Employee's Pension Limit: ಇನ್ಮುಂದೆ 25000 ರೂ. ಪೆನ್ಷನ್ ಸಿಗಲಿದೆ! ಶೇ.333 ವೃದ್ಧಿ, ಹೇಗೆ ಇಲ್ಲಿ ತಿಳಿದುಕೊಳ್ಳಿ

EPFO Update: ಒಂದು ವೇಳೆ ನೀವೂ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಪೆನ್ಷನ್ ಖಾತೆಯಲ್ಲಿ ನಿಮಗೆ ಶೇ.333 ಏರಿಕೆಯ ಲಾಭ ಸಿಗುವ ಸಾಧ್ಯತೆ ಇದೆ. EPFO ನಡೆಸುತ್ತಿರುವ ಹೊಸ ಸಿದ್ಧತೆ ಏನು ತಿಳಿದುಕೊಳ್ಳೋಣ ಬನ್ನಿ,

Written by - Nitin Tabib | Last Updated : Nov 30, 2022, 05:54 PM IST
  • ಪಿಂಚಣಿ ಪಡೆಯಲು, ನೌಕರರು 10 ವರ್ಷಗಳವರೆಗೆ ಇಪಿಎಫ್‌ಗೆ ಕೊಡುಗೆ ನೀಡುವುದು ಅವಶ್ಯಕವಾಗಿದೆ.
  • ಮತ್ತೊಂದೆಡೆ, ಉದ್ಯೋಗಿ 20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದಾಗ,
  • ಅವರಿಗೆ 2 ವರ್ಷಗಳ ವೇಟೇಜ್ ಅನ್ನು ಸಹ ನೀಡಲಾಗುತ್ತದೆ.
Employee's Pension Limit: ಇನ್ಮುಂದೆ 25000 ರೂ. ಪೆನ್ಷನ್ ಸಿಗಲಿದೆ! ಶೇ.333 ವೃದ್ಧಿ, ಹೇಗೆ ಇಲ್ಲಿ ತಿಳಿದುಕೊಳ್ಳಿ title=
EPFO Latest Update

EPFO Update: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಶೀಘ್ರದಲ್ಲೇ ನೌಕರರ ಭವಿಷ್ಯ ನಿಧಿ ಸಂಘಟನೆಯಿಂದ ಹೊಸ ಪ್ರಯೋಜನ ಸಿಗುವ ಸಾಧ್ಯತೆ ಇದೆ. EPFO ನ ಈ ನಿರ್ಧಾರದಿಂದ  ಉದ್ಯೋಗಿಗಳ ಪಿಂಚಣಿ ಖಾತೆಯಲ್ಲಿ ಶೇ.333 ರಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ. ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ನೌಕರರ ಪಿಂಚಣಿಯನ್ನು ಗಮನದಲ್ಲಿಟ್ಟುಕೊಂಡು ಗರಿಷ್ಠ ಮೂಲ ವೇತನವನ್ನು  15,000 ರೂ.ಗಳನ್ನು ನಿಗದಿಪಡಿಸಿದೆ, ಅಂದರೆ ನಿಮ್ಮ ವೇತನವು ತಿಂಗಳಿಗೆ 15,000 ರೂ.ಗಿಂತ ಹೆಚ್ಚಾಗಿದ್ದರೆ, ನಿಮ್ಮ ಪಿಂಚಣಿಯ ಲೆಕ್ಕಾಚಾರವು ಕೂಡ ರೂ. 15,000 ಆಧಾರದ ಮೇಲೆಯೇ ನಡೆಸಲಾಗುತ್ತದೆ. ಪ್ರಸ್ತುತ, EPFO ​​ಈ ವೇತನ ಮಿತಿಯನ್ನು ತೆಗೆದುಹಾಕಲು ಯೋಜನೆ ರೂಪಿಸುತ್ತಿದೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಉದ್ಯೋಗಿಗಳ ಪಿಂಚಣಿ ಯೋಜನೆಯನ್ನು ಹೆಚ್ಚಿನ ಸಂಬಳದ ಬ್ರಾಕೆಟ್‌ನಲ್ಲಿಯೂ ಲೆಕ್ಕ ಹಾಗಲಾಗುವುದು ಎನ್ನಲಾಗಿದೆ. ಈ ನಿರ್ಧಾರ ಒಂದೊಮ್ಮೆ ಜಾರಿಯಾದರೆ ನೌಕರರಿಗೆ ಬಹುಪಾಲು ಪಿಂಚಣಿಯ ಲಾಭ ಸಿಗಲಿದೆ.

