EPFO- ಆಧಾರ್ ಲಿಂಕ್ Alert! ಈ ದಿನಾಂಕದ ಒಳಗೆ ಈ ದಾಖಲೆಗಳನ್ನು ಲಿಂಕ್ ಮಾಡಿ! ಹೇಗೆ ಇಲ್ಲಿದೆ ನೋಡಿ 

ಕಡ್ಡಾಯ ಲಿಂಕ್‌ಗಾಗಿ, ಸಾಮಾಜಿಕ ಭದ್ರತೆ ಕೋಡ್ 2020 ರ ಸೆಕ್ಷನ್ 142 ರಲ್ಲಿ ಇಪಿಎಫ್‌ಒ ಹಲವಾರು ಬದಲಾವಣೆಗಳನ್ನು ಮಾಡಿದೆ.

Written by - Channabasava A Kashinakunti | Last Updated : Aug 7, 2021, 04:07 PM IST
  • ಪಿಎಫ್‌ ಖಾತೆ ಜೊತೆ ಆಧಾರ್‌ನೊಂದಿಗೆ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಿದೆ
  • ಸಾಮಾಜಿಕ ಭದ್ರತೆ ಕೋಡ್ 2020 ರ ಸೆಕ್ಷನ್ 142 ರಲ್ಲಿ ಇಪಿಎಫ್‌ಒ ಹಲವಾರು ಬದಲಾವಣೆ
  • ನಿಮ್ಮ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ
EPFO- ಆಧಾರ್ ಲಿಂಕ್ Alert! ಈ ದಿನಾಂಕದ ಒಳಗೆ ಈ ದಾಖಲೆಗಳನ್ನು ಲಿಂಕ್ ಮಾಡಿ! ಹೇಗೆ ಇಲ್ಲಿದೆ ನೋಡಿ  title=

ನವದೆಹಲಿ : ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯು ತನ್ನ ಸದಸ್ಯರಿಗೆ ಪಿಎಫ್‌ ಖಾತೆ ಜೊತೆ ಆಧಾರ್‌ನೊಂದಿಗೆ ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್ 1, 2021 ವಿಸ್ತರಿಸಿದೆ. ಇಪಿಎಫ್‌ಒ ಈಗಾಗಲೇ ಎಲೆಕ್ಟ್ರಾನಿಕ್ ಚಲನ್-ಕಮ್-ರಿಟರ್ನ್ಸ್ (ಇಸಿಆರ್) ಸಲ್ಲಿಸುವ ಗಡುವನ್ನು ವಿಸ್ತರಿಸಿದೆ.

ಕಡ್ಡಾಯ ಲಿಂಕ್‌(Mandatory Linking)ಗಾಗಿ, ಸಾಮಾಜಿಕ ಭದ್ರತೆ ಕೋಡ್ 2020 ರ ಸೆಕ್ಷನ್ 142 ರಲ್ಲಿ ಇಪಿಎಫ್‌ಒ ಹಲವಾರು ಬದಲಾವಣೆಗಳನ್ನು ಮಾಡಿದೆ.

ಇದನ್ನೂ ಓದಿ : Gold Price : ಚಿನ್ನ ಖರೀದಿಗೆ ಸುವರ್ಣಾವಕಾಶ! 5 ದಿನಗಳಲ್ಲಿ 450 ರೂ.ಗಳಷ್ಟು ಇಳಿಕೆ ಕಂಡ ಚಿನ್ನದ ಬೆಲೆ!

ಈ ಹಿಂದೆ, ಇಪಿಎಫ್‌ಒ ಟ್ವೀಟ್ ಮೂಲಕ ಜೂನ್ 1, 2021 ರ ನಂತರ, ಉದ್ಯೋಗದಾತರು ಆಧಾರ್ ಮತ್ತು ಯುಎಎನ್ ಲಿಂಕ್(EPFO-Aadhaar Link) ಮಾಡಿದ ಅದೇ ಉದ್ಯೋಗಿಯ ಇಸಿಆರ್ ಅನ್ನು ಸಲ್ಲಿಸಬಹುದು ಎಂದು ತಿಳಿಸಿತ್ತು ಮತ್ತು ಉಳಿದವರು ಇಸಿಆರ್ ಅನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು.

ನಿಮ್ಮ ಖಾತೆ(Account)ಯೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ, ಉದ್ಯೋಗಿಗಳ ಖಾತೆಗೆ ಬರುವ ಉದ್ಯೋಗದಾತರ ಕೊಡುಗೆಯನ್ನು EPFO ​​ಸುಲಭವಾಗಿ ನಿಲ್ಲಿಸುತ್ತದೆ ಮತ್ತು ದಾಖಲೆಗಳನ್ನು ಲಿಂಕ್ ಮಾಡಿದ ನಂತರವೇ ಅದನ್ನು ಪ್ರಾರಂಭಿಸಬಹುದು. ಆದ್ದರಿಂದ, ಈ ದಾಖಲೆಗಳನ್ನು ಲಿಂಕ್ ಮಾಡುವುದು ಮುಖ್ಯವಾಗಿದೆ.

ಇದನ್ನೂ ಓದಿ : PF ಖಾತೆಗೆ ಸಂಬಂಧಿಸಿದ ಈ ಕೆಲಸವನ್ನು ಬೇಗ ಮಾಡಿ : ಇಲ್ಲದಿದ್ದರೆ 7 ಲಕ್ಷಕ್ಕಿಂತ ಹೆಚ್ಚು ಹಣ ಕಳೆದುಕೊಳ್ಳಬೇಕಾಗುತ್ತದೆ!

ಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ :

1) ಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡಲು, epfindia.gov.in ಗೆ ಭೇಟಿ ನೀಡಿ

2) ನಂತರ ಆನ್‌ಲೈನ್ ಸೇವೆಗಳಲ್ಲಿ ಇ-ಕೆವೈಸಿ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ

3) ಈಗ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ಆ ನಂಬರ್ ಗೆ OTP ಬರುತ್ತದೆ.

4) ಮತ್ತೊಮ್ಮೆ, ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಬೇಕಾಗುತ್ತದೆ. ಈಗ OTP ಅನ್ನು ಪರಿಶೀಲಿಸಿ.

5) OTP, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನು ಮೂರು ಬಾರಿ ನಮೂದಿಸಿದ ನಂತರ,

ನಿಮ್ಮ ಪಿಎಫ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗುತ್ತದೆ.

ಇದನ್ನೂ ಓದಿ : IRCTC iPay: ಐಆರ್‌ಸಿಟಿಸಿ ಪಾವತಿ ಗೇಟ್‌ವೇ ಬಳಸುವುದು ಹೇಗೆ? ಅದರ ಪ್ರಯೋಜನಗಳೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News