Reserve Bank of India Digital Rupee : ಅಂಗಡಿಯವರಿಂದ ಸರಕುಗಳನ್ನು ತೆಗೆದುಕೊಂಡಾಗ ಡಿಜಿಟಲ್ ಕರೆನ್ಸಿಯೊಂದಿಗೆ ಪಾವತಿಸುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ವೇಗವಾಗಿ ಕೆಲಸ ಮಾಡುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ರೂಪಾಯಿಯ ರಿಟೇಲ್ ಬಳಕೆಗೆ ಸಂಬಂಧಿಸಿದ ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಡಿಸೆಂಬರ್ 1 ರಂದು ನಡೆಸಲಿದೆ. ಇದು ನಾಲ್ಕು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳನ್ನು ಒಳಗೊಂಡಿರುತ್ತದೆ. ಡಿಜಿಟಲ್ ಕರೆನ್ಸಿಯ ರಿಟೇಲ್ ಬಳಕೆಗಾಗಿ ಆರ್‌ಬಿಐ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಿದೆ. ರಿಟೆಲ್ ಡಿಜಿಟಲ್ ರೂಪಾಯಿ ಡಿಜಿಟಲ್ ಟೋಕನ್ ರೂಪದಲ್ಲಿರುತ್ತದೆ.
ಡಿಸೆಂಬರ್ 1 ರಂದು ಕ್ಲೋಸ್ಡ್ ಯುಸರ್ ಗ್ರೂಪ್ ಗಳಲ್ಲಿ ಆಯ್ದ ಸ್ಥಳಗಳಲ್ಲಿ ಈ ಪ್ರಯೋಗವನ್ನು ನಡೆಸಲಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಇದು ಗ್ರಾಹಕ ಮತ್ತು ಬ್ಯಾಂಕ್ ವ್ಯಾಪಾರಿ ಇಬ್ಬರನ್ನೂ ಒಳಗೊಂಡಿರುತ್ತದೆ. ಇದಕ್ಕೂ ಮುನ್ನ ನವೆಂಬರ್ 1 ರಂದು, ಡಿಜಿಟಲ್ ರೂಪಾಯಿಯ ಸಗಟು ವಿಭಾಗದ ಪ್ರಾಯೋಗಿಕ ಪರೀಕ್ಷೆಯನ್ನು RBI ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ICICI ಬ್ಯಾಂಕ್ ಸೇರಿದಂತೆ ನಾಲ್ಕು ಬ್ಯಾಂಕ್‌ಗಳು ಡಿಜಿಟಲ್ ರೂಪಾಯಿಯ ರಿಟೇಲ್ ಬಳಕೆಯ ಪರೀಕ್ಷೆಯಲ್ಲಿ ತೊಡಗಿಕೊಂಡಿವೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಭುವನೇಶ್ವರದಲ್ಲಿ ಈ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ : Vegetable Price Today: ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ
P2P ಮತ್ತು P2M ಎರಡರಲ್ಲೂ ನಡೆಸಬಹುದು ವಹಿವಾಟು :
ಎಲೆಕ್ಟ್ರಾನಿಕ್ ರೂಪಾಯಿ ಡಿಜಿಟಲ್ ಟೋಕನ್ ರೂಪದಲ್ಲಿರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಇದು ಮಾನ್ಯ ಕರೆನ್ಸಿಯನ್ನು ಪ್ರತಿನಿಧಿಸುತ್ತದೆ. ಇದನ್ನು ಅಸ್ತಿತ್ವದಲ್ಲಿರುವ ಕಾಗದದ ಕರೆನ್ಸಿ ಮತ್ತು ನಾಣ್ಯಗಳ ಗಾತ್ರದಲ್ಲಿ ಮಾತ್ರ ನೀಡಲಾಗುತ್ತದೆ. ಡಿಜಿಟಲ್ ರೂಪಾಯಿಯನ್ನು ಬ್ಯಾಂಕ್‌ಗಳ ಮೂಲಕ ವಿತರಿಸಲಾಗುವುದು. ಪೈಲಟ್ ಪರೀಕ್ಷೆಯಲ್ಲಿ ಭಾಗವಹಿಸುವ ಬ್ಯಾಂಕ್‌ಗಳ ಡಿಜಿಟಲ್ ವ್ಯಾಲೆಟ್ ಮೂಲಕ ಇ-ರೂಪಾಯಿಯ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.
ಯಾವುದೇ ರೀತಿಯ ಬಡ್ಡಿ ನೀಡಲಾಗುವುದಿಲ್ಲ :
ಡಿಜಿಟಲ್ ರೂಪಾಯಿ ಹೊಂದಿರುವವರು ಯಾವುದೇ ರೀತಿಯ ಬಡ್ಡಿಯನ್ನು ಪಡೆಯುವುಡು ಸಾಧ್ಯವಾಗುವುದಿಲ್ಲ. ಆದರೆ ಅದನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಬಳಸಬಹುದು ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ : ಈ ಅಪ್ಲಿಕೇಶನ್‌ನಲ್ಲಿ LPG ಸಿಲಿಂಡರ್ ಬುಕ್ ಮಾಡಿ, ಬಂಪರ್ ಕ್ಯಾಶ್‌ಬ್ಯಾಕ್ ಪಡೆಯಿರಿ
ಇದರ ಬಳಕೆ ಹೇಗೆ ?
ಮೊಬೈಲ್ ಮತ್ತು ಇತರ ಗ್ಯಾಜೆಟ್‌ಗಳಲ್ಲಿ ಡಿಜಿಟಲ್ ವ್ಯಾಲೆಟ್ ಮೂಲಕ ವಹಿವಾಟು ನಡೆಸುವುದು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ (P2P) ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ (P2M) ಡಿಜಿಟಲ್ ಕರೆನ್ಸಿಯನ್ನು ಮಾಡಬಹುದು. ಚಿಲ್ಲರೆ ಡಿಜಿಟಲ್ ಕರೆನ್ಸಿಯನ್ನು ಆರಂಭದಲ್ಲಿ ಬ್ಯಾಂಕುಗಳು ವಿತರಿಸುತ್ತವೆ. ಇದು ನಿಮ್ಮ ಖಾತೆಯಲ್ಲಿ ವಿದ್ಯುನ್ಮಾನವಾಗಿ ಪ್ರತಿಫಲಿಸುತ್ತದೆ. ಕರೆನ್ಸಿ ನೋಟುಗಳ ಮೂಲಕವೂ ವಿನಿಮಯ ಮಾಡಿಕೊಳ್ಳಬಹುದು. ಮುಂಬರುವ ಸಮಯದಲ್ಲಿ UPIಯೊಂದಿಗೆ ಡಿಜಿಟಲ್ ರೂಪಾಯಿಯನ್ನು ಲಿಂಕ್ ಮಾಡಲು ತಯಾರಿ ನಡೆಸಲಾಗುತ್ತಿದೆ. ಆರ್‌ಬಿಐನ ಡಿಜಿಟಲ್ ರೂಪಾಯಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್‌ಗಳು ಡಿಜಿಟಲ್ ಕರೆನ್ಸಿಯಲ್ಲಿ ಮಾತ್ರ ವಹಿವಾಟು ನಡೆಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.