PF ಖಾತೆದಾರರೆ ಗಮನಿಸಿ : ನೀವು 2ನೇ ಬಾರಿಗೆ ಹಿಂಪಡೆಯಬಹುದು ಕೋವಿಡ್ ಮುಂಗಡ!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಿಂದ ಎರಡನೇ ಬಾರಿಗೆ ಮುಂಗಡವನ್ನು ಹಿಂಪಡೆಯಲು ಅವಕಾಶ ನೀಡಿದೆ.

Written by - Channabasava A Kashinakunti | Last Updated : Jan 27, 2022, 03:35 PM IST
  • ದೇಶಾದ್ಯಂತ ಮತ್ತೊಮ್ಮೆ ಕೊರೋನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ
  • ಈಗ ನೀವು 2ನೇ ಬಾರಿಗೆ ನಿಮ್ಮ PF ಖಾತೆಯಿಂದ ಮುಂಗಡ ಹಿಂಪಡೆಯಬಹುದು.
  • EPF ಖಾತೆಯಿಂದ 2ನೇ ಬಾರಿಗೆ ಮುಂಗಡ ಹಿಂಪಡೆಯಲು ಅವಕಾಶ ನೀಡಿದೆ.
PF ಖಾತೆದಾರರೆ ಗಮನಿಸಿ : ನೀವು 2ನೇ ಬಾರಿಗೆ ಹಿಂಪಡೆಯಬಹುದು ಕೋವಿಡ್ ಮುಂಗಡ! title=

ನವದೆಹಲಿ : ದೇಶಾದ್ಯಂತ ಮತ್ತೊಮ್ಮೆ ಕೊರೋನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹೀಗಿರುವಾಗ ಮತ್ತೆ ಜನಪರ ಕಾಳಜಿ ಹೆಚ್ಚಿದೆ. ನೀವು ಎಲ್ಲೋ ಕೆಲಸ ಮಾಡುತ್ತಿದ್ದರೆ ಮತ್ತು ಪಿಎಫ್ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. ಈಗ ನೀವು ಎರಡನೇ ಬಾರಿಗೆ ನಿಮ್ಮ ಪಿಎಫ್ ಖಾತೆಯಿಂದ ಮುಂಗಡವನ್ನು ಹಿಂಪಡೆಯಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಿಂದ ಎರಡನೇ ಬಾರಿಗೆ ಮುಂಗಡವನ್ನು ಹಿಂಪಡೆಯಲು ಅವಕಾಶ ನೀಡಿದೆ.

ನಿಮಗೆ ತುಂಬಾ ಸಹಾಯವಾಗಬಹುದು

ಈಗ PF ಖಾತೆದಾರರು(PF Account Holder) 3 ತಿಂಗಳ ಮೂಲ ವೇತನವನ್ನು (ಮೂಲ ವೇತನ + ತುಟ್ಟಿಭತ್ಯೆ ಅಂದರೆ DA) ಅಥವಾ ತಮ್ಮ PF ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ 75% ವರೆಗೆ (ಯಾವುದು ಕಡಿಮೆಯೋ ಅದು) ಹಿಂಪಡೆಯಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಇಪಿಎಫ್ ಸದಸ್ಯರು, ವಿಶೇಷವಾಗಿ ಮಾಸಿಕ ವೇತನ 15,000 ರೂ.ಗಿಂತ ಕಡಿಮೆ ಇರುವವರಿಗೆ ದೊಡ್ಡ ಸಹಾಯ ಸಿಕ್ಕಿದೆ.

ಇದನ್ನೂ ಓದಿ : Post Office ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಶೇ.6.6 ರಷ್ಟು ಬಡ್ಡಿ ಪಡೆಯಿರಿ - ವಿವರಗಳಿಗೆ ಇಲ್ಲಿ ತಿಳಿಯಿರಿ

PF ಖಾತೆಯಿಂದ ಮುಂಗಡ ಹಿಂಪಡೆಯುವುದು ಹೇಗೆ?

