Dish TV: ಯೆಸ್ ಬ್ಯಾಂಕ್ ವಿರುದ್ಧ ಡಿಶ್ ಟಿವಿಯ ಹೊಸ ಆರೋಪ, ಬಿಡ್‌ ಉಲ್ಲಂಘನೆ ಕುರಿತಂತೆ SEBIಗೆ ಪತ್ರ

Dish TV: ಅಸ್ತಿತ್ವದಲ್ಲಿರುವ ಬೋರ್ಡ್ ಆಫ್ ಡೈರೆಕ್ಟರ್‌ಗಳನ್ನು ತೆಗೆದುಹಾಕಲು ಪ್ರಸ್ತಾಪಿಸುವ ಮೂಲಕ ಯೆಸ್ ಬ್ಯಾಂಕ್ ಓಪನ್ ಆಫರ್ ಅನ್ನು ಪ್ರಚೋದಿಸುತ್ತದೆ. ಇದು ಕಂಪನಿಯ ಮೇಲೆ ಯೆಸ್ ಬ್ಯಾಂಕ್ ನಿಯಂತ್ರಣವನ್ನು ಪಡೆದುಕೊಳ್ಳಲು ಕಾರಣವಾಗಬಹುದು ಎಂದು  ಡಿಶ್ ಟಿವಿ ಆರೋಪಿಸಿದೆ.  

Written by - Zee Kannada News Desk | Last Updated : Dec 13, 2021, 01:21 PM IST
Dish TV: ಯೆಸ್ ಬ್ಯಾಂಕ್ ವಿರುದ್ಧ ಡಿಶ್ ಟಿವಿಯ ಹೊಸ ಆರೋಪ, ಬಿಡ್‌ ಉಲ್ಲಂಘನೆ ಕುರಿತಂತೆ SEBIಗೆ ಪತ್ರ title=
Dish TV levels fresh allegations against YES Bank

Dish TV: ಡೈರೆಕ್ಟ್-ಟು-ಹೋಮ್ ಸೇವೆ ಒದಗಿಸುವ ಡಿಶ್ ಟಿವಿ (Dish TV) ಯೆಸ್ ಬ್ಯಾಂಕ್ ವಿರುದ್ಧ ಹೊಸ ಆರೋಪಗಳನ್ನು ಮಾಡಿದೆ.  ಯೆಸ್ ಬ್ಯಾಂಕ್ ಡಿಶ್ ಟಿವಿಯ ನಿರ್ದೇಶಕರ ಮಂಡಳಿಯನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ. ಇದು ಸ್ವಾಧೀನಪಡಿಸಿಕೊಳ್ಳುವ ನಿಯಮಗಳನ್ನು ಉಲ್ಲಂಘಿಸುವ ಸ್ಪಷ್ಟ ಪ್ರಯತ್ನವಾಗಿದೆ ಎಂದು ಡಿಶ್ ಟಿವಿ ಸೆಬಿಗೆ (SEBI) ಪತ್ರ ಬರೆದಿದೆ.

ಅಸ್ತಿತ್ವದಲ್ಲಿರುವ ಬೋರ್ಡ್ ಆಫ್ ಡೈರೆಕ್ಟರ್‌ಗಳನ್ನು ತೆಗೆದುಹಾಕಲು ಪ್ರಸ್ತಾಪಿಸುವ ಮೂಲಕ ಯೆಸ್ ಬ್ಯಾಂಕ್ (YES Bank) ಓಪನ್ ಆಫರ್ ಅನ್ನು ಪ್ರಚೋದಿಸುತ್ತದೆ. ಇದು ಕಂಪನಿಯ ಮೇಲೆ ಯೆಸ್ ಬ್ಯಾಂಕ್ ನಿಯಂತ್ರಣವನ್ನು ಪಡೆದುಕೊಳ್ಳಲು ಕಾರಣವಾಗಬಹುದು ಎಂದು  ಡಿಶ್ ಟಿವಿ ಆರೋಪಿಸಿದೆ. 

ಸೆಪ್ಟೆಂಬರ್ 3 ರ ನೋಟೀಸ್, ಸೆಪ್ಟೆಂಬರ್ 9 ರ ನೋಟೀಸ್ ಮತ್ತು EGM ಸೂಚನೆಗಳನ್ನು ಕಳುಹಿಸುವಲ್ಲಿ YES ಬ್ಯಾಂಕ್ ನ ಕ್ರಮಗಳು ಸ್ವಾಧೀನಪಡಿಸಿಕೊಳ್ಳುವ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಡಿಶ್ ಟಿವಿ ತಿಳಿಸಿದೆ. ಅಸ್ತಿತ್ವದಲ್ಲಿರುವ ನಿರ್ದೇಶಕರನ್ನು (ಅನಿಲ್ ಕುಮಾರ್ ದುವಾ ಹೊರತುಪಡಿಸಿ) ತೆಗೆದುಹಾಕಲು ಪ್ರಸ್ತಾಪಿಸಲಾದ ನಿರ್ಣಯ(ಗಳ) ಜೊತೆಗೆ ಕಂಪನಿಯ ಮಂಡಳಿಗೆ ಕೆಲವು ವ್ಯಕ್ತಿಗಳನ್ನು ನೇಮಿಸುವ YES ಬ್ಯಾಂಕ್‌ನ ಪ್ರಸ್ತಾವನೆಯನ್ನು ಜಾರಿಗೆ ತಂದರೆ, ಅದು YES ಬ್ಯಾಂಕ್ ನಿಯಂತ್ರಣವನ್ನು ಪಡೆದುಕೊಳ್ಳಲು ಕಾರಣವಾಗುತ್ತದೆ” ಎಂದು ಡಿಶ್ ಟಿವಿ ಸೆಬಿಗೆ (SEBI) ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ- Renault Offers: ಈ ಕಂಪನಿಯ ಕಾರುಗಳ ಮೇಲೆ 1.30 ಲಕ್ಷ ರೂ.ವರೆಗಿನ ಭರ್ಜರಿ ಆಫರ್‌

