ನವದೆಹಲಿ: ದೇಶಾದ್ಯಂತ ದಿನೇ ದಿನೇ ಜನಸಾಮಾನ್ಯರ ಮೇಲೆ ಹಣದುಬ್ಬರದ ಹೊರೆ ಹೆಚ್ಚಾಗುತ್ತಿದೆ. ಒಂದೆಡೆ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ತತ್ತರಿಸಿರುವ ಜನರಿಗೆ ಈಗ ನಿರಂತರವಾಗಿ ಹೆಚ್ಚಾಗುತ್ತಿರುವ ಸಿಎನ್ಜಿ ಬೆಲೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೀಗ ಪುಣೆ (ಮಹಾರಾಷ್ಟ್ರ)ದಲ್ಲಿ ಶುಕ್ರವಾರ ಮತ್ತೆ ಸಿಎನ್ಜಿ ದರ ಪ್ರತಿ ಕೆಜಿಗೆ 2 ರೂಪಾಯಿ 20 ಪೈಸೆಯಷ್ಟು ಹೆಚ್ಚಾಗಿದೆ.
ನೈಸರ್ಗಿಕ ಅನಿಲದ ಬೆಲೆ ಹೆಚ್ಚಳದಿಂದ ಸಿಎನ್ಜಿ ದುಬಾರಿ:
ಅಖಿಲ ಭಾರತ ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್ ವಕ್ತಾರ ಅಲಿ ದಾರುವಾಲಾ ಈ ಕುರಿತು ಮಾಹಿತಿ ನೀಡಿದ್ದಾರೆ. ಈಗ ಸಿಎನ್ಜಿ ನಗರದಲ್ಲಿ 2.20 ಪೈಸೆ ಏರಿಕೆಯಾಗಿ ಪ್ರತಿ ಕೆಜಿಗೆ 77.20 ರ ತಲುಪಿದೆ. ಪುಣೆಯಲ್ಲಿ ಏಪ್ರಿಲ್ 7 ರಿಂದ ಸಿಎನ್ಜಿ ದರವನ್ನು ನಾಲ್ಕನೇ ಬಾರಿಗೆ ಹೆಚ್ಚಿಸಲಾಗಿದೆ. ಏಪ್ರಿಲ್ 29 ರಿಂದ ಪುಣೆ ನಗರದಲ್ಲಿ ಸಂಕುಚಿತ ನೈಸರ್ಗಿಕ ಅನಿಲದ (ಸಿಎನ್ಜಿ) ಹೊಸ ದರಗಳನ್ನು ಜಾರಿಗೆ ತರಲಾಗಿದೆ. ನೈಸರ್ಗಿಕ ಅನಿಲದ ಬೆಲೆ ಹೆಚ್ಚಳದಿಂದ ಸಿಎನ್ಜಿ ದರವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- New Wage Code : ವಾರಕ್ಕೆ ಸಿಗಲಿದೆ 3 ದಿನ ರಜೆ ! ಹೊಸ ವೇತನ ಸಂಹಿತೆ ಜಾರಿ ಬಗ್ಗೆ ಏನು ಹೇಳುತ್ತದೆ ಸರ್ಕಾರ ?
ಒಂದು ತಿಂಗಳಲ್ಲಿ 15 ರೂ.ಗಳಷ್ಟು ದುಬಾರಿಯಾದ ಸಿಎನ್ಜಿ :
ಪುಣೆ ನಗರದಲ್ಲಿ ಸಿಎನ್ಜಿ ದರಗಳು ಒಂದು ತಿಂಗಳೊಳಗೆ ನಾಲ್ಕು ಬಾರಿ ಏರಿಕೆಯಾಗಿದೆ ಮತ್ತು ಇಲ್ಲಿಯವರೆಗೆ ಪ್ರತಿ ಕೆಜಿಗೆ ಬೆಲೆಯು 15 ರೂಪಾಯಿಗಳಷ್ಟು ಹೆಚ್ಚಾಗಿದೆ. ಏಪ್ರಿಲ್ ಆರಂಭದಲ್ಲಿ ಇಲ್ಲಿ ಸಿಎನ್ಜಿ ಬೆಲೆ ಕೆಜಿಗೆ 62.20 ರೂ. ಏರಿಕೆ ಆಗಿದೆ. ಮೊದಲು ಏಪ್ರಿಲ್ 6 ರಂದು 7 ರೂ.ನಿಂದ 68 ರೂ.ಗೆ ಹೆಚ್ಚಿಸಲಾಗಿತ್ತು, ನಂತರ ಏಪ್ರಿಲ್ 13 ರಂದು 5 ರೂ.ನಿಂದ 73 ರೂ. ಇದಾದ ಬಳಿಕ ಎಪ್ರಿಲ್ 18ರಂದು 2 ರೂಪಾಯಿ ಏರಿಕೆಯಾಗಿ ಪ್ರತಿ ಕೆಜಿಗೆ 75 ರೂಪಾಯಿ ತಲುಪಿತ್ತು. ಈಗ ಇಂದಿನ ಹೆಚ್ಚಳದ ನಂತರ, ಸಿಎನ್ಜಿ ಒಟ್ಟು 15 ರೂ.ಗಳಷ್ಟು ದುಬಾರಿಯಾಗಿದೆ.
