EPFO Alert: ಪಿಎಫ್ ಖಾತೆ ಹೊಂದಿದವರು ಈ ಸುದ್ದಿಯನ್ನು ತಪ್ಪದೆ ಓದಿ

EPFO Alert: PF ಖಾತೆದಾರರಿಗೆ EPFO ​​ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬರೆದುಕೊಂಡಿರುವ ಸಂಸ್ಥೆ, ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ ಅಥವಾ ಒಟಿಪಿಯಂತಹ ವೈಯಕ್ತಿಕ ವಿವರಗಳನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಇಪಿಎಫ್ಓ ತನ್ನ ಖಾತೆದರರಿಗೆ ಎಂದಿಗೂ ಕೇಳುವುದಿಲ್ಲ ಎಂದು ಹೇಳಿದೆ.  

Written by - Nitin Tabib | Last Updated : Aug 15, 2022, 09:39 PM IST
  • ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಎಲ್ಲಾ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.
  • ಯಾವುದೇ ಖಾತೆದಾರರು ಅಪ್ಪಿತಪ್ಪಿಯೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು EPFO ಕೇಳಿಕೊಂಡಿದೆ.
EPFO Alert: ಪಿಎಫ್ ಖಾತೆ ಹೊಂದಿದವರು ಈ ಸುದ್ದಿಯನ್ನು ತಪ್ಪದೆ ಓದಿ title=
EPFO Alert

EPFO: ನೌಕರರ ಭವಿಷ್ಯ ನಿಧಿ ಸಂಘಟನೆ ಎಲ್ಲಾ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಯಾವುದೇ ಖಾತೆದಾರರು ಅಪ್ಪಿತಪ್ಪಿಯೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು EPFO ​​ತನ್ನ ಎಲ್ಲಾ ಸದಸ್ಯರಿಗೆ ಕೇಳಿಕೊಂಡಿದೆ. ಈ ಕಾರಣದಿಂದಾಗಿ, ಖಾತೆದಾರರು ದೊಡ್ಡ ವಂಚನೆಗಳಿಗೆ ಬಲಿಯಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಇಪಿಎಫ್ ಖಾತೆಯ ಮಾಹಿತಿಯು ವಂಚಕರ ಕೈಯಲ್ಲಿದ್ದರೆ, ಅವರು ನಿಮ್ಮ ಖಾತೆಯಿಂದ ಹಣವನ್ನು ಲಪಟಾಯಿಸಬಹುದು ಎಂದು ಅದು ಎಚ್ಚರಿಕೆ ನೀಡಿದೆ.

EPFO ತನ್ನ ಸದಸ್ಯರಿಂದ ಆಧಾರ್, PAN, UAN, ಬ್ಯಾಂಕ್ ವಿವರಗಳ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎಂದು EPFO ​​ಹೇಳಿದೆ. ಯಾರಾದರೂ ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಮಾಹಿತಿಯನ್ನು ಕೇಳಿದರೆ, ಎಚ್ಚೆತ್ತುಕೊಳ್ಳಿ ಮತ್ತು ಅದನ್ನು ಹಂಚಿಕೆ ಮಾಡಬೇಡಿ ಹಾಗೂ  ಅಂತಹ ಮೋಸದ ಫೋನ್ ಕರೆಗಳಿಗೆ ಉತ್ತರಿಸಬೇಡಿ ಅಥವಾ ಅಂತಹ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ ಎಂದು ಅದು ಕೋರಿದೆ.

ಇಪಿಎಫ್‌ಒ ನೀಡಿದ ಮಾಹಿತಿ ಏನು?
ತನ್ನ ಎಲ್ಲಾ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡುತ್ತ ಟ್ವೀಟ್ ಬರೆದುಕೊಂಡಿರುವ ಇಪಿಎಫ್‌ಒ, 'ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ ಅಥವಾ ಒಟಿಪಿಯಂತಹ ವೈಯಕ್ತಿಕ ವಿವರಗಳನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ತನ್ನ ಸದಸ್ಯರಿಗೆ ಸಂಸ್ಥೆ ಎಂದಿಗೂ ಕೂಡ ಕೋರುವುದಿಲ್ಲ. ಇಪಿಎಫ್‌ಒ ಯಾವುದೇ ಸೇವೆಗಾಗಿ ವಾಟ್ಸಾಪ್, ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ಯಾವುದೇ ರೀತಿಯ ಹಣವನ್ನು ಪಾವತಿಸಲು ಹೇಳುವುದಿಲ್ಲ' ಎಂದು ಹೇಳಿದೆ.

