7th Pay Commission: ಸರ್ಕಾರಿ ನೌಕರರಿಗೆ ಡಬಲ್ ಬೋನಸ್, ವೇತನ ಹೆಚ್ಚಳದ ಜೊತೆ ಸಿಗಲಿದೆ ಈ ಪ್ರಯೋಜನ

7th Pay Commission: ಹೋಳಿಗೂ  ಮುನ್ನ ಕೇಂದ್ರ ನೌಕರರಿಗೆ ಮತ್ತೊಮ್ಮೆ ಸಿಹಿ ಸುದ್ದಿ ಸಿಗಲಿದೆ.  ಮೋದಿ ಸರ್ಕಾರ ತನ್ನ ಉದ್ಯೋಗಿಗಳಿಗೆ ಉಡುಗೊರೆ ನೀಡಲು ಸಿದ್ಧತೆ ನಡೆಸಿದೆ.

Written by - Ranjitha R K | Last Updated : Feb 7, 2022, 10:22 AM IST
  • ಕೇಂದ್ರ ನೌಕರರಿಗೆ ಸಿಗಲಿದೆ ಗಿಫ್ಟ್
  • ಹೆಚ್ ಆರ್ ಎ ಹೆಚ್ಚಿಸಲು ಸರ್ಕಾರ ಚಿಂತನೆ
  • ಈ ತಿಂಗಳು ಘೋಷಣೆ ಸಾಧ್ಯತೆ
7th Pay Commission: ಸರ್ಕಾರಿ ನೌಕರರಿಗೆ ಡಬಲ್ ಬೋನಸ್, ವೇತನ  ಹೆಚ್ಚಳದ ಜೊತೆ ಸಿಗಲಿದೆ ಈ ಪ್ರಯೋಜನ  title=
ಕೇಂದ್ರ ನೌಕರರಿಗೆ ಸಿಗಲಿದೆ ಗಿಫ್ಟ್ (file photo)

ನವದೆಹಲಿ : 7th Pay Commission: ಹೋಳಿಗೂ  ಮುನ್ನ ಕೇಂದ್ರ ನೌಕರರಿಗೆ ಮತ್ತೊಮ್ಮೆ ಸಿಹಿ ಸುದ್ದಿ ಸಿಗಲಿದೆ.  ಮೋದಿ ಸರ್ಕಾರ ತನ್ನ ಉದ್ಯೋಗಿಗಳಿಗೆ ಉಡುಗೊರೆ ನೀಡಲು ಸಿದ್ಧತೆ ನಡೆಸಿದೆ. ಮಾಹಿತಿ ಪ್ರಕಾರ, ಹೋಳಿಗೂ ಮುನ್ನ ಡಿಎ ಹೆಚ್ಚಳದ ಜೊತೆಗೆ HRA ಹೆಚ್ಚಳದ ಘೋಷಣೆಯೂ ಆಗಬಹುದು. ದೀಪಾವಳಿಯಂದು ಮೋದಿ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು (DA) 3 ಪ್ರತಿಶತದಷ್ಟು ಹೆಚ್ಚಿಸಿತ್ತು. ಇದೀಗ  ಡಿಎ ಜೊತೆಗೆ ಮನೆ ಬಾಡಿಗೆ ಭತ್ಯೆ  (HRA) ಹೆಚ್ಚಿಸುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ. 

