'Work From Home'ಹಿನ್ನೆಲೆ ಕೇವಲ 3 ತಿಂಗಳಲ್ಲಿ 34 ಲಕ್ಷ PC ಮಾರಾಟ

ಲಾಕ್ ಡೌನ್ ಹಿಂಪಡೆದ ಬಳಿಕವೂ ಕೂಡ ಕಂಪನಿಗಳು ವರ್ಕ್ ಫ್ರಮ್ ಹೋಮ್ (WFH) ಮೋಡ್ ನಿಂದ ನಿಧಾನಕ್ಕೆ ಹೊರಬರುತ್ತಿವೆ. ಆದರೆ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಇನ್ನೊಂದೆಡೆ ಸ್ಕೂಲ್ ಹಾಗೂ ಕಾಲೇಜುಗಳ ಪರಿಸ್ಥಿತಿಯೂ ಕೂಡ ಇದೇ ತೆರನಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಸಂಪೂರ್ಣ ತರಗತಿಗಳು ಇನ್ನೂ ಆನ್ಲೈನ್ ನಲ್ಲಿಯೇ ನಡೆಯುತ್ತಿದೆ.

Last Updated : Nov 16, 2020, 11:30 AM IST
  • ಪ್ರತಿಯೊಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದು ಅವಕಾಶ ಅಡಗಿರುತ್ತದೆ .
  • ಭಾರತದಲ್ಲಿ ಇದು ಕಂಪ್ಯೂಟರ್ ಮಾರುಕಟ್ಟೆಯ ವಿಷಯದಲ್ಲಿ ನಿಜ ಎಂದು ಸಾಬೀತಾಗಿದೆ.
'Work From Home'ಹಿನ್ನೆಲೆ ಕೇವಲ 3 ತಿಂಗಳಲ್ಲಿ 34 ಲಕ್ಷ PC ಮಾರಾಟ title=

ನವದೆಹಲಿ: " In the midst of every crisis, lies great opportunity" ಎಂಬ ನಾಣ್ನುಡಿ ಇದೆ. ಅಂದರೆ, ಪ್ರತಿಯೊಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದು ಅವಕಾಶ ಅಡಗಿರುತ್ತದೆ ಎಂದರ್ಥ. ಲ್ಯಾಪ್ ಟಾಪ್ ತಯಾರಕ ಕಂಪನಿಗಳಿಗೆ ಈ ನಾಣ್ನುಡಿ ನಿಜ ಎಂದು ಸಾಬೀತಾಗಿದೆ. ಕೊರೊನಾ ಮಹಾಮಾರಿಯ ಹಿನ್ನೆಲೆ ಇಡೀ ದೇಶ ಮನೆಗಳಲಿಯೇ ಕಾಲ ಕಳೆಯುವಂತಾಗಿತ್ತು ಈ ವೇಳೆ ದೇಶದ ಕಂಪ್ಯೂಟರ್ ಮಾರುಕಟ್ಟೆ ಈ ಮಾಹಾಮಾರಿಯನ್ನು ಲಾಭವನ್ನಾಗಿ ಪರಿವರ್ತಿಸಿದೆ.

