ಈ ಟ್ರಿಕ್ ಅನುಸರಿಸಿದರೆ ಬೆಲೆ ಏರಿಕೆಯಾಗಿದ್ದರೂ ಆಗ್ಗವಾಗುತ್ತೆ CNG, PNG

CNG-PNG Prices Today: ಪೆಟ್ರೋಲ್-ಡೀಸೆಲ್ ಬೆಲೆಗಳು (Petrol Diesel Prices) ಈಗಾಗಲೇ ಆಕಾಶ ಮುಟ್ಟುತ್ತಿವೆ. ನಿನ್ನೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ 25 ರೂ.ಗಳಷ್ಟು ಹೆಚ್ಚಾಗಿದೆ, ಇದರ ಬೆನ್ನಲ್ಲೇ ಸಿಎನ್‌ಜಿ, ಪಿಎನ್‌ಜಿ ಬೆಲೆಗಳನ್ನೂ ಹೆಚ್ಚಿಸಲಾಗಿದೆ.  

Written by - Yashaswini V | Last Updated : Mar 2, 2021, 12:45 PM IST
  • ಪೆಟ್ರೋಲ್-ಡೀಸೆಲ್ ಬೆಲೆಗಳು ಈಗಾಗಲೇ ಆಕಾಶ ಮುಟ್ಟುತ್ತಿವೆ
  • ನಿನ್ನೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ 25 ರೂ.ಗಳಷ್ಟು ಹೆಚ್ಚಾಗಿದೆ
  • ಇದರ ಬೆನ್ನಲ್ಲೇ ಸಿಎನ್‌ಜಿ, ಪಿಎನ್‌ಜಿ ಬೆಲೆಗಳನ್ನೂ ಹೆಚ್ಚಿಸಲಾಗಿದೆ
ಈ ಟ್ರಿಕ್ ಅನುಸರಿಸಿದರೆ ಬೆಲೆ ಏರಿಕೆಯಾಗಿದ್ದರೂ ಆಗ್ಗವಾಗುತ್ತೆ CNG, PNG title=
CNG-PNG Prices Today:

ನವದೆಹಲಿ: CNG-PNG Prices Today: ಪೆಟ್ರೋಲ್-ಡೀಸೆಲ್ ಬೆಲೆಗಳು (Petrol Diesel Prices) ಈಗಾಗಲೇ ಆಕಾಶ ಮುಟ್ಟುತ್ತಿವೆ. ನಿನ್ನೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ 25 ರೂ.ಗಳಷ್ಟು ಹೆಚ್ಚಾಗಿದೆ, ಇದರ ಬೆನ್ನಲ್ಲೇ ಸಿಎನ್‌ಜಿ, ಪಿಎನ್‌ಜಿ ಬೆಲೆಗಳನ್ನೂ ಹೆಚ್ಚಿಸಲಾಗಿದೆ. ಹಣದುಬ್ಬರದ ಸರ್ವತೋಮುಖ ಹೊಡೆತದಿಂದ ಯಾವಾಗ ಪರಿಹಾರ ಪಡೆಯಬಹುದು ಎಂದು ತಿಳಿದಿಲ್ಲ. ಆದರೆ ಸಿಎನ್‌ಜಿ, ಪಿಎನ್‌ಜಿಯ ಹೆಚ್ಚಿದ ಬೆಲೆಗಳಿಂದ ನೀವು ಪರಿಹಾರ ಪಡೆಯಬಹುದು.

ಸಿಎನ್‌ಜಿ, ಪಿಎನ್‌ಜಿ ಬೆಲೆ ಹೆಚ್ಚಳ :
ದೆಹಲಿ-ಎನ್‌ಸಿಆರ್‌ನಲ್ಲಿ ಸಿಎನ್‌ಜಿಯ ಬೆಲೆಯನ್ನು ಕೆಜಿಗೆ 70 ಪೈಸೆ ಹೆಚ್ಚಿಸಲಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಹೇಳಿದೆ. ಇದರೊಂದಿಗೆ ದೆಹಲಿಯ ಸಿಎನ್‌ಜಿಯ ಬೆಲೆ ಈಗ ಪ್ರತಿ ಕೆ.ಜಿ.ಗೆ 43.40 ರೂ.ಗೆ ಏರಿದೆ. ಅದೇ ಸಮಯದಲ್ಲಿ, ಸಿಎನ್‌ಜಿ (CNG)ಯನ್ನು ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಪ್ರತಿ ಕೆ.ಜಿ.ಗೆ 49.08 ರೂ.ಗೆ ಏರಿಸಲಾಗಿದೆ.

