ಬೆಂಗಳೂರು : LPG Gas Subsidy: ಹಣದುಬ್ಬರ ಏರಿಕೆಯ ನಡುವೆಯೇ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳಲ್ಲಿ ಮತ್ತೊಮ್ಮೆ 200 ರೂ.ಗಳ ಸಬ್ಸಿಡಿ ಲಭ್ಯವಾಗಲಿದೆ . ಈ ಬಗ್ಗೆ ಕೇಂದ್ರ ಸರ್ಸಕಾರ ಮೇ. 21 ರಂದೆ ಸ್ದಪಷ್ಟಪಡಿಸಿದೆ. ಪ್ರತಿ ವರ್ಷ ಗೃಹ ಬಳಕೆಯ 14.2 ಕೆಜಿಯ 12 ಸಿಲಿಂಡರ್ಗಳಿಗೆ ಸಬ್ಸಿಡಿ ನೀಡಲಾಗುವುದು. ಗ್ರಾಹಕರು ಸಿಲಿಂಡರ್ಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬೇಕು. ನಂತರ ಇದರ ಮೇಲೆ 200 ರೂ ಸಬ್ಸಿಡಿ ನೀಡಲಾಗುತ್ತದೆ.
ಸಬ್ಸಿಡಿ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ :
ಸರ್ಕಾರವು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಬದಲಾಯಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂಡೇನ್, ಎಚ್ಪಿ ಮತ್ತು ಭಾರತ್ ಗ್ಯಾಸ್ನ ಗ್ರಾಹಕರು ತಮ್ಮ ಖಾತೆಗೆ ಸಬ್ಸಿಡಿ ಬರುತ್ತಿದೆಯೇ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು. ಬ್ಯಾಂಕ್ ಖಾತೆಗೆ ಸಬ್ಸಿಡಿ ಜಮೆಯಾಗಿದೆಯೇ ಎಂದು ತಿಳಿಯಲು ಬ್ಯಾಂಕ್ ಗೇ ಹೋಗುವ ಅಗತ್ಯವಿಲ್ಲ. ಇದನ್ನು ಮನೆಯಲ್ಲಿ ಕುಳಿತೇ ಪತ್ತೆ ಹಚ್ಚಬಹುದು.
ಇದನ್ನೂ ಓದಿ : Gold Price Today:ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ, ಕುಸಿತ ಕಂಡ ಹಳದಿ ಲೋಹ, ಬೆಳ್ಳಿ ಬೆಲೆಯಲ್ಲಿಯೂ ಭಾರೀ ಇಳಿಕೆ
Indane ಗ್ರಾಹಕರು ಸಬ್ಸಿಡಿ ಬಂದಿದೆಯೇ ಎಂದು ಹೀಗೆ ಪತ್ತೆ ಹಚ್ಚಿ :
1. ಮೊದಲಿಗೆ www.mylpg.in ಎಂದು ಟೈಪ್ ಮಾಡುವ ಮೂಲಕ ಅದನ್ನು ತೆರೆಯಿರಿ.
2.ಪುಟವನ್ನು ತೆರೆಯುವಾಗ, ಗ್ಯಾಸ್ ಕಂಪನಿಗಳ ಗ್ಯಾಸ್ ಸಿಲಿಂಡರ್ ಗಳ ಫೋಟೋ ಸೈಟ್ನಲ್ಲಿ ಕಾಣಿಸುತ್ತದೆ. ಇಲ್ಲಿ ನಿಮ್ಮ ಸರ್ವಿಸ್ ಪ್ರೊವೈಡರ್ ಮೇಲೆ ಟ್ಯಾಪ್ ಮಾಡಿ.
3. ವಿಂಡೋ ತೆರೆದಾಗ, ''Give your feedback online' ಮೇಲೆ ಕ್ಲಿಕ್ ಮಾಡಿ.
4. ಈಗ ತೆರೆಯುವ ಪಗೆನಲ್ಲಿ ಸಿಲಿಂಡರ್ ಮಾರ್ಕ್ ಮೇಲೆ ಕ್ಲಿಕ್ ಮಾಡಬೇಕು.
