EPFO New Rule: ಸೆಪ್ಟೆಂಬರ್‌ನಿಂದ ಬದಲಾಗಲಿರುವ ಈ ಪಿಎಫ್ ನಿಯಮದ ಬಗ್ಗೆ ನಿಮಗೂ ತಿಳಿದಿರಲಿ

EPFO New Rule: ಸೆಪ್ಟೆಂಬರ್‌ನಿಂದ ಪಿಎಫ್ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ನೀವು ಇದನ್ನು ತಪ್ಪಿಸಿಕೊಂಡರೆ, ಕಂಪನಿಯು ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲು ಸಾಧ್ಯವಾಗುವುದಿಲ್ಲ.

Written by - Yashaswini V | Last Updated : Aug 31, 2021, 12:50 PM IST
  • ಸೆಪ್ಟೆಂಬರ್ 1 ರಿಂದ, EPFO ​​ಯುನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ
  • ಪಿಎಫ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗದಿದ್ದರೆ ಹಲವು ಪ್ರಯೋಜನಗಳಿಂದ ವಂಚಿತರಾಗುವಿರಿ
  • ಯುಎಎನ್-ಆಧಾರ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ? ಎಂದು ತಿಳಿಯಿರಿ
EPFO New Rule: ಸೆಪ್ಟೆಂಬರ್‌ನಿಂದ ಬದಲಾಗಲಿರುವ ಈ ಪಿಎಫ್ ನಿಯಮದ ಬಗ್ಗೆ ನಿಮಗೂ ತಿಳಿದಿರಲಿ title=
EPFO New Rule

EPFO New Rule: ನೀವು ಉದ್ಯೋಗಿಯಾಗಿದ್ದರೆ ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಿ. ಸೆಪ್ಟೆಂಬರ್‌ನಿಂದ ಬದಲಾಗಲಿರುವ ಈ ಪಿಎಫ್ ನಿಯಮದ ಬಗ್ಗೆ ತಪ್ಪದೇ  ತಿಳಿದಿರಲಿ. ಇಪಿಎಫ್‌ಒ ತನ್ನ ನಿಯಮಗಳನ್ನು ಬದಲಾಯಿಸುತ್ತಿದೆ. ಭವಿಷ್ಯ ನಿಧಿಗಳಿಗೆ ಸಂಬಂಧಿಸಿದ ಈ ನಿಯಮಗಳು ಸೆಪ್ಟೆಂಬರ್ 1 ರಿಂದ ಅನ್ವಯವಾಗುತ್ತವೆ. ನೀವು ಈ ನಿಯಮವನ್ನು ಅನುಸರಿಸದಿದ್ದರೆ ನಿಮ್ಮ ಉದ್ಯೋಗದಾತರು ಪ್ರತಿ ತಿಂಗಳು ನಿಮ್ಮ ಖಾತೆಗೆ 12% (ಉದ್ಯೋಗದಾತರ ಕೊಡುಗೆ) ಕೊಡುಗೆ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಬಗ್ಗೆ ನಿಗಾ ವಹಿಸಿ ಇಲ್ಲವೇ ನಿಮಗೆ ದೊಡ್ಡ ನಷ್ಟವಾಗಬಹುದು. 

ವಾಸ್ತವವಾಗಿ, ಸೆಪ್ಟೆಂಬರ್ 1 ರಿಂದ, EPFO ​​ಯುನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ, ಈಗಾಗಲೇ ಎಲ್ಲಾ ಚಂದಾದಾರರಿಗೆ ಎಚ್ಚರಿಕೆಯನ್ನು ಕಳುಹಿಸಲಾಗಿದೆ. ಆದರೆ, ತಮ್ಮ ಪಿಎಫ್ ಖಾತೆಯನ್ನು ಆಧಾರ್ ಜೊತೆಗೆ ಲಿಂಕ್ (PF Aadhaar Link) ಮಾಡದ ಹಲವು ಖಾತೆಗಳು ಇನ್ನೂ ಇವೆ. ಆದರೆ, ಸೆಪ್ಟೆಂಬರ್ 1 ರಿಂದ ಆಧಾರ್ ಜೊತೆ ಲಿಂಕ್ ಆಗದ ಪಿಎಫ್ ಖಾತೆಗಳಿಗೆ ಉದ್ಯೋಗದಾತರು ಭವಿಷ್ಯ ನಿಧಿ (ಪಿಎಫ್) ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಯುಎಎನ್-ಆಧಾರ್ ಅನ್ನು ಇಪಿಎಫ್ ಖಾತೆಗಳೊಂದಿಗೆ 1 ನೇ ಸೆಪ್ಟೆಂಬರ್ 2021 ರ ಮೊದಲು ಲಿಂಕ್ ಮಾಡುವಂತೆ ಗಡುವು ನಿಗದಿಗೊಳಿಸಿದೆ.

ಇದನ್ನೂ ಓದಿ- Online Passport Apply : ಈಗ ಮನೆಯಿಂದಲೇ Passport ಗೆ ಅರ್ಜಿ ಸಲ್ಲಿಸಬಹುದು - ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ!

