100KM ಗಿಂತ ಹೆಚ್ಚು ಮೈಲೇಜ್ ಹೊಂದಿರುವ ಅಗ್ಗದ ಬೈಕ್ ಗಳಿವು .!

Best Mileage Bikes In India:ಹೆಚ್ಚು ಮೈಲೇಜ್ ನೀಡುವ ಬೈಕ್ ಖರೀದಿಸುವ ಯೋಚನೆ ಇದ್ದರೆ,  ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ 4 ಬೈಕ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. 

Written by - Ranjitha R K | Last Updated : Sep 21, 2022, 11:44 AM IST
  • ಅಗ್ಗದ ಬೆಲೆಗೆ ಸಿಗುವ ಸೂಪರ್ ಬೈಕ್ ಗಳಿವು
  • ಕಡಿಮೆ ದರ ಬೈಕ್ ಗಳ ಮಾಹಿತಿ ಇಲ್ಲಿದೆ
  • ಈ ಬೈಕ್ ಗಳನ್ನೂ ಖರೀದಿಸಿದರೆ ಹಣ ಉಳಿತಾಯ ಪಕ್ಕಾ
100KM ಗಿಂತ ಹೆಚ್ಚು ಮೈಲೇಜ್ ಹೊಂದಿರುವ ಅಗ್ಗದ ಬೈಕ್ ಗಳಿವು .!   title=
Best Mileage Bikes In India (file photo)

Best Mileage Bikes In India: ಹಬ್ಬದ ಸೀಸನ್ ಸಮೀಪಿಸುತ್ತಿದೆ. ಹಬ್ಬ ಸಮೀಪಿಸುತ್ತಿದ್ದಂತೆಯೇ ಎಲ್ಲಾ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಲಾಗುತ್ತದೆ.  ಹೆಚ್ಚು ಮೈಲೇಜ್ ನೀಡುವ ಬೈಕ್ ಖರೀದಿಸುವ ಯೋಚನೆ ಇದ್ದರೆ,  ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ 4 ಬೈಕ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದರಿಂದ ಬೈಕು ಖರೀದಿಸುವ ಆಸೆ ನೆರವೇರುವುದಲ್ಲದೆ, ಹೆಚ್ಚಿನ ಹಣವನ್ನು ಉಳಿಸುವುದು ಕೂಡಾ  ಸಾಧ್ಯವಾಗುತ್ತದೆ. 

ಟಿವಿಎಸ್ ಸ್ಪೋರ್ಟ್ :
ರೂಪಾಂತರಕ್ಕೆ ಅನುಗುಣವಾಗಿ ಟಿವಿಎಸ್ ಸ್ಪೋರ್ಟ್ ಬೆಲೆ 60,000 ರೂ.ನಿಂದ 66 ಸಾವಿರದವರೆಗೆ ಇರುತ್ತದೆ. ಇದು ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್ ಆಗಿದೆ. ಇದು 8.18bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ 109cc ಎಂಜಿನ್ ಪಡೆಯುತ್ತದೆ. TVS ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ  ವಿಮರ್ಶೆಗಳ ಪ್ರಕಾರ, ಈ ಬೈಕ್ 110kmವರೆಗೆ ಮೈಲೇಜ್ ನೀಡುತ್ತದೆ. ಅದರ ನಿರ್ವಹಣಾ ವೆಚ್ಚ ತುಂಬಾ ಕಡಿಮೆ. 

ಇದನ್ನೂ ಓದಿ : MG Cars Price Hike: ಗ್ರಾಹಕರಿಗೆ ದೊಡ್ಡ ಹೊಡೆತ! ಕಾರುಗಳ ಬೆಲೆ ಹೆಚ್ಚಿಸಿದ ಎಂಜಿ

ಹೀರೋ ಹೆಚ್ ಎಫ್ ಡಿಲಕ್ಸ್ : 
ಹೀರೋ ಹೆಚ್ ಎಫ್ ಡಿಲಕ್ಸ್  ಬೆಲೆ 56,070 ರೂಪಾಯಿಯಿಂದ ಪ್ರಾರಂಭವಾಗಿ, 63,790 ರೂ.ವರೆಗೆ ಇರುತ್ತದೆ. ಇದು 5.9kw ಗರಿಷ್ಠ ಶಕ್ತಿ ಮತ್ತು 8.5Nm ಪೀಕ್ ಟಾರ್ಕ್ ಉತ್ಪಾದಿಸುವ 97.2cc ಎಂಜಿನ್ ಹೊಂದಿದೆ. ಕಂಪನಿಯ ಇದು 100km ಗಿಂತ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಬಜಾಜ್ ಪ್ಲಾಟಿನಾ 100 :
ಬಜಾಜ್ ಪ್ಲಾಟಿನಾ 100ರ  ಬೆಲೆ 53 ಸಾವಿರ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು 102 cc 4-ಸ್ಟ್ರೋಕ್, DTS-i, ಸಿಂಗಲ್ ಸಿಲಿಂಡರ್ ಎಂಜಿನ್ 5.8 kW ಗರಿಷ್ಠ ಶಕ್ತಿ ಮತ್ತು 8.3 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದು 70KMಗಿಂತ ಹೆಚ್ಚು ಮೈಲೇಜ್ ನೀಡಬಲ್ಲದು. ಇದರ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ.

ಇದನ್ನೂ ಓದಿ : Common KYC: ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ ವಿತ್ತ ಸಚಿವೆ, ಹೊಸ ವರ್ಷದಿಂದ ಲಭ್ಯವಾಗಲಿದೆ ಈ ಸೇವೆ

ಬಜಾಜ್  ಸಿಟಿ 110ಎಕ್ಸ್  :
ಬಜಾಜ್  ಸಿಟಿ 110ಎಕ್ಸ್ ನ ಬೆಲೆ 66 ಸಾವಿರ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಬಜಾಜ್  ಸಿಟಿ 110ಎಕ್ಸ್ 115.45ಸಿಸಿ  4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ಚಾಲಿತವಾಗಿದ್ದು,  8.6 PS ಗರಿಷ್ಠ ಶಕ್ತಿ ಮತ್ತು 9.81 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 4-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ  ಹೊಂದಿದೆ. ಇದು 70 ಕಿಮೀಗಳಿಗಿಂತ ಹೆಚ್ಚು ಮೈಲೇಜ್ ನೀಡುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News