ಸರ್ಕಾರಿ ನೌಕರರಿಗೆ ಡಬಲ್ ಬೋನಸ್..! 23.29% ವೇತನ ಹೆಚ್ಚಳ, ನಿವೃತ್ತಿ ವಯಸ್ಸು 62 ಕ್ಕೆ ಏರಿಕೆ

ಆಂಧ್ರಪ್ರದೇಶ ಸರ್ಕಾರ ತನ್ನ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ ನೀಡಿದೆ.  ರಾಜ್ಯ ಸರ್ಕಾರ ತನ್ನ ನೌಕರರಿಗೆ ಡಬಲ್ ಉಡುಗೊರೆ ನೀಡಿದೆ. 

Written by - Ranjitha R K | Last Updated : Mar 15, 2022, 10:56 AM IST
  • ನೌಕರರ ಸಂಘದ ಒಪ್ಪಿಗೆಯೊಂದಿಗೆ ತೆಗೆದುಕೊಂಡ ನಿರ್ಧಾರ
  • ಜನವರಿ 1, 2022 ರಿಂದ ಸಂಬಳ ಪ್ರಾರಂಭವಾಗಿದೆ
  • ಬಾಕಿ ಇರುವ ಡಿಎ ಕೂಡ ನೀಡಲಾಗುವುದು
ಸರ್ಕಾರಿ ನೌಕರರಿಗೆ ಡಬಲ್ ಬೋನಸ್..!  23.29% ವೇತನ ಹೆಚ್ಚಳ, ನಿವೃತ್ತಿ ವಯಸ್ಸು 62 ಕ್ಕೆ ಏರಿಕೆ  title=
ಸರ್ಕಾರಿ ನೌಕರರಿಗೆ ಡಬಲ್ ಖುಷಿ (file photo)

ನವದೆಹಲಿ : ಸರ್ಕಾರಿ ನೌಕರರಿಗೆ ಡಬಲ್ ಖುಷಿಯ ಸುದ್ದಿ . ಸರ್ಕಾರವು ನೌಕರರ ನಿವೃತ್ತಿ ವಯಸ್ಸು ಮತ್ತು ವೇತನ ಎರಡನ್ನೂ ಹೆಚ್ಚಿಸಿದೆ (Salary Hike) . ಸರ್ಕಾರವು ನೌಕರರ ವೇತನವನ್ನು 23.29% ರಷ್ಟು ಹೆಚ್ಚಿಸಿದೆ. ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ವರ್ಷಕ್ಕೆ ಹೆಚ್ಚಿಸಲಾಗಿದೆ. 

ಆಂಧ್ರಪ್ರದೇಶ ಸರ್ಕಾರ (Andrapradesh Government) ತನ್ನ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ ನೀಡಿದೆ.  ರಾಜ್ಯ ಸರ್ಕಾರ ತನ್ನ ನೌಕರರಿಗೆ ಡಬಲ್ ಉಡುಗೊರೆ ನೀಡಿದೆ. ನೌಕರರ ವೇತನದಲ್ಲಿ ಶೇ.23.29ರಷ್ಟು ಹೆಚ್ಚಳವಾಗಿದೆ (Salary Hike). ಇದರೊಂದಿಗೆ ನೌಕರರ ನಿವೃತ್ತಿ ವಯಸ್ಸು ಕೂಡ 60 ವರ್ಷದಿಂದ 62 ವರ್ಷಕ್ಕೆ ಏರಿಕೆಯಾಗಿದೆ. ಹೊಸ ವೇತನವನ್ನು ಜನವರಿ 2022 ರಿಂದ ಪ್ರಾರಂಭಿಸಲಾಗಿದೆ. 

ಇದನ್ನೂ ಓದಿ : ಈ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೆ ಗ್ರಾಹಕರಿಗೆ ಸಿಗಲಿದೆ 8 ಲಕ್ಷ ರೂಪಾಯಿಗಳ ಲಾಭ

ನೌಕರರ ಸಂಘದ ಜೊತೆ ಸಭೆ :
ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ  (Y S Jagan Mohan Reddy) ಅವರು, ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಸಭೆಯಲ್ಲಿ ನೌಕರರ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜೂನ್ 30ರವರೆಗೆ ಕಾಲಾವಕಾಶ ನೀಡಲಾಯಿತು. 

ನೌಕರರಿಗೆ ಹಣ ಯಾವಾಗ ಸಿಗುತ್ತದೆ ? :
ಈ ಬದಲಾವಣೆಯು ಜುಲೈ 1, 2018 ರಿಂದ ಜಾರಿಗೆ ಬರಲಿದ್ದು, ಇದಕ್ಕೆ ಸಂಬಂಧಿಸಿದ ವಿತ್ತೀಯ ಪ್ರಯೋಜನಗಳನ್ನು ಏಪ್ರಿಲ್ 1, 2020 ರಿಂದ ಪಾವತಿಸಲಾಗುವುದು. ಇನ್ನು, ಜನವರಿ 1, 2022 ರಿಂದ ಹೆಚ್ಚಿದ ವೇತನ ಲಭ್ಯವಿರುತ್ತದೆ. ಅಂದರೆ, ಉದ್ಯೋಗಿಗಳ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಲಿದೆ (Salary hike) . ಸರ್ಕಾರದ ಹೇಳಿಕೆ ಪ್ರಕಾರ, ಈ ನಿರ್ಧಾರದಿಂದ ಬೊಕ್ಕಸಕ್ಕೆ ವಾರ್ಷಿಕ 10,247 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.

ಇದನ್ನೂ ಓದಿ : SBI Latest Rule: ಎಟಿಎಂನಿಂದ ಹಣ ವಿತ್ ಡ್ರಾ ನಿಯಮಗಳಲ್ಲಿ ಬದಲಾವಣೆ

ಬಾಕಿ ಇರುವ ಡಿಎ ಕೂಡ ನೀಡಲಾಗುವುದು :
ಈ ಸಭೆಯ ನಂತರ, ಜನವರಿ ವೇತನದ ಜೊತೆಗೆ ಬಾಕಿ ಇರುವ ತುಟ್ಟಿಭತ್ಯೆ (DA) ಕೂಡಾ ನೀಡಲಾಗುವುದು ಎಂದು ಹೇಳಿದ್ದಾರೆ. ಇದರೊಂದಿಗೆ ಭವಿಷ್ಯ ನಿಧಿ, ವಿಮೆ, ರಜೆ ಎನ್‌ಕ್ಯಾಶ್‌ಮೆಂಟ್ ಮತ್ತು ಇತರ ಬಾಕಿ ಪಾವತಿಗೆ ಏಪ್ರಿಲ್ ವೇಳೆಗೆ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News