ಇದನ್ನೂ ಓದಿ-Arecanut today price: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೀಗಿದೆ ನೋಡಿ

ಫಿಶಿಂಗ್ ಆನ್‌ಲೈನ್ ಫ್ರಾಡ್
ಪಿಎಫ್ ಖಾತೆಯಲ್ಲಿ ಜನರು ದೊಡ್ಡ ಮೊತ್ತದ ಠೇವಣಿ ಇರಿಸುತ್ತಾರೆ, ಜನರು ತಮ್ಮ ನಿವೃತ್ತಿ ನಂತರದ ವೆಚ್ಚಗಳಿಗಾಗಿ ಈ ಮೊತ್ತವನ್ನು ನಿಯಮಿತ ರೂಪದಲ್ಲಿ ಠೇವಣಿ ಇಡುತ್ತಾರೆ ಎಂಬುದು ಇಲ್ಲಿ ಗಮನಾರ್ಹ. ವಂಚಕರು ಇಲ್ಲಿ ಒಂದೇ ಸ್ಟ್ರೋಕ್‌ನಲ್ಲಿ ದೊಡ್ಡ ಮೊತ್ತವನ್ನು ಲಪಟಾಯಿಸಬಹುದು ಎಂಬುದನ್ನು ಅರಿತಿರುತ್ತಾರೆ. ಆದ್ದರಿಂದ ಅವರು ಫಿಶಿಂಗ್ ದಾಳಿಯ ಮೂಲಕ ಖಾತೆಯ ಮೇಲೆ ದಾಳಿ ನಡೆಸುತ್ತಾರೆ. ವಾಸ್ತವವಾಗಿ, ಫಿಶಿಂಗ್ ಎನ್ನುವುದು ಆನ್‌ಲೈನ್ ವಂಚನೆಯ ಒಂದು ಪ್ದ್ರಕಾರವಗಿದ್ದು, ಇದರಲ್ಲಿ ಠೇವಣಿದಾರರಿಗೆ ಪಂಗನಾಮ ಹಾಕಲಾಗುತ್ತದೆ, ಖಾತೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಖಾತೆದಾರರಿಂದ ಪಡೆದು ನಂತರ ಖಾತೆಯನ್ನು ಖಾಲಿಗೊಳಿಸಲಾಗುತ್ತದೆ.

ಇದನ್ನೂ ಓದಿ-PM Kisan Update : ಪಿಎಂ ಕಿಸಾನ್ 12ನೇ ಕಂತಿನಲ್ಲಿ ಬರಲಿದೆ 4 ಸಾವಿರ ರೂಪಾಯಿ!

ಈ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ
PF ಖಾತೆದಾರರು ಮರೆತೂ ಕೂಡ PAN ಸಂಖ್ಯೆ, ಆಧಾರ್ ಸಂಖ್ಯೆ, UAN ಮತ್ತು ತಮ್ಮ PF ಖಾತೆ ಸಂಖ್ಯೆಯನ್ನು ಅಥವಾ ಖಾತೆಗೆ ಸಂಬಂಧಿಸಿದ  ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಬಾರದು. ಈ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ನಿಮ್ಮ ಖಾತೆ ಖಾಲಿಯಾಗುವ ಸಾಧ್ಯತೆ ಇದೆ. ಒಂದು ಕೆಲಸ ಬಿಟ್ಟು ಬೇರೆಡೆಗೆ ಕೆಲಸಕ್ಕೆ ಸೇರಿದವರಲ್ಲಿ ಇಂತಹ ವಂಚನೆ ಪ್ದ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ವೈಯಕ್ತಿಕ ವಿವರಗಳನ್ನು ಕೋರುವ ಯಾವುದೇ ಫಿಶಿಂಗ್ ಕರೆ ಅಥವಾ ಸಂದೇಶದ ವಿರುದ್ಧ ಪೊಲೀಸರಿಗೆ ತಕ್ಷಣ ದೂರು ದಾಖಲಿಸಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News