7% ಕ್ಕಿಂತ ಕಡಿಮೆಯಾಯಿತು ಹಣದುಬ್ಬರ ! ಎಷ್ಟು ಹೆಚ್ಚಾಗಲಿದೆ ಸರ್ಕಾರಿ ನೌಕರರ ಡಿಎ ? ಇಲ್ಲಿದೆ ಹೊಸ ಅಪ್ಡೇಟ್

7th Pay Commission: ಜನವರಿಯಲ್ಲಿ ಕೊನೆಯ ಬಾರಿಗೆ ಡಿಎ ಹೆಚ್ಚಳ ಮಾಡಿ ಸರ್ಕಾರವು ನಿರ್ಧಾರ ಪ್ರಕಟಿಸಿತ್ತು.  ನಂತರ ಇಲ್ಲಿಯವರೆಗೆ ಯಾವುದೇ ರೀತಿಯ ಅಪ್ಡೇಟ್ ಮಾಡಿಲ್ಲ. ಡಿಎ ಸರ್ಕಾರಿ ನೌಕರರ ಸಂಬಳದ ಒಂದು ಭಾಗವಾಗಿದೆ. 

Written by - Ranjitha R K | Last Updated : Aug 16, 2022, 09:29 AM IST
  • ಕೇಂದ್ರ ನೌಕರರಿಗೆ ಅತೀ ಶೀಘ್ರದಲ್ಲಿ ಭರ್ಜರಿ ಗಿಫ್ಟ್ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ
  • ಸರ್ಕಾರವು ಶೀಘ್ರದಲ್ಲೇ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಲಿದೆ.
  • ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಬದಲಾವಣೆ
 7% ಕ್ಕಿಂತ ಕಡಿಮೆಯಾಯಿತು ಹಣದುಬ್ಬರ !  ಎಷ್ಟು ಹೆಚ್ಚಾಗಲಿದೆ  ಸರ್ಕಾರಿ ನೌಕರರ ಡಿಎ ? ಇಲ್ಲಿದೆ ಹೊಸ ಅಪ್ಡೇಟ್   title=
7th pay commission (file photo)

7th Pay Commission: ಕೇಂದ್ರ ನೌಕರರಿಗೆ ಅತೀ ಶೀಘ್ರದಲ್ಲಿ ಭರ್ಜರಿ ಗಿಫ್ಟ್ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ, ಸರ್ಕಾರವು ಶೀಘ್ರದಲ್ಲೇ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಲಿದೆ. ಜುಲೈನಲ್ಲಿ ದೇಶದ ಹಣದುಬ್ಬರ ದರವು ಶೇಕಡಾ 7 ಕ್ಕಿಂತ ಕಡಿಮೆಯಾಗಿದೆ. ಆದರೂ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಗುರಿಯನ್ನು ತಲುಪಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶೀಘ್ರವೇ ಡಿಎ ಹೆಚ್ಚಳ ಕುರಿತು ಸರಕಾರದಿಂದ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.

 ಪ್ರತಿ ಆರು ತಿಂಗಳಿಗೊಮ್ಮೆ  ತುಟ್ಟಿಭತ್ಯೆ ಬದಲಾವಣೆ : 
 ಜನವರಿಯಲ್ಲಿ ಕೊನೆಯ ಬಾರಿಗೆ ಡಿಎ ಹೆಚ್ಚಳ ಮಾಡಿ ಸರ್ಕಾರವು ನಿರ್ಧಾರ ಪ್ರಕಟಿಸಿತ್ತು.  ನಂತರ ಇಲ್ಲಿಯವರೆಗೆ ಯಾವುದೇ ರೀತಿಯ ಅಪ್ಡೇಟ್ ಮಾಡಿಲ್ಲ. ಡಿಎ ಸರ್ಕಾರಿ ನೌಕರರ ಸಂಬಳದ ಒಂದು ಭಾಗವಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಇದನ್ನು  ಬದಲಾಯಿಸಲಾಗುತ್ತದೆ.  ಜನವರಿ ತಿಂಗಳ ಡಿಎಯನ್ನು ಮಾರ್ಚ್‌ನಲ್ಲಿ ಘೋಷಿಸಲಾಗಿತ್ತು. ಇದಾದ ನಂತರ ಜುಲೈ ತಿಂಗಳ ಡಿಎ ಕುರಿತು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ.
 
