ಬೆಂಗಳೂರು : ಭಾರತ ಕೃಷಿ ಪ್ರಧಾನ ರಾಷ್ಟ್ರ. ರೈತರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ರೈತರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರ, ಇಂಥಹ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯ ಮೂಲಕ ರೈತರಿಗೆ ಉತ್ತಮ ಬಡ್ಡಿಯನ್ನು ನೀಡುತ್ತಿದೆ. ಹಾಗಿದ್ದರೆ ರೈತರಿಗೆ ಲಾಭ ನೀಡುವ ಆ ಯೋಜನೆ ಯಾವುದು ನೋಡೋಣ.
ಗರಿಷ್ಟ ಮಿತಿಯ ನಿಗದಿ ಇಲ್ಲ :
ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಅಂಚೆ ಕಚೇರಿ ಮೂಲಕ ನಡೆಸಲಾಗುತ್ತಿದೆ. ಈ ಯೋಜನೆಯ ಮೂಲಕ ರೈತರನ್ನು ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸಲಾಗುತ್ತದೆ. ಪೋಸ್ಟ್ ಆಫೀಸ್ ಮೂಲಕ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ರೈತರು ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ, ರೈತರು ಕನಿಷ್ಠ 1000 ರೂಪಾಯಿಗಳೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು. ಆದರೆ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ಇಲ್ಲಿ ನಿಗದಿ ಪಡಿಸಲಾಗಿಲ್ಲ.
ಇದನ್ನೂ ಓದಿ : Gold Price Today : ಚಿನ್ನ - ಬೆಳ್ಳಿಯಲ್ಲಿ ಮತ್ತೆ ಭಾರಿ ಏರಿಕೆ, ಇಲ್ಲಿದೆ ಇಂದಿನ ದರ, ಪರಿಶೀಲಿಸಿ
ಹೂಡಿಕೆ ಮೇಲೆ ಎಷ್ಟು ಸಿಗುತ್ತದೆ ಬಡ್ಡಿ ? :
ಪ್ರಸ್ತುತ ರೈತರಿಗೆ ವಾರ್ಷಿಕವಾಗಿ ಕಾಂಪೌಂಡಿಂಗ್ ಆಧಾರದ ಮೇಲೆ ಶೇಕಡಾ 7.2 ರ ಬಡ್ಡಿಯನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಬಹುದು. KVP ಖಾತೆಯನ್ನು 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಏಕಾಂಗಿಯಾಗಿ ಅಥವಾ ಜಂಟಿಯಾಗಿ ತೆರೆಯಬಹುದು. 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಪ್ರಾಪ್ತರ ಪರವಾಗಿ ಪೋಷಕರು ಖಾತೆಯನ್ನು ತೆರೆಯಬಹುದು.
ಕಿಸಾನ್ ಸ್ಕೀಮ್ :
ಪೋಸ್ಟ್ ಆಫೀಸ್ ವೆಬ್‌ಸೈಟ್ ಪ್ರಕಾರ, ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಮುಚ್ಚುವುದಾದರೆ, ಹೂಡಿಕೆಯ ದಿನಾಂಕದಿಂದ 2 ವರ್ಷ6 ತಿಂಗಳ ನಂತರ ಅದನ್ನು ಮುಚ್ಚಬಹುದು. ಆದರೆ ಖಾತೆದಾರರ ಮರಣ, ನ್ಯಾಯಾಲಯದ ಆದೇಶದಂತಹ ಕೆಲವು ಸಂದರ್ಭಗಳಲ್ಲಿ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಅನುಮತಿ ನೀಡಲಾಗುವುದು.
ಇದನ್ನೂ ಓದಿ : ಮಾರ್ಚ್ 31 ರೊಳಗೆ ಈ ಕೆಲಸ ಮಾಡಿದರೆ ಉಳಿಸಬಹುದು ಆದಾಯ ತೆರಿಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.