Cryptocurrency: ಕ್ರಿಪ್ಟೋ ಕರೆನ್ಸಿಗೆ ಸಂಬಂಧಿದಂತೆ ಕೇಂದ್ರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್, ನಿಲುವು ಸ್ಪಷ್ಟಪಡಿಸಲು ಸೂಚನೆ

Supreme On Cryptocurrency - ಕ್ರಿಪ್ಟೋ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ.

Written by - Nitin Tabib | Last Updated : Feb 25, 2022, 03:45 PM IST
  • ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ.
  • ಕರೆನ್ಸಿಗೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸಲು ಕೇಂದ್ರಕ್ಕೆ ಸೂಚನೆ.
  • ಕ್ರಿಪ್ಟೋಗೆ ಸಂಬಂಧಿಸದಂತೆ ಕೇಂದ್ರದ ನಿಲುವು ಏನು ತಿಳಿಯಲು ಸುದ್ದಿ ಓದಿ
Cryptocurrency: ಕ್ರಿಪ್ಟೋ ಕರೆನ್ಸಿಗೆ ಸಂಬಂಧಿದಂತೆ ಕೇಂದ್ರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್, ನಿಲುವು ಸ್ಪಷ್ಟಪಡಿಸಲು ಸೂಚನೆ title=
Supreme On Cryptocurrency (File Photo)

Supreme Court On Cryptocurrency: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2022-23 (Union Budget 2022-23) ಅನ್ನು ಮಂಡಿಸಿದ್ದರು. ಈ ಬಜೆಟ್‌ನಲ್ಲಿ ಸೀತಾರಾಮನ್ ಅವರು ಕ್ರಿಪ್ಟೋ ಕರೆನ್ಸಿ (Cryptocurrency) ದೇಶದಲ್ಲಿ ಕಾನೂನು ಬದ್ಧ ಕರೆನ್ಸಿ ಅಲ್ಲ (Crypto Currency Is Illegal Currency) ಎಂದು ಹೇಳಿದ್ದರು, ಆದರೆ, ಯಾರಾದರೂ ಅದರಲ್ಲಿ ಹೂಡಿಕೆ ಮಾಡಿದರೆ, ಅವರು ಸರ್ಕಾರಕ್ಕೆ ಶೇ.30 ರಷ್ಟು ತೆರಿಗೆಯನ್ನು ಕೂಡ ಪಾವತಿಸಬೇಕು ಎಂದೂ ಕೂಡ ಅವರು ಹೇಳಿದ್ದರು. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್ (Supreme Court) ಕ್ರಿಪ್ಟೋ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸೂಚಿಸಿದೆ. ಭಾರತದಲ್ಲಿ ಬಿಟ್‌ಕಾಯಿನ್ (Bit Coin) ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೇಂದ್ರ ಸರ್ಕಾರ (Central Government) ಸ್ಪಷ್ಟಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಸೂಚನೆಯು 2018 ನೇ ವರ್ಷಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂದಿದೆ ಎಂಬುದು ಇಲ್ಲಿ ಗಮನಾರ್ಹ. 2018 ರಲ್ಲಿ ಬೆಳಕಿಗೆ ಬಂದ ಬಿಟ್‌ಕಾಯಿನ್ ವಂಚನೆ ಪ್ರಕರಣದ ಆರೋಪಿಗಳಿಗೆ ತನಿಖೆಗೆ ಸಹಕರಿಸುವಂತೆ ನಿರ್ದೇಶಿಸುವಾಗ, ನ್ಯಾಯಾಲಯವು ಈ ಪ್ರಶ್ನೆಯನ್ನು ಕೇಳಿದೆ ಎಂದು ಎನ್ನಲಾಗಿದೆ. 

ಇದನ್ನೂ ಓದಿ-Cryptocurrency:ಕ್ರಿಪ್ಟೋಕರೆನ್ಸಿ ನಿಷೇಧ ಭಾರತಕ್ಕೆ ಅತ್ಯಂತ ಸೂಕ್ತ ಆಯ್ಕೆ- ಆರ್‌ಬಿಐ ಡೆಪ್ಯುಟಿ ಗವರ್ನರ್

ಕ್ರಿಪ್ಟೋ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿಲುವು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ರಿಪ್ಟೋ ನಿಷೇಧದ ಬಗ್ಗೆ ಸೂಕ್ತ ಸಮಾಲೋಚನೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಸೀತಾರಾಮನ್ ಅವರು ಬಜೆಟ್‌ ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಾ, ಕ್ರಿಪ್ಟೋ ನಿಷೇಧಿಸುವ ಬಗ್ಗೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಕ್ರಿಪ್ಟೋವನ್ನು ಕಾರ್ಯಗತಗೊಳಿಸುವುದು ಅಥವಾ ನಿಷೇಧಿಸುವುದು ಈಗ ವಿಭಿನ್ನ ಪ್ರಶ್ನೆಯಾಗಿದೆ.

ಇದನ್ನೂ ಓದಿ-Blockchain Technologyನಿಂದ ಫೇಕ್ ಬಿಲ್ಲಿಂಗ್ ಹಾಗೂ GST ಕಳ್ಳತನಕ್ಕೆ ಬ್ರೇಕ್

ಕ್ರಿಪ್ಟೋ ಶೇ. 30 ರಷ್ಟು ತೆರಿಗೆ
ಕ್ರಿಪ್ಟೋದಲ್ಲಿ ಹೂಡಿಕೆ ಮಾಡಿದರೆ ಶೇ 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಿಸಿತ್ತು. ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಈ ತೆರಿಗೆಯನ್ನು ವಿಧಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಗಮನಾರ್ಹವಾಗಿ, ಆದರೆ, ಕ್ರಿಪ್ಟೋ ಕಾನೂನುಬದ್ಧವಾಗಿದೆಯೇ ಅಥವಾ ಕಾನೂನು ಬಾಹೀರವಾಗಿದೆಯೆ ಎಂಬ ಗೊಂದಲದಲ್ಲಿ  ಸಾರ್ವಜನಿಕರಿರುವುದು ಮಾತ್ರ ನಿಜ.

ಇದನ್ನೂ ಓದಿ-'Cryptocurrency ಕಾನೂನುಬಾಹೀರವಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News