ಸರ್ಕಾರವು ವ್ಯಾಟ್ ಅನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿತ್ತು:
ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರವು ಜನರಿಗೆ ಹಣದುಬ್ಬರದಿಂದ ಪರಿಹಾರ ನೀಡುವ ನಿಟ್ಟಿನಲ್ಲಿ ಏಪ್ರಿಲ್ 1 ರಂದು ಸಿಎನ್ಜಿ ಮೇಲಿನ ವ್ಯಾಟ್ನಲ್ಲಿ ದೊಡ್ಡ ಕಡಿತವನ್ನು ಘೋಷಿಸಿತ್ತು. ನಂತರ ಅದನ್ನು 13 ಪ್ರತಿಶತದಿಂದ 3 ಪ್ರತಿಶತಕ್ಕೆ ಇಳಿಸಲಾಯಿತು ಮತ್ತು ಬೆಲೆಯಲ್ಲೂ ದೊಡ್ಡ ಕುಸಿತ ಕಂಡುಬಂದಿದೆ. ಆದಾಗ್ಯೂ, ಅದೇ ದಿನ, ಕೇಂದ್ರ ಸರ್ಕಾರವು ನೈಸರ್ಗಿಕ ಅನಿಲದ ಬೆಲೆಯನ್ನು ಶೇಕಡಾ 100 ಕ್ಕಿಂತ ಹೆಚ್ಚು ಹೆಚ್ಚಿಸಿತು, ನಂತರ ಸಿಎನ್ಜಿ ಮತ್ತು ಪಿಸಿಎನ್ಜಿಗಳ ಇನ್ಪುಟ್ ವೆಚ್ಚವೂ ಹೆಚ್ಚಾಗಿದೆ ಮತ್ತು ಕಂಪನಿಗಳು ತಮ್ಮ ಚಿಲ್ಲರೆ ಬೆಲೆಗಳನ್ನು ಹೆಚ್ಚಿಸಿವೆ.
ಇದನ್ನೂ ಓದಿ- ಸುಡುವ ಬಿಸಿಲಿನ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ವಿದ್ಯುತ್ ಬಿಕ್ಕಟ್ಟು: ಮೆಟ್ರೋ ಸೇವೆ ಮೇಲೂ ಪರಿಣಾಮ
ಪ್ರಮುಖ ನಗರಗಳಲ್ಲಿ ಇಂದಿನ ಸಿಎನ್ಜಿ ದರ:
ದೆಹಲಿ - ₹ 71.61 ಪ್ರತಿ ಕೆಜಿ
ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಘಾಜಿಯಾಬಾದ್- ₹ 74.17 ಪ್ರತಿ ಕೆಜಿ
ಬೆಂಗಳೂರು - ₹ 75 ಪ್ರತಿ ಕೆಜಿ
ಮುಜಾಫರ್ನಗರ, ಮೀರತ್ ಮತ್ತು ಶಾಮ್ಲಿ - ₹ 78.84 ಪ್ರತಿ ಕೆಜಿ
ಗುರುಗ್ರಾಮ್- ರೂ 79.94 ಪ್ರತಿ ಕೆಜಿ ರೇವಾರಿ - ₹ 82.07 ಪ್ರತಿ ಕೆಜಿ
ಕರ್ನಾಲ್ ಮತ್ತು ಕೈತಾಲ್- ₹ 80.07 ಪ್ರತಿ ಕೆಜಿ
ಫತೇಪುರ್ - ₹ 83.40 ಪ್ರತಿ ಕೆಜಿ
ಅಜ್ಮೀರ್, ಪಾಲಿ ಮತ್ತು ರಾಜ್ಸಮಂದ್ - ₹ 81.88 ಪ್ರತಿ ಕೆಜಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