34% ಡಿಎ ಹೆಚ್ಚಳ ನಿಗದಿ :
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸುದೀರ್ಘ ನಿರೀಕ್ಷೆಯ ನಂತರ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳ ಮಾಡಲಾಗಿದೆ. ಅಂದರೆ, ನೌಕರರು ಮತ್ತು ಪಿಂಚಣಿದಾರರಿಗೆ ಈಗ  34% ದರದಲ್ಲಿ ತುಟ್ಟಿ ಭತ್ಯೆ (DA Hike) ಸಿಗಲಿದೆ.  AICPI ಡಿಸೆಂಬರ್ ಸೂಚ್ಯಂಕದಲ್ಲಿ ಒಂದು ಅಂಶದ ಇಳಿಕೆ ಕಂಡುಬಂದಿದೆ. ತುಟ್ಟಿ  ಭತ್ಯೆಗಾಗಿ ಸರಾಸರಿ 12 ತಿಂಗಳ ಸೂಚ್ಯಂಕವು 351.33 ಆಗಿದ್ದು, ಸರಾಸರಿ 34.04% (Dearness allowance) ಆಗಿರಲಿದೆ. ಆದರೆ, ತುಟ್ಟಿಭತ್ಯೆಯನ್ನು ಯಾವಾಗಲೂ ಪೂರ್ಣ ಸಂಖ್ಯೆಯಲ್ಲಿ ನೀಡಲಾಗುತ್ತದೆ. ಹಾಗಾಗಿ  ಜನವರಿ 2022 ರಿಂದ, ಒಟ್ಟು ತುಟ್ಟಿ ಭತ್ಯೆಯನ್ನು 34% ಎಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ : 07-02-2022 Today Gold Price: ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

ಪ್ರಸ್ತಾವನೆ ಸಲ್ಲಿಕೆ :
11.56 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ (HRA) ಜಾರಿಗೆ ತರಲು ಹಣಕಾಸು ಸಚಿವಾಲಯ ಚಿಂತನೆ ನಡೆಸುತ್ತಿದೆ. ಈ ಪ್ರಸ್ತಾವನೆ ಅನುಮೋದನೆಗಾಗಿ ರೈಲ್ವೆ ಮಂಡಳಿಗೆ ಪ್ರಸ್ತಾವನೆಯನ್ನೂ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ಉದ್ಯೋಗಿಗಳಿಗೆ ಎಚ್‌ಆರ್‌ಎ ಸಿಗಲಿದೆ. ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ ಮತ್ತು ರಾಷ್ಟ್ರೀಯ ರೈಲ್ವೇಮೆನ್ ಫೆಡರೇಶನ್ ಜನವರಿ 1, 2021 ರಿಂದ HRA ಅನ್ನು ಜಾರಿಗೆ ತರಲು ಒತ್ತಾಯಿಸುತ್ತಿವೆ. ಬೇಡಿಕೆಯಂತೆ  ಮನೆ ಬಾಡಿಗೆ ಭತ್ಯೆ ಹೆಚ್ಚಿಸಿದರೆ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ.

'ಮನೆ ಬಾಡಿಗೆ ಭತ್ಯೆ' ಎಷ್ಟಿರುತ್ತದೆ ?  
50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು 'X' ವರ್ಗದ ಅಡಿಯಲ್ಲಿ ಬರುತ್ತವೆ.  5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ, 'ವೈ' ವರ್ಗದಲ್ಲಿ ಬರುತ್ತದೆ. ಮತ್ತು 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು 'Z' ವರ್ಗದ ಅಡಿಯಲ್ಲಿ ಬರುತ್ತವೆ. ಎಲ್ಲಾ ಮೂರು ವರ್ಗಗಳಿಗೆ ಕನಿಷ್ಠ HRA 5400, 3600 ಮತ್ತು 1800 ರೂ ಆಗಿರುತ್ತದೆ. ಡಿಪಾರ್ಟ್ ಮೆಂಟ್ ಆಫ್ ಎಕ್ಸ್ ಪೆನ್ದೀಚರ್ ಪ್ರಕಾರ, ತುಟ್ಟಿಭತ್ಯೆ (DA) ಶೇಕಡಾ 50 ತಲುಪಿದಾಗ, ಗರಿಷ್ಠ ಮನೆ ಬಾಡಿಗೆ ಭತ್ಯೆಯು ಶೇಕಡಾ 30ರಷ್ಟು ಹೆಚ್ಚಾಗುತ್ತದೆ. 

ಇದನ್ನೂ ಓದಿ : ವೇತನಕ್ಕಾಗಿ ತಿಂಗಳ ಅಂತ್ಯದವರೆಗೆ ಕಾಯಬೇಕಿಲ್ಲ, ಪ್ರತೀ ವಾರ ಕೈ ಸೇರಲಿದೆ ಸಂಬಳ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News