5. ಇದರಲ್ಲಿ,'Subsidy not received' ಕ್ಲಿಕ್ ಮಾಡಿ.
6. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ LPG ID ಅನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ.
7. ಕಳೆದ 5 ಸಿಲಿಂಡರ್ಗಳಿಗೆ ಎಷ್ಟು ಹಣ ಪಾವತಿಸಿದ್ದೀರಿ ಮತ್ತು ಎಷ್ಟು ಹಣ ವಾಪಸ್ ಪಡೆದಿದ್ದೀರಿ ಎಂಬ ವಿವರಗಳು ಇಲ್ಲಿ ಸಿಗುತ್ತವೆ.
8. ಸಬ್ಸಿಡಿಯನ್ನು ಸ್ವೀಕರಿಸದಿದ್ದರೆ, 'select' ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ದೂರನ್ನು ನೋಂದಾಯಿಸಬಹುದು.
ಇದನ್ನೂ ಓದಿ : Arecanut Today: ಅಡಿಕೆ ಧಾರಣೆಯಲ್ಲಿ ಮತ್ತೆ ಭರ್ಜರಿ ಏರಿಕೆ
HP ಮತ್ತು ಭಾರತ್ ಗ್ಯಾಸ್ ಗ್ರಾಹಕರು ಈ ರೀತಿಯಲ್ಲಿ ಪರಿಶೀಲಿಸಿ :
1.www.mylpg.in ಗೆ ಹೋಗಿ.
2. ಗ್ಯಾಸ್ ಕಂಪನಿಗಳ ಗ್ಯಾಸ್ ಸಿಲಿಂಡರ್ಗಳ ಫೋಟೋವನ್ನು ಟ್ಯಾಪ್ ಮಾಡಿ.
3. ಮೊದಲ ಬಾರಿಗೆ ಬಳಸುತ್ತಿರುವವರು 'new user' ಮೇಲೆ ಕ್ಲಿಕ್ ಮಾಡಬೇಕು.
4. ಇಲ್ಲಿ ಗ್ರಾಹಕ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ, 'continue' ಕ್ಲಿಕ್ ಮಾಡಿ.
5. ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚಿಸುವ ಮೂಲಕ 'Sign in' ಕ್ಲಿಕ್ ಮಾಡಿ.
6.ಬಳಕೆದಾರ ID, ಪಾಸ್ವರ್ಡ್ ಜೊತೆಗೆ ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ 'Login' ಮಾಡಿ.
7. ಎಡಭಾಗದಲ್ಲಿ ನೀವು 'view cylinder booking history' ಕಾಣಿಸುತ್ತದೆ.
8. ಸಿಲಿಂಡರ್ಗೆ ಎಷ್ಟು ಹಣ ಪಾವತಿಸಿದ್ದೀರಿ, ಎಷ್ಟು ಹಣ ಪಡೆದಿದ್ದೀರಿ ಎನ್ನುವುದು ತಿಳಿಯುತ್ತದೆ. 9. 9. ಸಬ್ಸಿಡಿಯನ್ನು ಸ್ವೀಕರಿಸದಿದ್ದರೆ complaint/feedback ನಲ್ಲಿ ನಿಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.
ಸಬ್ಸಿಡಿ ಸಿಗುತ್ತಿಲ್ಲವೇ? :
ನೀವು LPG ಮೇಲೆ ಸಬ್ಸಿಡಿಯನ್ನು ಪಡೆಯದಿದ್ದರೆ, ಅದು ಆಧಾರ್-LPG ಲಿಂಕ್ ಲಭ್ಯವಿಲ್ಲದ ಕಾರಣ ಇರಬಹುದು. LPG ಸಬ್ಸಿಡಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿರುತ್ತದೆ. ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಇರುವವರಿಗೆ ಸಬ್ಸಿಡಿ ನೀಡಲಾಗುವುದಿಲ್ಲ. ಈ ವಾರ್ಷಿಕ ಆದಾಯವನ್ನು ಪತಿ ಮತ್ತು ಪತ್ನಿ ಇಬ್ಬರ ಆದಾಯವನ್ನು ಸೇರಿಸಿ ಲೆಕ್ಕ ಹಾಕಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.