ಯೆಸ್ ಬ್ಯಾಂಕ್ ಲಿಮಿಟೆಡ್ ಡಿಶ್ ಟಿವಿಯ 25.63 ಪ್ರತಿಶತ ಈಕ್ವಿಟಿಯನ್ನು ಹೊಂದಿದೆ ಮತ್ತು ಕಂಪನಿಯ ಏಕೈಕ ಅತಿದೊಡ್ಡ ಷೇರುದಾರರಾಗಿದ್ದಾರೆ. 

ಡಿಶ್ ಟಿವಿ (Dish TV) ಕಂಪನಿಯ ಮಂಡಳಿಯನ್ನು ಪುನರ್ರಚಿಸುವ ಮತ್ತು ವಿಶೇಷ ಸಾಮಾನ್ಯ ಸಭೆಯನ್ನು (ಇಜಿಎಂ) ಹಿಂತೆಗೆದುಕೊಳ್ಳುವ ಪ್ರಯತ್ನದಿಂದ ಯೆಸ್ ಬ್ಯಾಂಕ್ ಅನ್ನು ತಡೆಯಲು ಮಧ್ಯಸ್ಥಿಕೆಯನ್ನು ವಹಿಸುವಂತೆ ಡಿಶ್ ಟಿವಿ ಸೆಬಿಯನ್ನು ಕೋರಿದೆ. 

ಕಂಪನಿಗೆ ಕಳುಹಿಸಿದ EGM ಸೂಚನೆಯನ್ನು ತಕ್ಷಣವೇ ಹಿಂಪಡೆಯಲು ಮತ್ತು EGM ಸೂಚನೆಗೆ ಸಂಬಂಧಿಸಿದಂತೆ ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಮತ್ತು ಉಲ್ಲಂಘನೆಗಳನ್ನು ಮುಂದುವರಿಸದಂತೆ ಯೆಸ್ ಬ್ಯಾಂಕ್‌ಗೆ ಈ ವಿಷಯದಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡಲು ಕಂಪನಿಯು ನಿಮ್ಮನ್ನು ವಿನಂತಿಸುತ್ತದೆ ಎಂದು ಡಿಶ್ ಟಿವಿ ಕೋರಿದೆ.

ಸೆಪ್ಟೆಂಬರ್ 27, 2021 ರಂದು ನಡೆಯಲಿರುವ ಕಂಪನಿಯ AGM ನಲ್ಲಿ ಮಂಡಳಿಯ ಪುನರ್ರಚನೆಗಾಗಿ ಈ ಹಿಂದೆ ಯೆಸ್ ಬ್ಯಾಂಕ್ ಡಿಶ್ ಟಿವಿಗೆ ನೋಟಿಸ್ ಕಳುಹಿಸಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

ಇದನ್ನೂ ಓದಿ- SBI Special Current Account ವಹಿವಾಟು ಸೇರಿದಂತೆ ಸಿಗಲಿದೆ ಅನೇಕ ಪ್ರಯೋಜನ

ಇಜಿಎಂ ನೋಟಿಸ್‌ನಲ್ಲಿ, ಯೆಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜವಾಹರ್ ಗೋಯೆಲ್ ಅವರಲ್ಲದೆ ಡಿಶ್ ಟಿವಿ ಮಂಡಳಿಯಿಂದ ರಾಸ್ಲ್ಮಿ ಅಗರ್ವಾಲ್, ಭಗವಾನ್ ದಾಸ್ ನಾರಂಗ್, ಶಂಕರ್ ಅಗ್ಗನ್ವಾಲ್ ಮತ್ತು ಅಶೋಕ್ ಮಥಾಯ್ ಕುರಿಯನ್ ಅವರನ್ನು ತೆಗೆದುಹಾಕಲು ಪ್ರಯತ್ನಿಸಿದ್ದಾರೆ.

ಸುಭಾಷ್ ಚಂದ್ರ ನೇತೃತ್ವದ ಎಸ್ಸೆಲ್ ಗ್ರೂಪ್ ಸಂಸ್ಥೆಯ 1,000 ಕೋಟಿ ರೂ.ಗಳ ಹಕ್ಕು ವಿತರಣೆಯನ್ನು ವಿರೋಧಿಸುತ್ತಿರುವ ಯೆಸ್ ಬ್ಯಾಂಕ್, ಕಂಪನಿಯ ಮಂಡಳಿಯಲ್ಲಿ ನಾಮನಿರ್ದೇಶನ ಮಾಡಲು  ಇಬ್ಬರು ಕಾರ್ಯನಿರ್ವಾಹಕೇತರ ನಿರ್ದೇಶಕರು ಮತ್ತು ಐದು ಸ್ವತಂತ್ರ ನಿರ್ದೇಶಕರು ಸೇರಿದಂತೆ ಏಳು ಜನರ ಹೆಸರನ್ನು ಕಳುಹಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News