CNG ಬೆಲೆಯಲ್ಲಿ ಭಾರಿ ಕಡಿತ, ನಾಳೆಯಿಂದ ಒಂದು ಕೆ.ಜಿ ಗ್ಯಾಸ್ ಬೆಲೆ ಎಷ್ಟು ಗೊತ್ತಾ?

ಕಾರನ್ನು ಓಡಿಸುವುದರಿಂದ  ಅಡುಗೆಮನೆಯಲ್ಲಿ ಅಡುಗೆ ಮಾಡುವಾಗಲು ಕೂಡ ಇದೀಗ ನೀವು ಹಣ ಉಳಿತಾಯ ಮಾಡಲಿರುವಿರಿ. ವಾಸ್ತವವಾಗಿ, ಸರ್ಕಾರವು ನೈಸರ್ಗಿಕ ಅನಿಲದ ಬೆಲೆಯನ್ನು ಶೇಕಡಾ 25 ರಷ್ಟು ಇಳಿಕೆ ಮಾಡಿದೆ.

Last Updated : Oct 4, 2020, 03:08 PM IST
  • ಸರ್ಕಾರವು ನೈಸರ್ಗಿಕ ಅನಿಲದ ಬೆಲೆಯನ್ನು ಶೇಕಡಾ 25 ರಷ್ಟು ಇಳಿಕೆ ಮಾಡಿದೆ.
  • ಸಿಎನ್‌ಜಿ ಬೆಲೆಯನ್ನು ಪ್ರತಿ ಕೆ.ಜಿ.ಗೆ ಒಂದೂವರೆ ರೂಪಾಯಿಗಿಂತ ಹೆಚ್ಚು ಕಡಿತಗೊಳಿಸಿದರೆ, ಪಿಎನ್‌ಜಿ ಬೆಲೆಯನ್ನು ಸಹ ಪ್ರತಿ ಕೆ.ಜಿ.ಗೆ 1 ರೂ.ಗೆ ಇಳಿಕೆ ಮಾಡಿದೆ.
  • ಪ್ರತಿ 6 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಇದನ್ನು ಪ್ರತಿ ವರ್ಷ ಏಪ್ರಿಲ್ 1 ಮತ್ತು ಅಕ್ಟೋಬರ್ 1 ರಂದು ಪರಿಶೀಲಿಸಲಾಗುತ್ತದೆ.
CNG ಬೆಲೆಯಲ್ಲಿ ಭಾರಿ ಕಡಿತ, ನಾಳೆಯಿಂದ ಒಂದು ಕೆ.ಜಿ ಗ್ಯಾಸ್ ಬೆಲೆ ಎಷ್ಟು ಗೊತ್ತಾ? title=

ನವದೆಹಲಿ: ಕಾರನ್ನು ಓಡಿಸುವುದರಿಂದ  ಅಡುಗೆಮನೆಯಲ್ಲಿ ಅಡುಗೆ ಮಾಡುವಾಗಲು ಕೂಡ ಇದೀಗ ನೀವು ಹಣ ಉಳಿತಾಯ ಮಾಡಲಿರುವಿರಿ. ವಾಸ್ತವವಾಗಿ, ಸರ್ಕಾರವು ನೈಸರ್ಗಿಕ ಅನಿಲದ ಬೆಲೆಯನ್ನು ಶೇಕಡಾ 25 ರಷ್ಟು ಇಳಿಕೆ ಮಾಡಿದೆ. ಇದರ ಪರಿಣಾಮ ದೆಹಲಿ-NCR ನಲ್ಲಿ CNG-PNG ಸಪ್ಲೈ ಮಾಡುವ Indraprastha Gas Limited ಕಂಪನಿ ತನ್ನ CNG ಹಾಗೂ PNG ಬೆಲೆಯಲ್ಲಿಯೂ ಕೂಡ ಇಳಿಕೆ ಮಾಡಿದೆ.
ಇಂದು ಬೆಳಗ್ಗೆಯಿಂದ ನೂತನ ದರಗಳು ಜಾರಿಗೆ ಬಂದಿವೆ.

ಕಂಪನಿಯು ಸಿಎನ್‌ಜಿ ಬೆಲೆಯನ್ನು ಪ್ರತಿ ಕೆ.ಜಿ.ಗೆ ಒಂದೂವರೆ ರೂಪಾಯಿಗಿಂತ ಹೆಚ್ಚು ಕಡಿತಗೊಳಿಸಿದರೆ, ಪಿಎನ್‌ಜಿ ಬೆಲೆಯನ್ನು ಸಹ ಪ್ರತಿ ಕೆ.ಜಿ.ಗೆ 1 ರೂ.ಗೆ ಇಳಿಕೆ ಮಾಡಿದೆ. ಅಕ್ಟೋಬರ್ 4 ರಂದು ಬೆಳಗ್ಗೆ 6 ಗಂಟೆಯಿಂದ ಈ ದರ ಕಡಿತ ಜಾರಿಗೆ ಬಂದಿದೆ. ಇದರೊಂದಿಗೆ, ಗರಿಷ್ಠವಲ್ಲದ ಗಂಟೆಗಳಲ್ಲಿ ಸಿಎನ್‌ಜಿ ತೆಗೆದುಕೊಳ್ಳುವವರು ಮೊದಲಿನಂತೆ ಪ್ರತಿ ಕೆಜಿಗೆ 50 ಪೈಸೆ ರಿಯಾಯಿತಿ ಪಡೆಯುವುದನ್ನು ಮುಂದುವರೆಸಲಿದ್ದಾರೆ.

