Free Heath Insurance: ಬಡ-ಶ್ರೀಮಂತ ಎನ್ನದೆ ಎಲ್ಲಾ ಕುಟುಂಬಗಳಿಗೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮೆ ಘೋಷಿಸಿದೆ ಈ ರಾಜ್ಯ ಸರ್ಕಾರ!

Free Health Insurance: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮಾದರಿಯಲ್ಲಿಯೇ ಇದೀಗ ತ್ರಿಪುರಾ ಸರ್ಕಾರವೂ ರಾಜ್ಯದ ಜನತೆಗೆ ಆರೋಗ್ಯ ವಿಮೆಯ ಕೊಡುಗೆಯನ್ನು ನೀಡಿದೆ. ಈ ಯೋಜನೆಯಡಿ, ಬಡ ಕುಟುಂಬದಿಂದ ಹಿಡಿದು ಶ್ರೀಮಂತ ಕುಟುಂಬಗಳವರೆಗೆ ಎಲ್ಲಾ ಕುಟುಂಬಗಳಿಗೆ ಆರೋಗ್ಯ ವಿಮೆಯ ರಕ್ಷಣೆಯನ್ನು ಸರ್ಕಾರ ಒದಗಿಸಿದೆ (Business News In Kannada).  

Written by - Nitin Tabib | Last Updated : Feb 9, 2024, 07:07 PM IST
  • ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸುಶಾಂತ್ ಚೌಧರಿ ಅವರು ತ್ರಿಪುರಾ ಸರ್ಕಾರದ ವಕ್ತಾರರೂ ಕೂಡ ಆಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.
  • ರಾಜ್ಯದಲ್ಲಿ ಈಗಾಗಲೇ 4.50 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆಯುಷ್ಮಾನ್ ಭಾರತ್ ಯೋಜನೆಗೆ ಒಳಪಟ್ಟಿದ್ದು,
  • ಉಳಿದ 4.15 ಲಕ್ಷ ಕುಟುಂಬಗಳು ಹೊಸ ನಗದು ರಹಿತ ಮತ್ತು ಕಾಗದ ರಹಿತ ಯೋಜನೆಗೆ ಒಳಪಡಲಿವೆ ಎಂದು ಎಂದು ಹೇಳಿದ್ದಾರೆ.
Free Heath Insurance: ಬಡ-ಶ್ರೀಮಂತ ಎನ್ನದೆ ಎಲ್ಲಾ ಕುಟುಂಬಗಳಿಗೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮೆ ಘೋಷಿಸಿದೆ ಈ ರಾಜ್ಯ ಸರ್ಕಾರ! title=

Free Health Insurance To All: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮಾದರಿಯಲ್ಲಿಯೇ ಇದೀಗ ತ್ರಿಪುರಾ ಸರ್ಕಾರವೂ ರಾಜ್ಯದ ಜನತೆಗೆ ಆರೋಗ್ಯ ವಿಮೆಯ ಕೊಡುಗೆಯನ್ನು ನೀಡಿದೆ. ತ್ರಿಪುರಾ ಸರ್ಕಾರವು ಮಂಗಳವಾರ ಮುಖ್ಯ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ, ಇದರ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ರೂ 5 ಲಕ್ಷದವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಬಡವರು ಮತ್ತು ನಿರ್ಗತಿಕರಿಗೆ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ, ಆದರೆ ತ್ರಿಪುರಾ ಸರ್ಕಾರದ ಮುಖ್ಯಮಂತ್ರಿ ಜನ್ ಆರೋಗ್ಯ ಯೋಜನೆಯಲ್ಲಿ, ಆರೋಗ್ಯ ವಿಮೆಯ ಪ್ರಯೋಜನವನ್ನು ಬಡ-ಶ್ರೀಮಂತ ಎಲ್ಲಾ ಕುಟುಂಬಗಳಿಗೆ ನೀಡಲಾಗುವುದು ಎಂದು ಹೇಳಿದೆ. (Business News In Kannada)

