ನವದೆಹಲಿ : ಇಪಿಎಫ್ ಖಾತೆದಾರರಿಗೆ ಇದು ಬಿಗ್ ನ್ಯೂಸ್ ಆಗಿದೆ. ನೀವು ಕೂಡ ಇಪಿಎಫ್‌ಗೆ ಸಂಬಂಧಿಸಿದ ಈ ಕೆಲಸವನ್ನು ಮಾಡದಿದ್ದರೆ, ನಿಮಗೆ ಸಮಸ್ಯೆ ಉಂಟಾಗಬಹುದು. EFFO ಮೂಲಕ PF ಖಾತೆಗಳೊಂದಿಗೆ UAN ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಕೊನೆಯ ದಿನಾಂಕ 1 ಸೆಪ್ಟೆಂಬರ್ 2021 (EPF- ಆಧಾರ್ ಲಿಂಕ್ ಮಾಡುವ ಗಡುವು ವಿಸ್ತರಿಸಲಾಗಿದೆ). ಮೊದಲು ಅದರ ಕೊನೆಯ ದಿನಾಂಕ (ಇಪಿಎಫ್-ಆಧಾರ್ ಲಿಂಕ್ ಮಾಡುವ ಗಡುವು) 1 ಜೂನ್ 2021 ಆಗಿತ್ತು. ನೀವು ಯಾವುದೇ ಕಾರಣಕ್ಕೂ ಇಲ್ಲಿಯವರೆಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಪಿಎಫ್ ಖಾತೆಗಳಿಗೆ ಮತ್ತು ಯುಎಎನ್ ಖಾತೆಗೆ ಲಿಂಕ್ ಮಾಡದಿದ್ದರೆ, ಬೇಗನೆ ಮಾಡಿ.
ಆದಷ್ಟು ಬೇಗ ಮಾಡಿ ಇಲ್ಲದಿದ್ದರೆ ಸಮಸ್ಯೆ ತಪ್ಪಿದಲ್ಲ
ನೀವು ಪಿಎಫ್ ಖಾತೆ(PF Account)ಗೆ ಮತ್ತು ಯುಎಎನ್ ಸಂಖ್ಯೆಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ, ಅದನ್ನು ತಕ್ಷಣವೇ ಮಾಡಿ, ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಗಮನಿಸಬೇಕಾದ ಸಂಗತಿಯೆಂದರೆ, ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು ಸರ್ಕಾರವು ಕೊನೆಯ ದಿನಾಂಕವನ್ನು ಮೊದಲೇ ವಿಸ್ತರಿಸಿತ್ತು. ಮೊದಲು, ಇಪಿಎಫ್‌ಒ ಈ ಕೆಲಸಕ್ಕಾಗಿ ಜೂನ್ 1, 2021 ರ ಗಡುವು ವಿಧಿಸಿತ್ತು.
ಇದನ್ನೂ ಓದಿ : LPG Cylinder Booking ಮೇಲೆ ಬಂಪರ್ ಕೊಡುಗೆ! 2700 ರೂ.ಗಳ ಲಾಭದ ಜೊತೆಗೆ ಇನ್ನೂ ಹಲವು ಪ್ರಯೋಜನ
ಪಿಎಫ್ ರಿಟರ್ನ್ ರಶೀದಿ ದಿನಾಂಕ ವಿಸ್ತರಣೆ
EPFO ಹೊರಡಿಸಿದ ಆದೇಶದ ಪ್ರಕಾರ, PF ರಿಟರ್ನ್ ಅನ್ನು ಆಧಾರ್ ಪರಿಶೀಲಿಸಿದ UAN ನೊಂದಿಗೆ ಸಲ್ಲಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 1, 2021 ರವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ(Ministry of Labour and Employment)ವು ಮೇ 3 ರಂದು ಅಧಿಸೂಚನೆಯನ್ನು ಹೊರಡಿಸಿತ್ತು, ಇದರಲ್ಲಿ ಸಾಮಾಜಿಕ ಭದ್ರತಾ ಸಂಹಿತೆಯ ಅಡಿಯಲ್ಲಿ, ಆಧಾರ್ ಸಂಖ್ಯೆಯನ್ನು ಫಲಾನುಭವಿಗಳಿಂದ ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ. ಇದಾದ ನಂತರವೇ ಇಪಿಎಫ್‌ಒ ಗಡುವು ವಿಸ್ತರಿಸಿದೆ.
ಇದನ್ನೂ ಓದಿ : Indian Railways: ರೈಲಿನಲ್ಲಿ ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸುವ ಮೊದಲು IRCTC ಯ ಈ ನಿಯಮ ನಿಮಗೂ ಗೊತ್ತಿರಲಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.