Diwali 2020: ಭಾರತದ ಹೊಡೆತಕ್ಕೆ ಸಾವಿರಾರು ಕೋಟಿ ನಷ್ಟ ಅನುಭವಿಸಿದ ಚೀನಾ

ಕಳೆದ 8 ತಿಂಗಳುಗಳಿಂದ ಅಂದರೆ ಮಾರ್ಚ್‌ನಲ್ಲಿ ಲಾಕ್‌ಡೌನ್ ಜಾರಿಗೆ ಬಂದಾಗಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ನಿಧಾನವಾಗಿ ಟ್ರ್ಯಾಕ್‌ಗೆ ಮರಳಲು ಪ್ರಾರಂಭಿಸಿದೆ ಎಂದು ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.  

Last Updated : Nov 13, 2020, 10:40 AM IST
  • ಕರೋನಾವೈರಸ್ ಭೀತಿ ನಡುವೆಯೂ ದೇಶದ ಜನರಲ್ಲಿ ದೀಪಾವಳಿ ಹಬ್ಬದ ಉತ್ಸಾಹ
  • ಕಳೆದ 4 ದಿನಗಳಿಂದ ಶಾಪಿಂಗ್‌ನಲ್ಲಿ ಭಾರಿ ಪ್ರಗತಿ
  • ನಿಧಾನವಾಗಿ ಟ್ರ್ಯಾಕ್‌ಗೆ ಮರಳಲು ಪ್ರಾರಂಭಿಸಿರುವ ವ್ಯಾಪಾರ ವ್ಯವಹಾರ
Diwali 2020: ಭಾರತದ ಹೊಡೆತಕ್ಕೆ ಸಾವಿರಾರು ಕೋಟಿ ನಷ್ಟ ಅನುಭವಿಸಿದ ಚೀನಾ title=

ನವದೆಹಲಿ: ಈ ವರ್ಷ ಕರೋನಾವೈರಸ್ ಭೀತಿ ನಡುವೆಯೂ ದೇಶದ ಜನರಲ್ಲಿ ದೀಪಾವಳಿ ಹಬ್ಬದ ಉತ್ಸಾಹ ಕಡಿಮೆಯಾಗಿಲ್ಲ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಮಾರುಕಟ್ಟೆಗಳು, ಶಾಪಿಂಗ್ ಮಾಲ್ ಗಳಲ್ಲಿ ಜನಜಂಗುಳಿ ಹೆಚ್ಚಾಗಿದೆ. ಕಳೆದ 4 ದಿನಗಳಿಂದ ಶಾಪಿಂಗ್‌ನಲ್ಲಿ ಭಾರಿ ಪ್ರಗತಿಯಾಗಿದೆ. ಈ ಕಾರಣದಿಂದಾಗಿ ವ್ಯಾಪಾರಿಗಳಲ್ಲೂ ಮಂದಹಾಸ ಮೂಡಿದೆ. ಕಳೆದ 8 ತಿಂಗಳುಗಳಿಂದ ಅಂದರೆ ಮಾರ್ಚ್‌ನಲ್ಲಿ ಲಾಕ್‌ಡೌನ್ ಜಾರಿಗೆ ಬಂದಾಗಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ನಿಧಾನವಾಗಿ ಟ್ರ್ಯಾಕ್‌ಗೆ ಮರಳಲು ಪ್ರಾರಂಭಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯಿಂದ ಕಣ್ಮರೆಯಾದ ಚೀನಾ ಸರಕುಗಳು:
ಈ ಎಲ್ಲದರ ನಡುವೆ ಕುತೂಹಲದ ಸಂಗತಿ ಎಂದರೆ ಚೀನಾದ ಸರಕುಗಳು ಮಾರುಕಟ್ಟೆಯಿಂದ ಕಣ್ಮರೆಯಾಗಿರುವುದು. ಭಾರತ-ಚೀನಾ (India-China) ನಡುವೆ ನಡೆಯುತ್ತಿರುವ ಉದ್ವಿಗ್ನತೆ ಮತ್ತು ವ್ಯಾಪಾರಿಗಳ ಸಂಘಟನೆಗಳ ಚೀನಾದ ಸರಕುಗಳನ್ನು (China Products) ಬಹಿಷ್ಕರಿಸುವ ಕರೆಗಳಿಂದಾಗಿ ಭಾರತೀಯ ಸರಕುಗಳು ಮಾರುಕಟ್ಟೆಯಲ್ಲಿ ಬೆಳಕಿಗೆ ಬಂದಿವೆ.

