7th Pay Commission: ಸರ್ಕಾರಿ ನೌಕರರಿಗೆ ಡಬಲ್ ಗಿಫ್ಟ್: ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಳ, 8 ತಿಂಗಳ ಬಾಕಿಯೂ ವಾಪಾಸ್

ಹಬ್ಬದ ಮುನ್ನ ಒಡಿಶಾ ಸರ್ಕಾರ ಸೋಮವಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಪ್ರಕಟಿಸಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋಮವಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸುವ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ.

Written by - Bhavishya Shetty | Last Updated : Sep 19, 2022, 09:12 PM IST
    • ಹಬ್ಬದ ಮುನ್ನ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಪ್ರಕಟಿಸಿದೆ
    • ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ
    • ನೌಕರರ ತುಟ್ಟಿ ಭತ್ಯೆಯನ್ನು ಈಗಿರುವ ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಗಿದೆ
7th Pay Commission: ಸರ್ಕಾರಿ ನೌಕರರಿಗೆ ಡಬಲ್ ಗಿಫ್ಟ್: ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಳ, 8 ತಿಂಗಳ ಬಾಕಿಯೂ ವಾಪಾಸ್ title=
7th Pay Commission

ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನವರಾತ್ರಿಗೂ ಮುನ್ನ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಿದೆ. ನೌಕರರು ಡಿಎ ಹೆಚ್ಚಳಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು.

ಹಬ್ಬದ ಮುನ್ನ ಒಡಿಶಾ ಸರ್ಕಾರ ಸೋಮವಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಪ್ರಕಟಿಸಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋಮವಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸುವ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆ ಪ್ರಕಾರ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: Driving License: ಮನೆಯಲ್ಲೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಮಾರ್ಗ ಇಲ್ಲಿದೆ ನೋಡಿ

ಹೊಸ ಪ್ರಕಟಣೆಯಲ್ಲಿ, ನೌಕರರ ತುಟ್ಟಿ ಭತ್ಯೆಯನ್ನು ಈಗಿರುವ ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಹೆಚ್ಚಿದ ತುಟ್ಟಿಭತ್ಯೆಯನ್ನು ಜನವರಿ 1, 2022 ರಿಂದ ಅನ್ವಯಿಸಲಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಇದರೊಂದಿಗೆ ನೌಕರರಿಗೆ 8 ತಿಂಗಳ ಬಾಕಿಯೂ ಸಿಗಲಿದೆ. ಒಡಿಶಾ ಸರ್ಕಾರದ ಈ ನಿರ್ಧಾರದಿಂದ 4 ಲಕ್ಷ ಉದ್ಯೋಗಿಗಳು ಮತ್ತು 3.5 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಜನವರಿಯಿಂದ ಆಗಸ್ಟ್‌ವರೆಗಿನ ತುಟ್ಟಿಭತ್ಯೆಯ ಬಾಕಿಯನ್ನು ನೌಕರರಿಗೆ ಪ್ರತ್ಯೇಕವಾಗಿ ನೀಡುವುದಾಗಿ ತಿಳಿಸಿತ್ತು.

ಕೇಂದ್ರ ನೌಕರರಿಗೆ ಸಮಾನವಾದ ಡಿಎ:

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಕೂಡ ಪ್ರಸ್ತುತ ಶೇ.34ರಷ್ಟಿರುವುದು ಗಮನಿಸಬೇಕಾದ ಅಂಶ. ಅಂದರೆ, ಈಗ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ತುಟ್ಟಿಭತ್ಯೆಯ ಲಾಭ ರಾಜ್ಯ ಸರ್ಕಾರಿ ನೌಕರರಿಗೂ ಸಿಗಲಿದೆ.

ಇದನ್ನೂ ಓದಿ: Post Office MIS: ಪ್ರತಿತಿಂಗಳು ನಿರ್ದಿಷ್ಟ ಆದಾಯ ನೀಡುವ ಅಂಚೆ ಕಚೇರಿಯ ಮಾಸಿಕ ಯೋಜನೆ

ಡಿಎ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ನೌಕರರು:

ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಬಹುದು ಎಂಬುದು ಗಮನಿಸಬೇಕಾದ ಸಂಗತಿ. ವಾಸ್ತವವಾಗಿ ಉದ್ಯೋಗಿಗಳ ತುಟ್ಟಿ ಭತ್ಯೆಯು AICPI ಯ ಡೇಟಾವನ್ನು ಅವಲಂಬಿಸಿರುತ್ತದೆ. ಎಐಸಿಪಿಐ ದತ್ತಾಂಶದ ಆಧಾರದ ಮೇಲೆ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಆದರೆ ಇನ್ನೂ ಘೋಷಣೆ ಮಾಡಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News