ನವದೆಹಲಿ: ನೀವು ಸಹ ವಿಮಾನ ಪ್ರಯಾಣಿಕರಾಗಿದ್ದರೆ ಇಲ್ಲಿದೆ ಶುಭಸುದ್ದಿ. ವಿಶೇಷ ಕೊಡುಗೆಯಡಿ ಟಿಕೆಟ್ ಬುಕಿಂಗ್ನಲ್ಲಿ ಏರ್ಲೈನ್ ನಿಮಗೆ ಬಂಪರ್ ರಿಯಾಯಿತಿ ನೀಡುತ್ತಿದೆ. ವಾಸ್ತವವಾಗಿ ಏರ್ಲೈನ್ ಈ ಕೊಡುಗೆಯನ್ನು ಹಿರಿಯ ನಾಗರಿಕರಿಗೆ ನೀಡುತ್ತಿದೆ. ಅಂದರೆ ನೀವು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ವಿಮಾನದಲ್ಲಿ ಅಗ್ಗವಾಗಿ ಪ್ರಯಾಣಿಸಲು ಉತ್ತಮ ಅವಕಾಶವಿದೆ.
ವಿಮಾನಯಾನ ಸಂಸ್ಥೆಯಿಂದ ಭರ್ಜರಿ ಆಫರ್
ದೇಶೀಯ ವಿಮಾನಯಾನ ಸಂಸ್ಥೆ ಇಂಡಿಗೋ ವಿಶೇಷ ಕೊಡುಗೆಯನ್ನು ಪರಿಚಯಿಸಿದೆ. ಇದರಡಿ ವಿಮಾನ ಟಿಕೆಟ್ಗಳ ಬುಕಿಂಗ್ನಲ್ಲಿ ಹಿರಿಯ ನಾಗರಿಕರಿಗೆ ಶೇ.10ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದಕ್ಕಾಗಿ ನೀವು ವಿಮಾನಯಾನ ಸಂಸ್ಥೆಯ ಅಧಿಕೃತ ವೆಬ್ಸೈಟ್ www.goindigo.inನಲ್ಲಿ ಟಿಕೆಟ್ ಕಾಯ್ದಿರಿಸಬೇಕು. ಇಲ್ಲಿ ನೀವು ಸೀನಿಯರ್ ಸಿಟಿಜನ್ ಡಿಸ್ಕೌಂಟ್ ಆಫರ್ ಅಡಿ ಟಿಕೆಟ್ ಬುಕ್ ಮಾಡಬೇಕು. ವಿಮಾನಯಾನ ಸಂಸ್ಥೆಯು ಈ ಕೊಡುಗೆಗೆ ‘ಗೋಲ್ಡನ್ ಏಜ್’ ಎಂದು ಹೆಸರಿಸಿದೆ.
ಇದನ್ನೂ ಓದಿ: Bullet Train : ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ : ಟಿಕೆಟ್ ದರ ತಿಳಿಸಿದ ಸರ್ಕಾರ!
ಆಫರ್ ವ್ಯಾಲಿಡಿಟಿ ಎಲ್ಲಿವರೆಗೆ?
IndiGoನ ಈ ಕೊಡುಗೆಯು 30 ಸೆಪ್ಟೆಂಬರ್ 2022ರವರೆಗೆ ಇರುತ್ತದೆ. ಇದರಲ್ಲಿ ವಿಮಾನ ಟಿಕೆಟ್ಗಳ ಮೂಲ ದರದಲ್ಲಿ ಶೇ.10ರಷ್ಟು ರಿಯಾಯಿತಿ ಲಭ್ಯವಿರುತ್ತದೆ. ಇದರಡಿ ಹಿರಿಯ ನಾಗರಿಕರು ಚೆಕ್-ಇನ್ ಸಮಯದಲ್ಲಿ ಜನ್ಮ ದಿನಾಂಕದ ಪುರಾವೆಗಳನ್ನು ತೋರಿಸಬೇಕಾಗುತ್ತದೆ. ಇದು ಯಾವುದೇ ಸರ್ಕಾರಿ ID ಆಗಿರಬಹುದು.
ಎಷ್ಟು ಬ್ಯಾಗೇಜ್ಗೆ ಅವಕಾಶ..?
ಈ ಕೊಡುಗೆಯಡಿ ಹಿರಿಯ ನಾಗರಿಕರು ಪ್ರಯಾಣಿಸುವಾಗ 15 ಕೆಜಿ ಚೆಕ್-ಇನ್ ಬ್ಯಾಗೇಜ್ ಮತ್ತು 7 ಕೆಜಿಯವರೆಗಿನ ಹ್ಯಾಂಡ್ ಬ್ಯಾಗೇಜ್ ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ. ಇದಲ್ಲದೆ ವಿಮಾನದಲ್ಲಿ ಪ್ರಯಾಣಿಸುವಾಗ ತೆಗೆದುಕೊಳ್ಳುವ ತಿಂಡಿಗಳಿಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಈ ಆಫರ್ನ ವಿಶೇಷತೆ ಏನೆಂದರೆ ಈ ಕೊಡುಗೆಯ ಪ್ರಯೋಜನವು (IndiGo 6E Senior Citizen discount offer) ಒಂದು ಮಾರ್ಗ ಮತ್ತು ರೌಂಡ್ ಟ್ರಿಪ್ ಎರಡಕ್ಕೂ ಮಾನ್ಯವಾಗಿರುತ್ತದೆ. ಇದರ ಹೊರತಾಗಿ ನೀವು ಇಂಡಿಗೋದ 6E ಸೀನಿಯರ್ ಸಿಟಿಜನ್ ಡಿಸ್ಕೌಂಟ್ ಸ್ಕೀಮ್ ಫ್ಲೈಟ್ ಟಿಕೆಟ್ಗಳಲ್ಲಿ ಬದಲಾವಣೆಗಳನ್ನು ಮಾಡಬಹುದು ಮತ್ತು ಅಗತ್ಯವಿದ್ದರೆ ರದ್ದುಗೊಳಿಸಬಹುದು. ಆದರೆ, ಒಮ್ಮೆ ಬುಕ್ ಮಾಡಿದ ನಂತರ ನೀವು ಟಿಕೆಟ್ ಅನ್ನು ವರ್ಗಾಯಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: PPF ನಲ್ಲಿ ಸರ್ಕಾರದ ವತಿಯಿಂದ 5 ಮಹತ್ವದ ಬದಲಾವಣೆಗಳು, ಹೂಡಿಕೆ ಮಾಡುವ ಮೊದಲು ಈ ಸುದ್ದಿ ಓದಿ
ವೆಬ್ ಚೆಕ್ ಇನ್ ಮಾಡಲು ಸಾಧ್ಯವಿಲ್ಲ
ನೀವು 6E ಸೀನಿಯರ್ ಸಿಟಿಜನ್ ಡಿಸ್ಕೌಂಟ್ ಸ್ಕೀಮ್ (6E Senior Citizen discount scheme) ಅಡಿಯಲ್ಲಿ ಫ್ಲೈಟ್ ಬುಕ್ ಮಾಡಿದರೆ, ನಂತರ ನೀವು ವೆಬ್ ಚೆಕ್ ಇನ್ ಮಾಡಲು ಸಾಧ್ಯವಿಲ್ಲ. ಇದಲ್ಲದೆ ವಿಮಾನಯಾನ ಸಂಸ್ಥೆಯು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ವಿಮಾನ ಟಿಕೆಟ್ಗಳ ರದ್ದತಿಗೆ (IndiGo booking)ಶುಲ್ಕವನ್ನು ವಿಧಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.