EPFO ಖಾತೆದಾರರು ಮುಂಗಡ ಸೌಲಭ್ಯದ ಲಾಭವನ್ನು ಪಡೆಯಲು ಬಯಸಿದರೆ, ಅವರು EPFO ​​ವೆಬ್‌ಸೈಟ್ ಮೂಲಕ ಕ್ಲೈಮ್ ಮಾಡಬಹುದು. ಇದಲ್ಲದೆ, ನೀವು PF ಖಾತೆಯಿಂದ UMANG ಅಪ್ಲಿಕೇಶನ್ ಮೂಲಕ ಮುಂಗಡ ಮೊತ್ತಕ್ಕೆ ಅರ್ಜಿ ಸಲ್ಲಿಸಬಹುದು.

KYC ಅಗತ್ಯವಿದೆ

ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆ(EPF Account)ಯಿಂದ ಹಣವನ್ನು ಹಿಂಪಡೆಯಲು, ನೀವು ಸಕ್ರಿಯ ಯುನಿವರ್ಸಲ್ ಖಾತೆ ಸಂಖ್ಯೆ (UAN) ಹೊಂದಿರಬೇಕು. ಇದಲ್ಲದೆ, ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯು ಸಕ್ರಿಯವಾಗಿರಬೇಕು. ಆಧಾರ್, ಪ್ಯಾನ್ ಮತ್ತು ಇತರ ಬ್ಯಾಂಕ್ ವಿವರಗಳನ್ನು ಪರಿಶೀಲಿಸಬೇಕು.

ಇದನ್ನೂ ಓದಿ : Eleksa CityBug: ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಕಾರ್ ಒಂದೇ ಚಾರ್ಜ್‌ನಲ್ಲಿ 200 ಕಿಮೀ ವರೆಗೆ ಚಲಿಸುತ್ತಂತೆ

ಈ ಪ್ರಕ್ರಿಯೆಯನ್ನು ಅನುಸರಿಸಿ

- EPFO ​​ನ ಏಕೀಕೃತ ವೆಬ್‌ಸೈಟ್ https://unifiedportalmem.epfindia.gov.in/memberinterface ಸದಸ್ಯ ಇಂಟರ್‌ಫೇಸ್‌ಗೆ ಲಾಗಿನ್ ಮಾಡಿ.
- ಇದರ ನಂತರ, ಆನ್‌ಲೈನ್ ಸೇವೆಗಳ ಆಯ್ಕೆಗೆ ಹೋಗಿ, ಕ್ಲೈಮ್ (ಫಾರ್ಮ್-31,19,10 ಸಿ, 10 ಡಿ) ಕ್ಲಿಕ್ ಮಾಡಿ.
- ನಿಮ್ಮ ಬ್ಯಾಂಕ್ ಖಾತೆಯ ಕೊನೆಯ 4 ಅಂಕೆಗಳನ್ನು ನಮೂದಿಸಿ ಮತ್ತು ಪರಿಶೀಲಿಸಿ.
- ಇದಾದ ನಂತರ Proceed for Online Claim ಮೇಲೆ ಕ್ಲಿಕ್ ಮಾಡಿ.
- ಈಗ ಏಕಾಏಕಿ ಸಾಂಕ್ರಾಮಿಕ ರೋಗ (ಕೋವಿಡ್-19) ಆಯ್ಕೆಮಾಡಿ ಮತ್ತು ಅಗತ್ಯವಿರುವ ಮೊತ್ತವನ್ನು ನಮೂದಿಸಿ.
- ಬ್ಯಾಂಕ್ ಖಾತೆ ಚೆಕ್‌ನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ.
- ಗೆಟ್ ಆಧಾರ್ ಒಟಿಪಿ ಕ್ಲಿಕ್ ಮಾಡಿ ಮತ್ತು ಒಟಿಪಿ ನಮೂದಿಸಿ.
- ಇದರ ನಂತರ ನಿಮ್ಮ ಕ್ಲೈಮ್ ಅನ್ನು ಸಲ್ಲಿಸಲಾಗುತ್ತದೆ ಮತ್ತು 3 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News