ಐಜಿಎಲ್ ದೆಹಲಿ-ಎನ್‌ಸಿಆರ್‌ನಲ್ಲಿ ಪಿಎನ್‌ಜಿಯ ಬೆಲೆಯನ್ನು 91 ಪೈಸೆ ಹೆಚ್ಚಿಸಿದೆ. ದೆಹಲಿಯಲ್ಲಿ ಪಿಎನ್‌ಜಿಯ ಹೊಸ ಬೆಲೆ 28.41 /scm ಆಗಿತ್ತು. ಸಿಎನ್‌ಜಿ ಮತ್ತು ಪೈಪ್‌ಗಳ ಮೂಲಕ ಅಡಿಗೆ  ಮನೆಗಳಿಗೆ ತಲುಪುವ ಅನಿಲದ (PNG) ಹೆಚ್ಚಿದ ಬೆಲೆಗಳು ಇಂದು ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬಂದಿವೆ.

ಇದನ್ನೂ ಓದಿ - Petrol-Diesel Price: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ಶೀಘ್ರವೇ ಸರ್ಕಾರದಿಂದ ಕಡಿವಾಣ

ಆದಾಗ್ಯೂ, ಸಿಎನ್‌ಜಿ, ಪಿಎನ್‌ಜಿ ಹೆಚ್ಚಿದ ಬೆಲೆಗಳಿಂದ ನೀವು ಪರಿಹಾರ ಪಡೆಯಬಹುದು. ಇದಕ್ಕಾಗಿ ನೀವು ಕೆಲವು ಕೆಲಸಗಳನ್ನು ಮಾಡಬೇಕು. ಈ ವಿಧಾನವನ್ನು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಸ್ವತಃ ಟ್ವಿಟ್ಟರ್ ಮೂಲಕ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ.

ಸಿಎನ್‌ಜಿ ಮತ್ತು ಪಿಎನ್‌ಜಿಯನ್ನು ಅಗ್ಗವಾಗಿ ಪಡೆಯುವುದು ಹೇಗೆ ?
1. ದೇಶೀಯ ಪಿಎನ್‌ಜಿ ಗ್ರಾಹಕರು ಹೆಚ್ಚಿದ ಬೆಲೆಯಿಂದ ಪರಿಹಾರ ಪಡೆಯಲು ಬಯಸಿದರೆ, ಅವರು ಐಜಿಎಲ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ಈ ಆ್ಯಪ್ ಮೂಲಕ ಅವರು ಸ್ವಯಂ ಬಿಲ್ಲಿಂಗ್ ಆಯ್ಕೆಯನ್ನು ಆರಿಸಿದರೆ, ನಂತರ ಅವರಿಗೆ 15 ರೂ. ಇನ್ಸೆಂಟಿವ್ ಸಿಗಲಿದೆ.
2. ಸಿಎನ್‌ಜಿ ಬೆಲೆ ಏರಿಕೆಯ ಬಗ್ಗೆ ಆತಂಕದಲ್ಲಿರುವವರಿಗೆ, ಐಜಿಎಲ್ (IGL) ಕೊಡುಗೆಯನ್ನು ಸಹ ತಂದಿದೆ. ನಾನ್ ಪೀಕ್ ಸಮಯದಲ್ಲಿ ಸಿಎನ್‌ಜಿ ತುಂಬಲು ನೀವು ಐಜಿಎಲ್‌ನ ನಿಲ್ದಾಣಕ್ಕೆ ಹೋದರೆ (ಅಂದರೆ ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಮತ್ತು ರಾತ್ರಿ 12 ರಿಂದ ಬೆಳಿಗ್ಗೆ 6 ರವರೆಗೆ) ನಂತರ ನೀವು ಪ್ರತಿ ಕೆಜಿಗೆ 50 ಪೈಸೆ ಕ್ಯಾಶ್‌ಬ್ಯಾಕ್ (Cashback) ಪಡೆಯುತ್ತೀರಿ. ಈ ಕ್ಯಾಶ್‌ಬ್ಯಾಕ್ ಪಡೆಯಲು, ನೀವು ಐಜಿಎಲ್ ಸ್ಮಾರ್ಟ್ ಕಾರ್ಡ್‌ಗಳೊಂದಿಗೆ ಪಾವತಿ ಮಾಡಬೇಕು.
3. ದೆಹಲಿ-ಎನ್‌ಸಿಆರ್‌ನಲ್ಲಿ ಸಿಎನ್‌ಜಿ ಬೆಲೆಗಳು ಖಂಡಿತವಾಗಿಯೂ ಹೆಚ್ಚಿವೆ, ಆದರೆ ಗುರುಗ್ರಾಮ್‌ನಲ್ಲಿ ದರಗಳನ್ನು ಹೆಚ್ಚಿಸಲಾಗಿಲ್ಲ, ಬೆಲೆಗಳು ಪ್ರತಿ ಕೆ.ಜಿ.ಗೆ 53.40 ರೂ. ಆದ್ದರಿಂದ ದೆಹಲಿಗೆ ಹೋಲಿಸಿದರೆ ಗುರುಗ್ರಾಮ್‌ನಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 10 ರೂ. ದುಬಾರಿಯಾಗಲಿದೆ.

