೆ ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗುವಂತೆ ನೋಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ಸರ್ಕಾರದ ಈ ನಿರ್ಧಾರದಿಂದ ದೇಶದ ಸುಮಾರು 5 ಕೋಟಿ ರೈತರಿಗೆ ನೇರವಾಗಿ ಲಾಭವಾಗಲಿದೆ. ಇದರ ಜೊತೆಗೆ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 5 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೂ ಕೂಡ ಇದರಿಂದ ಲಾಭ ಸಿಗಲಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.