ಇನ್ಮುಂದೆ 2000 ರೂಪಾಯಿ ನೋಟು ಹೀಗೆ ಬದಲಾಯಿಸಬಹುದು..! RBI ನಿಂದ ಗುಡ್ ನ್ಯೂಸ್

Good news from RBI: ಈಗ ನೀವು ಈ ಸರಳ ವಿಧಾನಗಳೊಂದಿಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ 2000 ರೂಪಾಯಿ ನೋಟುಗಳನ್ನು ಜಮಾ ಮಾಡಬಹುದು. ಅದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.. 

Written by - Savita M B | Last Updated : Nov 5, 2023, 09:38 AM IST
  • ನಿಮ್ಮ ಖಾತೆಗೆ 2000 ರೂಪಾಯಿ ನೋಟು ಜಮಾ ಮಾಡಲು ಈಗ ನೀವು ಆರ್‌ಬಿಐ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ
  • 2000 ರೂಪಾಯಿ ನೋಟು ಬದಲಾಯಿಸಿಕೊಳ್ಳಲು ಆರ್‌ಬಿಐ ಹೊಸ ಸೌಲಭ್ಯವನ್ನು ಬಿಡುಗಡೆ ಮಾಡಿದೆ.
  • ಟ್ರಿಪಲ್ ಲಾಕ್ ರೆಸೆಪ್ಟಾಕಲ್ (TLR) ಅನ್ನು ಜಾರಿಗೊಳಿಸಿದೆ
ಇನ್ಮುಂದೆ 2000 ರೂಪಾಯಿ ನೋಟು ಹೀಗೆ ಬದಲಾಯಿಸಬಹುದು..! RBI ನಿಂದ ಗುಡ್ ನ್ಯೂಸ್ title=

RBI: ನಿಮ್ಮ ಖಾತೆಗೆ 2000 ರೂಪಾಯಿ ನೋಟು ಜಮಾ ಮಾಡಲು ಈಗ ನೀವು ಆರ್‌ಬಿಐ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ದೇಶದ ಯಾವುದೇ ಅಂಚೆ ಕಚೇರಿಯ ಮೂಲಕ ಯಾವುದೇ ವ್ಯಕ್ತಿ ಆರ್‌ಬಿಐ ವಿತರಣಾ ಕಚೇರಿಗೆ ರೂ 2,000 ನೋಟು ಕಳುಹಿಸಬಹುದು ಮತ್ತು ಅದನ್ನು ತನ್ನ ಖಾತೆಗೆ ಜಮಾ ಮಾಡಬಹುದು. ಇದಲ್ಲದೇ 2000 ರೂಪಾಯಿ ನೋಟು ಬದಲಾಯಿಸಿಕೊಳ್ಳಲು ಆರ್‌ಬಿಐ ಹೊಸ ಸೌಲಭ್ಯವನ್ನು ಬಿಡುಗಡೆ ಮಾಡಿದೆ. ಇದನ್ನು ಟ್ರಿಪಲ್ ಲಾಕ್ ರೆಸೆಪ್ಟಾಕಲ್ (TLR) ಎಂದು ಕರೆಯಲಾಗುತ್ತದೆ.

ಕರೆನ್ಸಿ ನೋಟುಗಳ ವಿನಿಮಯದಲ್ಲಿ ಎದುರಾಗುವ ತೊಂದರೆಗಳನ್ನು ಪರಿಗಣಿಸಿ ಸೆಂಟ್ರಲ್ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ. ಈ ವರ್ಷ ಮೇ 19 ರಂದು ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಈ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಮತ್ತು ಇತರ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ಜನರಿಗೆ ನೀಡಲಾಯಿತು. ಅಂತಹ ನೋಟುಗಳನ್ನು ಹೊಂದಿರುವ ಸಾರ್ವಜನಿಕರು ಮತ್ತು ಕಂಪನಿಗಳು ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ಬದಲಾಯಿಸಲು ಅಥವಾ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲು ಮೊದಲು ತಿಳಿಸಲಾಯಿತು.

ಇದನ್ನೂ ಒದಿ-ದೇಶಾದ್ಯಂತ 1 ಕೋಟಿ ಫ್ಯಾನ್ ಹಾಗೂ 20 ಲಕ್ಷ ಇಂಡಕ್ಷನ್ ಒಲೆಗಳ ವಿತರಣೆಗೆ ಮುಂದಾದ ಸರ್ಕಾರ!