ಇದನ್ನೂ ಓದಿ - ಅಗ್ಗದ ಇಂಧನಕ್ಕಾಗಿ ಮೋದಿ ಸರ್ಕಾರದ ದೊಡ್ಡ ಯೋಜನೆ, ರೈತರಿಗೆ ಸಿಗಲಿದೆ ಅಪಾರ ಲಾಭ

ವೈಮಾನಿಕ ಇಂಧನವು ಸಹ ದುಬಾರಿಯಾಗುತ್ತದೆ :
ಏವಿಯೇಷನ್ ​​ಟರ್ಬೈನ್ ಇಂಧನ- ಎಟಿಎಫ್ (Aviation Turbine Fuel- ATF) ಸಹ ಸೋಮವಾರ 6.5% ನಷ್ಟು   ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯೇ ಇದಕ್ಕೆ ಕಾರಣ. ಅದೇ ಸಮಯದಲ್ಲಿ, ಸಾರ್ವಜನಿಕ ವಲಯ ಇಂಧನ ಕಂಪನಿಗಳು ನೀಡಿರುವ ಅಧಿಸೂಚನೆಯ ಪ್ರಕಾರ, ಎಟಿಎಫ್ ಬೆಲೆಯನ್ನು ಪ್ರತಿ ಕಿಲೋಲೀಟರ್‌ಗೆ 3,663 ರೂ.ಗಳಿಂದ ಹೆಚ್ಚಿಸಲಾಗಿದೆ, ಅಂದರೆ 6.5 ಶೇಕಡಾ ಹೆಚ್ಚಿಸಲಾಗಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಫೆಬ್ರವರಿಯ ನಂತರ ಜೆಟ್ ಇಂಧನದ ಬೆಲೆಗಳು (Jet Fuel) ಇದು ಮೂರನೇ ಬಾರಿಗೆ ಏರಿಕೆ ಕಂಡಿದೆ. ಬದಲಾವಣೆಯ ನಂತರ, ವಿಮಾನ ಇಂಧನದ ಬೆಲೆ ಈಗ ದೆಹಲಿಯಲ್ಲಿ ಪ್ರತಿ ಕಿಲೋಲೀಟರ್‌ಗೆ 59,400.91 ರೂ. ಫೆಬ್ರವರಿ 16 ರಂದು ವಿಮಾನ ಇಂಧನದ ಬೆಲೆಯನ್ನು ಶೇಕಡಾ 3.6 ರಷ್ಟು ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ, ಫೆಬ್ರವರಿ 1 ರಂದು ವಿಮಾನ ಇಂಧನದ ಬೆಲೆಯನ್ನು ಪ್ರತಿ ಕಿಲೋಲೀಟರ್‌ಗೆ 3,246.75 ರೂ.ಗಳಷ್ಟು ಹೆಚ್ಚಿಸಲಾಗಿದೆ. ಕಚ್ಚಾ ತೈಲ ಸೋಮವಾರ ಬ್ಯಾರೆಲ್‌ಗೆ $ 65.49 ಗಳಿಗೆ ವಹಿವಾಟು ನಡೆಸುತ್ತಿದೆ. ಇದು ಒಂದು ವರ್ಷದಲ್ಲಿ ಅದರ ಅತ್ಯುನ್ನತ ಮಟ್ಟವಾಗಿದೆ.

ಇದನ್ನೂ ಓದಿ - ಅಗ್ಗದ ದರದಲ್ಲಿ ಇಂಧನ ನೀಡಲು Modi Govt ಮಾಡಿದೆ ಈ ಪ್ಲಾನ್, ರೈತರಿಗೆ ಜಬರ್ದಸ್ತ್ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News