ವರ್ಕ್ ಫ್ರಮ್ ಹೋಂನಿಂದ ಹೆಚ್ಚಾದ ಕಂಪ್ಯೂಟರ್ ಮಾರಾಟ
ಲಾಕ್ ಡೌನ್ ಹಿಂಪಡೆದ ಬಳಿಕವೂ ಕೂಡ ಕಂಪನಿಗಳು ವರ್ಕ್ ಫ್ರಮ್ ಹೋಮ್ (WFH) ಮೋಡ್ ನಿಂದ ನಿಧಾನಕ್ಕೆ ಹೊರಬರುತ್ತಿವೆ. ಆದರೆ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಇನ್ನೊಂದೆಡೆ ಸ್ಕೂಲ್ ಹಾಗೂ ಕಾಲೇಜುಗಳ ಪರಿಸ್ಥಿತಿಯೂ ಕೂಡ ಇದೇ ತೆರನಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಸಂಪೂರ್ಣ ತರಗತಿಗಳು ಇನ್ನೂ ಆನ್ಲೈನ್ ನಲ್ಲಿಯೇ ನಡೆಯುತ್ತಿದೆ. ಈ ಎರಡು ದೊಡ್ಡ ಕಾರಣಗಳು ಭಾರತದ ವೈಯಕ್ತಿಕ ಕಂಪ್ಯೂಟರ್ ಮಾರುಕಟ್ಟೆಯ (ಪಿಸಿ) ಮಾರಾಟವನ್ನು ಗಗನಕ್ಕೇರಿಸಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದಲ್ಲಿ ಪರ್ಸನಲ್ ಕಂಪ್ಯೂಟರ್‌ಗಳ ಮಾರಾಟ 34 ಲಕ್ಷ ಯುನಿಟ್‌ಗಳಾಗಿದ್ದು, ಇದು 2013 ರ ನಂತರದ ಅತಿ ಹೆಚ್ಚು ಮಾರಾಟ ಎನ್ನಲಾಗಿದೆ.

ಇದನ್ನು ಓದಿ- ಇನ್ಮುಂದೆ ಈ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಿಗಲಿದೆ ಪರ್ಮ್ನಂಟ್ 'Work From Home' ಸ್ವಾತಂತ್ರ್ಯ

ಕಂಪ್ಯೂಟರ್ ಮಾರಾಟದ ಹಳೆ ದಾಖಲೆ ನುಚ್ಚುನೂರು
IDC ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ, ವಾಣಿಜ್ಯ ವಿಭಾಗದಲ್ಲಿ ಸರ್ಕಾರಿ ಮತ್ತು ಶೈಕ್ಷಣಿಕ ಯೋಜನೆಗಳು ಬಹಳ ಕಡಿಮೆ ಇದ್ದರೂ, ಗ್ರಾಹಕ ವಿಭಾಗವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ 2 ಮಿಲಿಯನ್ ಕಂಪ್ಯೂಟರ್‌ಗಳನ್ನು ಮಾರಾಟ ಮಾಡಿದೆ. ಇದು ವಾರ್ಷಿಕ ಆಧಾರದ ಮೇಲೆ 41.7% ಮತ್ತು ತ್ರೈಮಾಸಿಕ ಆಧಾರದ ಮೇಲೆ 167.2% ಹೆಚ್ಚಾಗಿದೆ.

ಇದನ್ನು ಓದಿ-Work From Home ವೇಳೆ ತಪ್ಪದೇ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ, ಇಲ್ಲವೇ ಹುಷಾರ್!

ಡೆಸ್ಕ್‌ಟಾಪ್‌ಗಳು, ನೋಟ್‌ಬುಕ್‌ಗಳು ಮತ್ತು ವರ್ಕ್ ಸ್ಟೇಷನ್ ಗಳ ಬೇಡಿಕೆಯು ಮೊದಲ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್-ಜೂನ್‌ನಲ್ಲಿ ದಾಖಲೆಯ ಮಾರಾಟವನ್ನು ದಾಖಲಿಸಿದೆ, ಏಕೆಂದರೆ ಕಂಪನಿಗಳು ಉದ್ಯೋಗಿಗಳಿಂದ ಮನೆಯಿಂದ ಕೆಲಸಕ್ಕಾಗಿ ಹೆಚ್ಚಿನ ಪ್ರಮಾಣದ ಕಂಪ್ಯೂಟರ್‌ಗಳನ್ನು ಖರೀದಿಸಿವೆ. ಇದು ಎರಡನೇ ತ್ರೈಮಾಸಿಕದಲ್ಲಿ ಮುಂದುವರೆದಿದೆ ಮತ್ತು ವಾರ್ಷಿಕ ಆಧಾರದ ಮೇಲೆ ಮಾರಾಟವು 105% ಕ್ಕಿಂತ ಹೆಚ್ಚಾಗಿದೆ

