e-RUPI Digital Payment: ಡಿಜಿಟಲ್ ಪಾವತಿ ಉತ್ತೇಜಿಸುವ E-RUPIಯ 10 ಪ್ರಯೋಜನ ತಿಳಿಯಿರಿ

e-RUPI Digital Payment: ಇ-ರುಪಿ ಮೂಲಕ ಡಿಜಿಟಲ್ ಪಾವತಿಗಳನ್ನು ಪ್ರಚಾರ ಮಾಡಲಾಗುತ್ತದೆ. ಅದರ ಹತ್ತು ಪ್ರಯೋಜನಗಳ ಬಗ್ಗೆ ತಿಳಿಯಿರಿ.  

Written by - Yashaswini V | Last Updated : Aug 4, 2021, 01:39 PM IST
  • ಇ-ರೂಪಾಯಿ/ಇ-ರುಪಿ ನಗದುರಹಿತ ಮತ್ತು ಸಂಪರ್ಕವಿಲ್ಲದ ಸಾಧನವಾಗಿದೆ
  • ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ
  • ಇದು ಯಾವುದೇ ಮಧ್ಯವರ್ತಿ ಒಳಗೊಳ್ಳದೆ ಸೇವಾ ಪೂರೈಕೆದಾರರಿಗೆ ಸಕಾಲಿಕವಾಗಿ ಪಾವತಿ ಮಾಡುತ್ತದೆ
e-RUPI Digital Payment: ಡಿಜಿಟಲ್ ಪಾವತಿ ಉತ್ತೇಜಿಸುವ E-RUPIಯ 10 ಪ್ರಯೋಜನ ತಿಳಿಯಿರಿ title=
e-RUPI Digital Payment Benefits

e-RUPI Digital Payment: ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಇ-ವೋಚರ್ ಆಧಾರಿತ ಡಿಜಿಟಲ್ ಪಾವತಿ ಪರಿಹಾರ ಇ-ರುಪಿ ಅನ್ನು ಆರಂಭಿಸಲಾಗಿದೆ. ಇದು ಪ್ರಿಪೇಯ್ಡ್ ಇ-ವೋಚರ್ ಆಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ. 

ಇ-ರೂಪಾಯಿ/ಇ-ರುಪಿ (e-RUPI) ನಗದುರಹಿತ ಮತ್ತು ಸಂಪರ್ಕವಿಲ್ಲದ ಸಾಧನವಾಗಿದೆ. ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ, ಇದನ್ನು ಫಲಾನುಭವಿಗಳ ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಇದು ಯಾವುದೇ ಮಧ್ಯವರ್ತಿ ಒಳಗೊಳ್ಳದೆ ಸೇವಾ ಪೂರೈಕೆದಾರರಿಗೆ ಸಕಾಲಿಕವಾಗಿ ಪಾವತಿ ಮಾಡುತ್ತದೆ.

ಇದನ್ನೂ ಓದಿ- Train Ticket Insurance Benefits: ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ವಿಮೆ ಮಾಡಿಸುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

ಇ-ರುಪಿ ಡಿಜಿಟಲ್ ಪಾವತಿಯ 10 ಅನುಕೂಲಗಳಿವು:-
>> ಇ-ರೂಪಾಯಿ ಎಂದರೆ ನಗದುರಹಿತ ಮತ್ತು ಸಂಪರ್ಕವಿಲ್ಲದ ಡಿಜಿಟಲ್ ಪಾವತಿ (Digital Payment).
>> ಸೇವಾ ಪ್ರಾಯೋಜಕರು ಮತ್ತು ಫಲಾನುಭವಿಗಳನ್ನು ಡಿಜಿಟಲ್ ಮೂಲಕ ಸಂಪರ್ಕಿಸುತ್ತದೆ.
>> ವಿವಿಧ ಕಲ್ಯಾಣ ಸೇವೆಗಳ ಸೋರಿಕೆ-ನಿರೋಧಕ ವಿತರಣೆಯನ್ನು ಖಚಿತಪಡಿಸುತ್ತದೆ.
>> ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ, ಇದನ್ನು ಫಲಾನುಭವಿಗಳ ಮೊಬೈಲ್‌ಗೆ ತಲುಪಿಸಲಾಗುತ್ತದೆ.
>> ಈ ತಡೆರಹಿತ ಒಂದು-ಬಾರಿ ಪಾವತಿ ವ್ಯವಸ್ಥೆಯ ಬಳಕೆದಾರರು ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಸೇವಾ ಪೂರೈಕೆದಾರರಲ್ಲಿ ಬಳಸದೆ ವೋಚರ್ ಅನ್ನು ರಿಡೀಮ್ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ- 10, 20, 50, 100, 500 ಮತ್ತು ₹ 2 ಸಾವಿರ ನೋಟುಗಳ ಮುದ್ರಣ; ಯಾವ ನೋಟು ಮುದ್ರಣಕ್ಕೆ ಹೆಚ್ಚು ವೆಚ್ಚವಾಗುತ್ತೆ?

>> ಯಾವುದೇ ಭೌತಿಕ ಇಂಟರ್ಫೇಸ್ ಇಲ್ಲದೆ ಇ-ರೂಪಾಯಿ ಸೇವೆಗಳ ಪ್ರಾಯೋಜಕರನ್ನು ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಡಿಜಿಟಲ್ ರೀತಿಯಲ್ಲಿ ಸಂಪರ್ಕಿಸುತ್ತದೆ.
>> ವಹಿವಾಟು ಪೂರ್ಣಗೊಂಡ ನಂತರವೇ ಸೇವಾ ಪೂರೈಕೆದಾರರಿಗೆ ಪಾವತಿ ಮಾಡಲಾಗಿದೆಯೆಂದು ಇದು ಖಚಿತಪಡಿಸುತ್ತದೆ.
>> ಸ್ವಭಾವತಃ ಪೂರ್ವ-ಪಾವತಿಯಾಗಿರುವುದರಿಂದ, ಇದು ಯಾವುದೇ ಮಧ್ಯವರ್ತಿಯ ಒಳಗೊಳ್ಳದೆಯೇ ಸಕಾಲಿಕ ಪಾವತಿಯ ಸೇವೆ ಒದಗಿಸುವವರಿಗೆ ಭರವಸೆ ನೀಡುತ್ತದೆ.
>> ನಿಯಮಿತ ಪಾವತಿಗಳ ಹೊರತಾಗಿ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿ, ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಔಷಧಗಳು ಮತ್ತು ರೋಗನಿರ್ಣಯದಂತಹ ಯೋಜನೆಗಳ ಅಡಿಯಲ್ಲಿ ಇದನ್ನು ಬಳಸಬಹುದು. 
>> ಈ ಡಿಜಿಟಲ್ ವೋಚರ್‌ಗಳನ್ನು ಖಾಸಗಿ ವಲಯವು ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳಿಗೆ ಬಳಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News