ಬಡ ಕುಟುಂಬದಿಂದ ಹಿಡಿದು ಶ್ರೀಮಂತ ಕುಟುಂಬದವರೆಗೆ ಎಲ್ಲರಿಗೂ ರಕ್ಷಣೆ ಸಿಗಲಿದೆ
ಆರೋಗ್ಯ ವಿಮಾ ಪಾಲಿಸಿಯನ್ನು ಪ್ರಕಟಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸುಶಾಂತ್ ಚೌಧರಿ, ವಾರ್ಷಿಕ ಆದಾಯವನ್ನು ಲೆಕ್ಕಿಸದೆ ಎಲ್ಲರಿಗೂ ಪ್ರವೇಶಿಸಬಹುದಾದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಈ ಹೊಸ ಯೋಜನೆಯಡಿ, ಬಡವರಿಂದ ಹಿಡಿದು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಶ್ರೀಮಂತ ವ್ಯಕ್ತಿಗಳವರೆಗೆ ಎಲ್ಲರೂ ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಈ ಯೋಜನೆಯನ್ನು ರಾಜ್ಯ ಸಚಿವ ಸಂಪುಟವು ಅನುಮೋದಿಸಿದೆ ಮತ್ತು ಶೀಘ್ರದಲ್ಲೇ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಔಪಚಾರಿಕವಾಗಿ ಇದನ್ನು ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ-Gold Scheme: ಶೀಘ್ರದಲ್ಲೇ ಮತ್ತೆ ಆರಂಭವಾಗಲಿದೆ ಅಗ್ಗದ ಚಿನ್ನ ಮಾರಾಟದ ಈ ಯೋಜನೆ, ಕೈಯಲ್ಲಿ ಹಣ ಇಟ್ಟುಕೊಳ್ಳಿ!

ಈ ಯೋಜನೆಯಡಿ 4.15 ಲಕ್ಷ ಕುಟುಂಬಗಳು ರಕ್ಷಣೆ ಪಡೆಯಲಿವೆ
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸುಶಾಂತ್ ಚೌಧರಿ ಅವರು ತ್ರಿಪುರಾ ಸರ್ಕಾರದ ವಕ್ತಾರರೂ ಕೂಡ ಆಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ರಾಜ್ಯದಲ್ಲಿ ಈಗಾಗಲೇ 4.50 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆಯುಷ್ಮಾನ್ ಭಾರತ್ ಯೋಜನೆಗೆ ಒಳಪಟ್ಟಿದ್ದು, ಉಳಿದ 4.15 ಲಕ್ಷ ಕುಟುಂಬಗಳು ಹೊಸ ನಗದು ರಹಿತ ಮತ್ತು ಕಾಗದ ರಹಿತ ಯೋಜನೆಗೆ ಒಳಪಡಲಿವೆ ಎಂದು ಎಂದು ಹೇಳಿದ್ದಾರೆ.

ಇದನ್ನೂ ಓದಿ-Pension Scheme: ರೈತರ ಮೇಲೆ ಕೃಪೆ ತೋರಿದ ಈ ರಾಜ್ಯ ಸರ್ಕಾರ, ಪ್ರತಿತಿಂಗಳು ನೀಡಲಿದೆ 3000 ಪಿಂಚಣಿ!

2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಜನ ಆರೋಗ್ಯ ಯೋಜನೆಯನ್ನು ಹಣಕಾಸು ಸಚಿವರು ಘೋಷಿಸಿದ್ದು, ಇದಕ್ಕಾಗಿ 59 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಮುಖ್ಯಮಂತ್ರಿ ಜನ್ ಆರೋಗ್ಯ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸುವ ಸರ್ಕಾರಿ ಅಧಿಕಾರಿಗಳು ರಾಜ್ಯ ಸರ್ಕಾರದಿಂದ ಒದಗಿಸಲಾದ ವೈದ್ಯಕೀಯ ಮರುಪಾವತಿ ಸಹಾಯವನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News