Ration Card: ಬಡವರ ಶ್ರೇಯೋಭಿವೃದ್ಧಿಗಾಗಿ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ ಬಡವರಿಗಾಗಿ ಹಲವು ಯೋಜನೆಗಳನ್ನು ಇನ್ನೂ ಜಾರಿಗೊಳಿಸುತ್ತಿದೆ. ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಸರ್ಕಾರ ಬಡವರಿಗೆ ಉಚಿತ ಪಡಿತರವನ್ನೂ ಸಹ ನೀಡುತ್ತಿದೆ. ಕರೋನಾದಿಂದಾಗಿ, ಜನರು ಆರ್ಥಿಕ ಮಟ್ಟದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎರಡು ಹೊತ್ತು ಊಟಕ್ಕೂ ಗತಿ ಇಲ್ಲದ ಹಲವು ಜನರಿದ್ದಾರೆ. ಅಂಥವರಿಗಾಗಿ ಸರಕಾರ ಉಚಿತ ಪಡಿತರ ಯೋಜನೆ ಜಾರಿಗೆ ತಂದಿದೆ. ಆದರೆ, ಇದೀಗ ಸರ್ಕಾರ ಈ ಯೋಜನೆಯ ಗಡುವನ್ನು ವಿಸ್ತರಿಸಿದೆ.
ಈ ತಿಂಗಳವರೆಗೆ ಲಾಭ ಸಿಗಲಿದೆ
ಉಚಿತ ಪಡಿತರ ಯೋಜನೆಯ ಗಡುವನ್ನು ಮೋದಿ ಸರ್ಕಾರವು ಈ ವರ್ಷದ ಮಾರ್ಚ್‌ನಲ್ಲಿ ವಿಸ್ತರಿಸಿತ್ತು. 80 ಸಾವಿರ ಕೋಟಿ ವೆಚ್ಚದಲ್ಲಿ ಬಡವರಿಗೆ ಸರಕಾರದಿಂದ ಆರು ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮೊದಲು ಈ ಯೋಜನೆಯ ಕೊನೆಯ ದಿನಾಂಕ 31 ಮಾರ್ಚ್ 2022 ಆಗಿತ್ತು. ಆದರೆ, ಮಾರ್ಚ್ ತಿಂಗಳಿನಲ್ಲಿಯೇ, ಸರ್ಕಾರ ಅದನ್ನು 30 ಸೆಪ್ಟೆಂಬರ್ 2022 ರವರೆಗೆ ವಿಸ್ತರಿಸಿದೆ. ಈ ಹಿನ್ನೆಲೆ ಬಡ ವರ್ಗದ ಜನರು ಈ ವರ್ಷದ ಸೆಪ್ಟೆಂಬರ್ ತಿಂಗಳವರೆಗೆ ಈ ಯೋಜನೆಯ ಲಾಭವನ್ನು ಪಡೆಯಬಹುದು.
ಇದನ್ನೂ ಓದಿ-ಪಕ್ಷದ ಸಭೆಯಲ್ಲಿ ಹೈದರಾಬಾದ್ ನ್ನು ಭಾಗ್ಯನಗರ ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ
ಸಾಕಷ್ಟು ಹಣ ವೆಚ್ಚ
ಕೋವಿಡ್-19 ಕಾರಣದಿಂದಾಗಿ ಬಡ ಜನರಿಗೆ ನೆರವು ನೀಡಲು ಸರ್ಕಾರವು ಉಚಿತ ಪಡಿತರ ಯೋಜನೆಯನ್ನು ಜಾರಿಗೆ ತಂದಿದೆ. ಇದೇ ವೇಳೆ ಕಳೆದ ಎರಡು ವರ್ಷಗಳಲ್ಲಿ ಈ ಯೋಜನೆಯಡಿ ಸುಮಾರು 2.6 ಲಕ್ಷ ಕೋಟಿ ರೂಪಾಯಿಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದೆ ಮತ್ತು ಮಾರ್ಚ್ನಲ್ಲಿ ಈ ಯೋಜನೆಯನ್ನು ಆರು ತಿಂಗಳ ಅವಧಿಗಾಗಿ ವಿಸ್ತರಿಸಲಾಗಿದೆ. ಇದರಿಂದಾಗಿ ಈ ಯೋಜನೆಗೆ ಇನ್ನೂ 80,000 ಕೋಟಿ ರೂ.ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗುತ್ತಿದೆ
ಇದನ್ನೂ ಓದಿ-Crocodile Video: ಮೊಸಳೆ ಬಾಯಿಯಿಂದ ತನ್ನ ಸ್ನೇಹಿತನನ್ನು ಹೊರತೆಗೆದ ವ್ಯಕ್ತಿ! ವಿಡಿಯೋ ನೋಡಿ
ಈ ಪ್ರಯೋಜನವನ್ನು ಪಡೆಯಿರಿ
ಮಾರ್ಚ್ 2020 ರಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ಅಡಿ ಕೇಂದ್ರ ಸರ್ಕಾರವು 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ತಿಂಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದೆ. ಇದಕ್ಕಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಯನ್ನು ಪರಿಚಯಿಸಲಾಗಿದೆ. ಈ ಯೋಜನೆಯಿಂದಾಗಿ ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಜನರಿಗೆ ಸಾಕಷ್ಟು ನೆರವು ಒದಗಿಸಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.