ನವದೆಹಲಿ : ರಾಯಲ್ ಎನ್‌ಫೀಲ್ಡ್ (Royal Enfield) ಭಾರತದ ಮೋಟಾರ್‌ಸೈಕಲ್ ವಿಭಾಗದಲ್ಲಿ ಭಾರೀ ಹೆಸರು ಮಾಡಿದೆ. ಇದಕ್ಕೆ ಟಕ್ಕರ್ ನೀಡುವ ಸಲುವಾಗಿ, ಬಜಾಜ್ ಮತ್ತು ಟ್ರಯಂಫ್ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಅನೇಕ ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ರಾಯಲ್ ಎನ್‌ಫೀಲ್ಡ್ 2022 ರಲ್ಲಿ, 4-5 ಹೊಸ ಬೈಕ್‌ಗಳನ್ನು ತರಲು ಹೊರಟಿದೆ. ಅವುಗಳಲ್ಲಿ ಒಂದು ಹಂಟರ್ 350. ಇದನ್ನು ಮೆಟಿಯೋರ್ 350 ರ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇತ್ತೀಚೆಗೆ, ಈ ಮೋಟಾರ್‌ಸೈಕಲ್‌ನ ಟೆಸ್ಟಿಂಗ್ ಮಾಡೆಲ್ (Motor cycle testing model) ಅನ್ನು ಪರಿಚಯಿಸಲಾಗಿದೆ.
ಮೆಟಿಯೋರ್ 350 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣ :
ಹೊಸ ಮೋಟಾರ್‌ಸೈಕಲ್ ಅನ್ನು ಮೆಟಿಯರ್ 350 ನ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತಿದೆ. ಅದರ ಎಂಜಿನ್ ಅನ್ನು ಅದೇ ಮೋಟಾರ್‌ಸೈಕಲ್‌ನಿಂದ ತೆಗೆದುಕೊಳ್ಳಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350ಯನ್ನು (Royal enfield hunter 350) J-ಪ್ಲಾಟ್‌ಫಾರ್ಮ್‌ನಲ್ಲಿ 349 cc ಎಂಜಿನ್‌ನೊಂದಿಗೆ ನಿರ್ಮಿಸುವ ಸಾಧ್ಯತೆಯಿದೆ. ಅದು 22 Bhp ಪವರ್ ಮತ್ತು 27 Nm ಪೀಕ್ ಟಾರ್ಕ್ ಅನ್ನು ಹೊಂದಿದೆ. ಕಂಪನಿಯು ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಬಹುದು. ಹೊಸ ಮೋಟಾರ್ ಸೈಕಲ್ ಅತ್ಯಂತ ಸಲೀಸಾಗಿ 0-100 ಕಿಮೀ/ಗಂಟೆಗೆಕ್ರಮಿಸುತ್ತದೆ ಎನ್ನುವುದನ್ನು ಟೆಸ್ಟಿಂಗ್ ವೀಡಿಯೊ ದಲ್ಲಿ ತೋರಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಹೊಸ ಮೋಟಾರ್‌ಸೈಕಲ್‌ನ ತೂಕವು ಮೆಟಿಯೋರ್ 350 ಗಿಂತ ಕಡಿಮೆ ಇರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : Biggest Bank Scam: 28 ಬ್ಯಾಂಕ್‌ಗಳಿಗೆ 22,842 ಕೋಟಿ ವಂಚಿಸಿದ ಕಂಪನಿ! ಸಿಬಿಐ ಪ್ರಕರಣ ದಾಖಲು
ಈ ವಿಭಾಗದಲ್ಲಿ ಹಂಟರ್ 350 ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್?
2021 ರ ಮಾದರಿಗಳಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 (Royal enfield classic) ಮತ್ತು ಹಿಮಾಲಯನ್‌ನಲ್ಲಿ ನೀಡಲಾಗಿರುವಂತೆ, ಹಂಟರ್ 350 ಸೆಮಿ-ಡಿಜಿಟಲ್ ಕನ್ಸೋಲ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್‌ನೊಂದಿಗೆ ಬರಲಿದೆ. ಹಂಟರ್ 350 ಈ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಬೈಕು ಉತ್ತಮವಾಗಿ ಕಾಣುವ LED DRL ಗಳು ಮತ್ತು ಬ್ಲಿಂಕರ್‌ಗಳನ್ನು ಹೊಂದಿರುವುದಿಲ್ಲ. ದೇಶದಲ್ಲಿ ಈ ಬೈಕಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ ಸುಮಾರು 1.70 ಲಕ್ಷ ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : Indias Biggest Fraud: ಇದುವರೆಗಿನ ಅತಿ ದೊಡ್ಡ ಬ್ಯಾಂಕ್ ಫ್ರಾಡ್! 28 ಬ್ಯಾಂಕುಗಳಿಗೆ 22,842 ಕೋಟಿ ರೂ.ಗಳ ಪಂಗನಾಮ ಹಾಕಿದೆ ಈ ಕಂಪನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.