ಇದನ್ನು ಓದಿ-CNG-PNG ಬೆಲೆ ಇಳಿಕೆ; ಎಲ್ಲಿ? ಒಂದು ಕೇಜಿಗೆ ಎಷ್ಟು ಕಡಿಮೆ ಅಂತಾ ನೋಡಿ

ಈ ದರ  ಕಡಿತದ ನಂತರ, ಇದೀಗ ದೆಹಲಿಯಲ್ಲಿ ಪ್ರತಿ ಕೆ.ಜಿ ಸಿ.ಎನ್‌ಜಿ  42.70 ರೂ. ಗೆ ಸಿಗಲಿದೆ. ಇದರೊಂದಿಗೆ ಮನೆಗಳಲ್ಲಿ ಅಡುಗೆ ಮಾಡಲು ಪೈಪ್ ಮಾಡಿದ ನೈಸರ್ಗಿಕ ಅನಿಲದ (PNG) ಬೆಲೆಯನ್ನೂಕೂಡ ಕಡಿಮೆ ಮಾಡಲಾಗಿದೆ. ಪಿಎನ್‌ಜಿಯ ಬೆಲೆ ಈಗ ದೆಹಲಿಯಲ್ಲಿ ಪ್ರತಿ ಕೆ.ಜಿ.ಗೆ 27.50 ರೂ. ಈ ಮೊದಲು ಈ ಬೆಲೆ  ಪ್ರತಿ ಕೆ.ಜಿ.ಗೆ 28.55 ರೂ.ಗಳಷ್ಟಿತ್ತು.

ನೈಸರ್ಗಿಕ ಅನಿಲ ಬೆಲೆಯಲ್ಲಿ ಸರ್ಕಾರ ಇಳಿಕೆ ಮಾಡಿರುವ ಕುರಿತು ಹೇಳಿಕೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಧಿವಾಲಯದ ಪೆಟ್ರೋಲಿಯಂ ಯೋಜನೆ  ಹಾಗೂ ವಿಶ್ಲೇಷಣಾ ಕೇಂದ್ರ(PPAV), ನೈಸರ್ಗಿಕ ಅನಿಲದ ದರ ಪ್ರಸ್ತುತ  ದರವನ್ನು 2.39 ಡಾಲರ್ ನಿಂದ 1.79 ಡಾಲರ್ ಪ್ರತಿ ಹತ್ತು ಲಕ್ಷ ಬ್ರಿಟಿಷ್ ಥರ್ಮಲ್ ಯುನಿಟ್ (MBTU) ಮಾಡಲಾಗಿದೆ ಎಂದು ಹೇಳಿದೆ.

ಇದನ್ನು ಓದಿ- ನೈಸರ್ಗಿಕ ಅನಿಲ ಬೆಲೆಗಳಲ್ಲಿ 26% ಕುಸಿತ: CNG-PNG ದರ ಇಳಿಕೆ ಸಾಧ್ಯತೆ

ನೈಸರ್ಗಿಕ ಅನಿಲದ ಬೆಲೆಯನ್ನು ಈ ಹಿಂದೆ 2020 ರ ಏಪ್ರಿಲ್‌ನಲ್ಲಿ ಶೇಕಡಾ 26 ರಷ್ಟು ಕಡಿತಗೊಳಿಸಲಾಗಿತ್ತು. ಆಳವಾದ ಸಮುದ್ರದಂತಹ ಕಷ್ಟಕರ ಪ್ರದೇಶಗಳಿಂದ ಅನಿಲವನ್ನು ಉತ್ಪಾದಿಸುವ ಉತ್ಪಾದಕರಿಗೆ, ಅನಿಲದ ಬೆಲೆಯನ್ನು ಪ್ರತಿ  MBTUಗೆ  5.61 ಡಾಲರ್ ನಿಂದ  4.06  ಡಾಲರ್ ಗೆ ಇಳಿಸಲಾಗಿದೆ ಎನ್ನಲಾಗಿತ್ತು.

ದೇಶದಲ್ಲಿ ನೈಸರ್ಗಿಕ ಅನಿಲ ಬೆಲೆಗಳನ್ನು ಪ್ರತಿ 6 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಇದನ್ನು ಪ್ರತಿ ವರ್ಷ ಏಪ್ರಿಲ್ 1 ಮತ್ತು ಅಕ್ಟೋಬರ್ 1 ರಂದು ಪರಿಶೀಲಿಸಲಾಗುತ್ತದೆ. ಅಮೆರಿಕ, ಕೆನಡಾ ಮತ್ತು ರಷ್ಯಾದಂತಹ ಅನಿಲ ಹೆಚ್ಚುವರಿ ಹೊಂದಿರುವ ದೇಶಗಳಲ್ಲಿ ನಡೆಯುತ್ತಿರುವ ಬೆಲೆಗಳ ಆಧಾರದ ಮೇಲೆ ಈ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ.

Trending News