ಪಿಂಚಣಿ ಪಡೆಯಲು, ನೌಕರರು 10 ವರ್ಷಗಳವರೆಗೆ ಇಪಿಎಫ್‌ಗೆ ಕೊಡುಗೆ ನೀಡುವುದು ಅವಶ್ಯಕವಾಗಿದೆ. ಮತ್ತೊಂದೆಡೆ, ಉದ್ಯೋಗಿ 20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದಾಗ, ಅವರಿಗೆ 2 ವರ್ಷಗಳ ವೇಟೇಜ್ ಅನ್ನು ಸಹ ನೀಡಲಾಗುತ್ತದೆ. ಮಿತಿಯನ್ನು ತೆಗೆದುಹಾಕಿದರೆ ಅದು ಎಷ್ಟು ವ್ಯತ್ಯಾಸವನ್ನು ತೋರಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ಓದಿ-7th Pay Commission: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರಿ ಗುಡ್ ನ್ಯೂಸ್

ಪಿಂಚಣಿ ಲೆಕ್ಕಾಚಾರ
ಉದಾಹರಣೆಗಾಗಿ, ಯಾವುದೇ ಓರ್ವ ಉದ್ಯೋಗಿಯು ಜೂನ್ 1, 2015 ರಿಂದ ಕೆಲಸ ಮಾಡುತ್ತಿದ್ದರೆ ಮತ್ತು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಪಿಂಚಣಿ ಪಡೆಯಲು ಬಯಸಿದರೆ, ಅವನ ಪಿಂಚಣಿಯನ್ನು ಕೇವಲ 15,000 ರೂ ಎಂದು ಲೆಕ್ಕಹಾಕಲಾಗುತ್ತದೆ (ಹಳೆ ಲೆಕ್ಕಾಚಾರ). ಅಂದರೆ, ಹಳೆಯ ಸೂತ್ರದ ಪ್ರಕಾರ, ಉದ್ಯೋಗಿಗೆ ಜೂನ್ 2, 2030 ರಿಂದ 14 ವರ್ಷಗಳು ಪೂರ್ಣಗೊಂಡಾಗ ಸುಮಾರು 3,000 ರೂಪಾಯಿಗಳ ಪಿಂಚಣಿ ಸಿಗುತ್ತದೆ. ಪಿಂಚಣಿ ಲೆಕ್ಕಾಚಾರದ ಸೂತ್ರವು ತುಂಬಾ ಸರಳವಾಗಿದೆ. ಇದನ್ನು ಸೇವಾ ಇತಿಹಾಸ x 15,000/70 ಸೂತ್ರದಿಂದ ಲೆಕ್ಕ ಹಾಕಲಾಗುತ್ತದೆ.

ಇದನ್ನೂ ಓದಿ-Ration Card: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ, ಪಡಿತರ ಚೀಟಿ ಹೊಂದಿದವರಿಗೆ ಭಾರಿ ನೆಮ್ಮದಿ

ಪಿಂಚಣಿಯಲ್ಲಿ ಹೆಚ್ಚಳವಾಗಲಿದೆ
ಇಪಿಎಫ್‌ಒ ನಿಯಮಗಳ ಪ್ರಕಾರ, ಉದ್ಯೋಗಿ 20 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದರೆ ಮತ್ತು ಈ ಅವಧಿಯಲ್ಲಿ ಇಪಿಎಫ್‌ಗೆ ಕೊಡುಗೆ ನೀಡಿದರೆ, ಅವನ ಸೇವೆಗೆ ಇನ್ನೂ ಎರಡು ವರ್ಷಗಳನ್ನು ಸೇರಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ 33 ವರ್ಷ ಸೇವೆ ಪೂರೈಸಿದರೂ ಅವರ ಸೇವೆ 35 ವರ್ಷವ್ವಾಗುತದೆ. ಈ ಪರಿಸ್ಥಿತಿಯಲ್ಲಿ, ಆ ಉದ್ಯೋಗಿಯ ವೇತನದಲ್ಲಿ ಶೇ.333 ರಷ್ಟು ಹೆಚ್ಚಳವಾಗಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News