ಇದನ್ನು ಓದಿ- ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಪ್ರಮಾಣದಲ್ಲಿ ಹೆಚ್ಚಳ

ಮುಂಬರುವ ದಿನಗಳಲ್ಲಿಯೂ ಕೂಡ ಕಂಪ್ಯೂಟರ್ ಗಳ ಬೇಡಿಕೆ ಹೆಚ್ಚಾಗಲಿದೆ
ಐಡಿಸಿ ಇಂಡಿಯಾ ಪ್ರಕಾರ, 'ಶಾಲೆಗಳು ಮತ್ತು ಕಾಲೇಜುಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತಲೇ ಬಂದವು, ಈ ಕಾರಣದಿಂದಾಗಿ ನೋಟ್‌ಬುಕ್‌ಗಳ ಬೇಡಿಕೆ ಭಾರಿ ಹೆಚ್ಚಾಯಿತು, ಇದರಲ್ಲಿ ದೊಡ್ಡ ನಗರಗಳ ಪಾಲು ಹೆಚ್ಚು. ಪೂರೈಕೆಯಲ್ಲಿನ ತೊಂದರೆಗಳ ಹೊರತಾಗಿಯೂ, ಮಾರಾಟಗಾರರು ಅವುಗಳನ್ನು ಆನ್‌ಲೈನ್ ಫೆಸ್ಟಿವಲ್ ಗಳಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾದರು. ಐಡಿಸಿ ಇಂಡಿಯಾ ನೋಟ್ಬುಕ್ ಪಿಸಿಗಳ ಬೇಡಿಕೆ ಪೂರೈಕೆಗಿಂತ ಹೆಚ್ಚಾಗಿದೆ ಎಂದಿದ್ದು , ಇದು ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಮಾರಾಟಕ್ಕೆ ಕಾರಣವಾಗಬಹುದು ಎಂದು ನಿರೀಕ್ಷೆ ವ್ಯಕ್ತಪಡಿಸಿದೆ. ಆಪಲ್ನ ಮಾರಾಟವು ವಾರ್ಷಿಕ 19.4% ರಷ್ಟಿದೆ, ಇದು ಭಾರತದ ಅತ್ಯುತ್ತಮ ತ್ರೈಮಾಸಿಕ ಸಾಧನೆ.

ಇದನ್ನು ಓದಿ- Health Tips:Work From Home ನಿಂದಾಗುವ ಈ ಹಾನಿಯ ಕುರಿತು ಅಧ್ಯಯನ ಏನು ಹೇಳುತ್ತೆ..?

ಶಾಲೆಗಳು ಮತ್ತು ಕಾಲೇಜುಗಳು ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಮತ್ತೆ ಯಾವಾಗ ತರಗತಿಗಳನ್ನು ಆರಂಭಿಸುತ್ತವೆ ಎಂಬುದರ ಮೇಲೆ ಇದು ನಿರ್ಭರವಾಗಿದೆ ಎಂದು ಐಡಿಸಿ ಇಂಡಿಯಾದ ಮಾರುಕಟ್ಟೆ ವಿಶ್ಲೇಷಕ ಭಾರತ್ ಶೆಣೈ ಹೇಳುತ್ತಾರೆ. ಇದರೊಂದಿಗೆ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನ್‌ಲೈನ್‌ನಲ್ಲಿ ಮಾಡಲು ವ್ಯವಸ್ಥೆ ಮಾಡಬೇಕಾಗುತ್ತದೆ. ದೇಶದಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕ ಹೆಚ್ಚುತ್ತಿರುವ ಕಾರಣ ಆನ್‌ಲೈನ್ ಶಿಕ್ಷಣ ಸುಲಭವಾಗಿದೆ. ಆದ್ದರಿಂದ ಪಿಸಿ ಮಾರಾಟಗಾರರಿಗೆ ಮುಂಬರುವ ಕೆಲ ತ್ರೈಮಾಸಿಕಗಳು ಉತ್ತಮವಾಗಿರಲಿವೆ ಎಂದು ಅವರು ಹೇಳಿದ್ದಾರೆ.

Trending News