 40 ಸಾವಿರ ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ ಚೀನಾ:
ಪ್ರತಿ ವರ್ಷ ದೀಪಾವಳಿಯಲ್ಲಿ (Diwali) ಭಾರೀ ಪ್ರಮಾಣದಲ್ಲಿ ವ್ಯಾಪಾರವಾಗುತ್ತಿದ್ದ ಚೀನಾದ ಸರಕುಗಳನ್ನು ಈ ಬಾರಿ ವ್ಯಾಪಾರಿಗಳು ಮತ್ತು ಗ್ರಾಹಕರು ಸಂಪೂರ್ಣವಾಗಿ ಬಹಿಷ್ಕರಿಸುತ್ತಿದ್ದಾರೆ ಎಂದು ದೇಶದ ವ್ಯಾಪಾರಿಗಳ ಉನ್ನತ ಸಂಸ್ಥೆಯಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಟಿ) ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ತಿಯಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಇದರಿಂದಾಗಿ ಭಾರತದಲ್ಲಿ ತಯಾರಿಸಿದ ಸರಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಸಿಎಟಿ ಕರೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಸ್ಥಳೀಯ ಮತ್ತು ಸ್ವಾವಲಂಬಿ ಭಾರತ ಅಭಿಯಾನವು ಜನರ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದಾಗಿ ಚೀನಾ ಸುಮಾರು 40 ಸಾವಿರ ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ.

ಚೀನಾ ರಾಖಿಗೆ ಬೈ ಎಂದ ಭಾರತೀಯರು, ಡ್ರ್ಯಾಗನ್ ದೇಶಕ್ಕೆ 4,000 ಕೋಟಿ ರೂ. ನಷ್ಟ...!

60 ಸಾವಿರ ಕೋಟಿ ವ್ಯವಹಾರದ ನಿರೀಕ್ಷೆ:
ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಟಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್  ಖಂಡೇಲ್ವಾಲ್ ಅವರ ಪ್ರಕಾರ, ಧಂತೇರಸ್, ದೀಪಾವಳಿ, ಗೋವರ್ಧನ್ ಪೂಜನ್, ಭಾಯ್ ದೂಜ್, ಛತ್ ಪೂಜಾ ಮತ್ತು ತುಳಸಿ ಹಬ್ಬದ ಋತುವಿನಲ್ಲಿ ದೇಶದಾದ್ಯಂತ ಮಾರುಕಟ್ಟೆಗಳಲ್ಲಿ ಸುಮಾರು 60,000 ಕೋಟಿ ರೂ. ವ್ಯವಹಾರವನ್ನು ನಿರೀಕ್ಷಿಸಲಾಗಿದೆ. ಈ ಒಟ್ಟು ವ್ಯಾಪಾರದಲ್ಲಿ ಪ್ರತಿವರ್ಷ ಚೀನಾದ ವ್ಯಾಪಾರವು  ಸುಮಾರು 40 ಸಾವಿರ ಕೋಟಿಗಳಷ್ಟಿತ್ತು. ಆದರೆ ಈ ಸಮಯದಲ್ಲಿ ಯಾವುದೇ ಚೀನೀ ಮಾರುಕಟ್ಟೆ ಇಲ್ಲದಿರುವುದರಿಂದ ಭಾರತದಲ್ಲಿ ತಯಾರಿಸಲಾದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸ್ಥಳೀಯರ ವ್ಯವಹಾರವೂ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಟ್ರೇಡ್ ವಾರ್: ಚೀನಾದಿಂದ ಹೊರಬರಲು ಅನೇಕ ವಿದೇಶಿ ಕಂಪನಿಗಳ ಸಿದ್ಧತೆ

Trending News