ಪಿಎಫ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗದಿದ್ದರೆ ಹಲವು ಪ್ರಯೋಜನಗಳಿಂದ ವಂಚಿತರಾಗುವಿರಿ:
ಸಾಮಾಜಿಕ ಭದ್ರತಾ ಸಂಹಿತೆಯ ಸೆಕ್ಷನ್ 142 ರ ಅಡಿಯಲ್ಲಿ ಪಿಎಫ್ ಖಾತೆಯನ್ನು (PF Account) ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಯುಎಎನ್ ಜೊತೆ ಆಧಾರ್ ಲಿಂಕ್ ಮಾಡದಿದ್ದರೆ, ಪಿಎಫ್ ಹಣವನ್ನು ನಿಮ್ಮ ಇಪಿಎಫ್ ಖಾತೆಗೆ ಜಮಾ ಮಾಡಲಾಗುವುದಿಲ್ಲ. ಇದಲ್ಲದೆ ಇಪಿಎಫ್‌ನಿಂದ ಹಿಂಪಡೆಯುವಿಕೆ ಮತ್ತು ಮುಂಗಡ ಸಾಲಗಳನ್ನು ಪಡೆಯುವುದು ಸಹ ಕಷ್ಟಕರವಾಗಿರುತ್ತದೆ. ಆರ್ಥಿಕ ತಜ್ಞರ ಪ್ರಕಾರ, ಪಿಎಫ್ ಖಾತೆ ಜೊತೆಗೆ ಆಧಾರ್ ಲಿಂಕ್ ಇಲ್ಲದಿದ್ದರೆ, ಪಿಂಚಣಿ ನಿಧಿಗೆ ಕೊಡುಗೆಯ ಮೇಲೂ ಪರಿಣಾಮ ಬೀರುತ್ತದೆ. ನಿವೃತ್ತಿ ಪ್ರಯೋಜನಗಳಿಗೂ ಭವಿಷ್ಯ ನಿಧಿ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಉದ್ಯೋಗದಾತರಿಗೆ ECR ತುಂಬಲು ಸಾಧ್ಯವಾಗುವುದಿಲ್ಲ:
EPFO ಜೂನ್ ನಲ್ಲಿ ಎಲೆಕ್ಟ್ರಾನಿಕ್ ಚಲನ್ ಮತ್ತು ರಿಟರ್ನ್ (ECR) ಸಲ್ಲಿಸುವ ನಿಯಮಗಳನ್ನು ಬದಲಿಸಿದೆ. UAN ಜೊತೆ ಆಧಾರ್ ಲಿಂಕ್ ಮಾಡಿದ ಉದ್ಯೋಗಿಗಳಿಗೆ ಮಾತ್ರ ECR ಫೈಲ್ ಮಾಡಲು ಉದ್ಯೋಗದಾತರಿಗೆ ಇದು ಅವಕಾಶ ನೀಡಿದೆ. ಎಲ್ಲಾ ಉದ್ಯೋಗಿಗಳ UAN- ಆಧಾರ್ ಲಿಂಕ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು EPFO ​​ಉದ್ಯೋಗದಾತರಿಗೆ ಕೇಳಿದೆ. ಪಿಎಫ್ ಖಾತೆಯಲ್ಲಿ ಹಣ ಜಮಾ ಮಾಡದಿದ್ದಲ್ಲಿ, ಬಡ್ಡಿಯನ್ನೂ ಕಳೆದುಕೊಳ್ಳಬಹುದು.

ಇದನ್ನೂ ಓದಿ- NPS Rule Change: NPS ನಿಯಮಗಳಲ್ಲಿ ಭಾರಿ ಬದಲಾವಣೆ

ಯುಎಎನ್-ಆಧಾರ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ?
>> EPFO ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://unifiedportal-mem.epfindia.gov.in/memberinterface/.
>> ನಿಮ್ಮ UAN ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
>> ಮ್ಯಾನೇಜ್ ವಿಭಾಗದಲ್ಲಿ KYC ಆಯ್ಕೆಯನ್ನು ಕ್ಲಿಕ್ ಮಾಡಿ.
>> ಇಪಿಎಫ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಲು ಹಲವಾರು ದಾಖಲೆಗಳ ಅಗತ್ಯವಿದೆ.
>> ಆಧಾರ್ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ಟೈಪ್ ಮಾಡಿ, ನಂತರ ಸೇವೆಯ ಮೇಲೆ ಕ್ಲಿಕ್ ಮಾಡಿ.
>> ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಮಾಹಿತಿಯನ್ನು ಸುರಕ್ಷಿತಗೊಳಿಸಲಾಗುತ್ತದೆ ಮತ್ತು ನಿಮ್ಮ ಆಧಾರ್ ಅನ್ನು UIDAI ಡೇಟಾದೊಂದಿಗೆ ಪರಿಶೀಲಿಸಲಾಗುತ್ತದೆ.
>> ಒಮ್ಮೆ KYC ಡಾಕ್ಯುಮೆಂಟ್ ಅನ್ನು ಪರಿಶೀಲಿಸಿದ ನಂತರ, ಆಧಾರ್ ಅನ್ನು EPF ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ.
>> ಕೆವೈಸಿ ಆಯ್ಕೆಯಲ್ಲಿ, ಆಧಾರ್ ಮುಂದೆ "ವೆರಿಫೈ" ಎಂದು ಬರೆಯಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News