ನಂತರ ಗಡುವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಅಕ್ಟೋಬರ್ 7 ರಂದು ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಮತ್ತು ವರ್ಗಾವಣೆ ಸೇವೆಗಳನ್ನು ಮುಚ್ಚಲಾಯಿತು. ಅಕ್ಟೋಬರ್ 8 ರಿಂದ,19 RBI ಕಚೇರಿಗಳಲ್ಲಿ ಕರೆನ್ಸಿ ವಿನಿಮಯ ಮಾಡಿಕೊಳ್ಳಬಹುದು ಅಥವಾ ಅವರ ಬ್ಯಾಂಕ್ ಖಾತೆಗೆ ಸಮಾನ ಮೊತ್ತವನ್ನು ಜಮಾ ಮಾಡಬಹುದು ಎಂದು ತಿಳಿಸಲಾಗಿತ್ತು.. ಆದರೆ, ಈಗ ಈ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತಿಲ್ಲ. 2,000 ರೂಪಾಯಿ ನೋಟುಗಳನ್ನು 19 ಆರ್‌ಬಿಐ ಕಚೇರಿಗಳಲ್ಲಿ ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದು.

ಆರ್‌ಬಿಐ ಕಚೇರಿಗಳ ಕೆಲಸದ ಸಮಯದಲ್ಲಿ 2,000 ರೂಪಾಯಿ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತವೆ. 2000 ರೂಪಾಯಿ ನೋಟುಗಳು ಮಾನ್ಯವಾಗಿವೆ ಎಂದು ಆರ್‌ಬಿಐ ಕೂಡ ಸ್ಪಷ್ಟಪಡಿಸಿ 2000 ರೂಪಾಯಿ ನೋಟುಗಳ ವಿನಿಮಯ ಪ್ರಕ್ರಿಯೆಯನ್ನು ಸರಳಗೊಳಿಸಿದೆ. 

ಅದೇ ಈ ಟ್ರಿಪಲ್ ಲಾಕ್ ರೆಸೆಪ್ಟಾಕಲ್ (TLR). ಏಜೆನ್ಸಿ ಹೇಳಿಕೆಯ ಪ್ರಕಾರ, ನಾವು ಗ್ರಾಹಕರಿಗೆ 2000 ರೂಪಾಯಿ ನೋಟುಗಳನ್ನು ಅಂಚೆ ಮೂಲಕ ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸುತ್ತಿದ್ದೇವೆ ಎಂದು ಆರ್‌ಬಿಐ ಪ್ರಾದೇಶಿಕ ನಿರ್ದೇಶಕ ರೋಹಿತ್ ಪಿ.ದಾಸ್ ತಿಳಿಸಿದ್ದಾರೆ.

ಇದನ್ನೂ ಒದಿ-ಅತ್ಯಲ್ಪ ಹೂಡಿಕೆಯಲ್ಲಿ ಆರಂಭಗೊಳ್ಳುವ ಈ 4 ಬಿಸ್ನೆಸ್, ಕಡಿಮೆ ಅವಧಿಯಲ್ಲಿ ಜಬರ್ದಸ್ತ್ ಲಾಭ ನೀಡುತ್ತವೆ!

ನೋಟುಗಳ ವಿನಿಮಯದ ನಂತರ, ಸಂಪೂರ್ಣ ಮೊತ್ತವನ್ನು ನೇರವಾಗಿ ಗ್ರಾಹಕರ ಖಾತೆಗೆ ಜಮಾ ಮಾಡಲಾಗುತ್ತದೆ. ಒಳ್ಳೆಯ ವಿಷಯವೆಂದರೆ ಗ್ರಾಹಕರು ತಮ್ಮ ಬ್ಯಾಂಕ್‌ಗೆ ಭೇಟಿ ನೀಡಿ ದೀರ್ಘ ಸರತಿ ಸಾಲಿನಲ್ಲಿ ನಿಂತು ಶುಲ್ಕವನ್ನು ಪಾವತಿಸಬೇಕಾಗಿಲ್ಲ. 

ಇತ್ತೀಚಿನ ವರದಿಯ ಪ್ರಕಾರ, ಇದುವರೆಗೆ 2000 ರೂಪಾಯಿ ನೋಟುಗಳ ಶೇಕಡಾ 97 ರಷ್ಟು ಮಾತ್ರ ಆರ್‌ಬಿಐಗೆ ಠೇವಣಿಯಾಗಿದೆ. ಆದರೆ ಇಲ್ಲಿಯವರೆಗೆ ರೂ.10,000 ಕೋಟಿ ಮೌಲ್ಯದ ರೂ.2000 ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿವೆ. ಈ ಸಂದರ್ಭದಲ್ಲಿ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ನೋಟುಗಳನ್ನು ಆದಷ್ಟು ಬೇಗ ಠೇವಣಿ ಮಾಡುವಂತೆ ಜನರಿಗೆ ವಿನಂತಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News