 ಇದನ್ನೂ ಓದಿ : Gold Price Today : ಚಿನ್ನ ಖರೀದಿಗೂ ಮುನ್ನ ತಿಳಿಯಿರಿ ಎಷ್ಟಿದೆ ಇಂದಿನ ಬೆಲೆ

ಶೇಕಡಾ 6.71 ಕ್ಕೆ ಇಳಿದ ಹಣದುಬ್ಬರ :
ಮಾರ್ಚ್‌ನಲ್ಲಿ ಸರ್ಕಾರವು ಡಿಎಯನ್ನು ಶೇಕಡಾ 3 ರಿಂದ 34 ರಷ್ಟು ಹೆಚ್ಚಿಸಿತ್ತು. ಇದೀಗ ಮತ್ತೆ ಶೀಘ್ರದಲ್ಲಿಯೇ ತುಟ್ಟಿಭತ್ಯೆ ಹೆಚ್ಚಳ ಘೋಷಣೆಯಾಗಲಿದೆ. ಜುಲೈನಲ್ಲಿ ದೇಶದ ಹಣದುಬ್ಬರ ದರ ಶೇ.6.71ಕ್ಕೆ ಇಳಿದಿದೆ. ಇದರ ಪ್ರಕಾರ ಡಿಎ ಶೇ.4ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಜೂನ್‌ನಲ್ಲಿ, ಹಣದುಬ್ಬರ ದರವು ಶೇಕಡಾ 7.01 ರಷ್ಟಿತ್ತು, ಆ ಸಮಯದಲ್ಲಿ DA 5 ಶೇಕಡಾಕ್ಕೆ ಹೆಚ್ಚಾಗುವ ನಿರೀಕ್ಷೆಯಿತ್ತು. 

ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಡಿಎ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ. ಜೂನ್‌ನಲ್ಲಿ ಎಐಸಿಪಿಐ ಸೂಚ್ಯಂಕ 129.2 ಪಾಯಿಂಟ್‌ಗಳಷ್ಟಿತ್ತು. ಡಿಎಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾದರೆ ಸಂಬಳ ಎಷ್ಟು ಬದಲಾಗುತ್ತದೆ ನೋಡೋಣ. 

 ಇದನ್ನೂ ಓದಿ :Honda Activa ಬೆಲೆಯಲ್ಲಿ ಇಲ್ಲಿ ನೀವು ಕಾರು ಖರೀದಿಸಬಹುದು, ಅಗ್ಗದ ದರದಲ್ಲಿ ನಾಲ್ಕು ಚಕ್ರಗಳ ವಾಹನದ ಮಜಾ ಆನಂದಿಸಿ

ಗರಿಷ್ಠ ಮೂಲ ವೇತನದ ಲೆಕ್ಕಾಚಾರ
1. ನೌಕರನ ಮೂಲ ವೇತನ ರೂ.56,900 
2. ಹೊಸ ತುಟ್ಟಿಭತ್ಯೆ (38%) ರೂ 21,622/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) ರೂ 19,346/ತಿಂಗಳು
4. ತುಟ್ಟಿ ಭತ್ಯೆ ಹೆಚ್ಚಳ  21,622- 19,346 = ರೂ 2260/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 2260 X12 = ರೂ 27,120

ಕನಿಷ್ಠ ಮೂಲ ವೇತನದ ಲೆಕ್ಕಾಚಾರ
1. ನೌಕರನ ಮೂಲ ವೇತನ ರೂ 18,000 
2. ಹೊಸ ತುಟ್ಟಿಭತ್ಯೆ (38%) ರೂ 6840/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) ರೂ 6120/ತಿಂಗಳು
4.  ತುಟ್ಟಿ ಭತ್ಯೆ ಹೆಚ್ಚಳ  6840-6120 = ರೂ.1080/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 720X12= ರೂ.8640

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News